ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶ; ಸಂಕ್ಷಿಪ್ತ ಸುದ್ದಿ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಅಬು ಹಮ್ಜಾ ಕೋರ್ಟ್‌ಗೆ ಹಾಜರು
ನ್ಯೂಯಾರ್ಕ್ (ಪಿಟಿಐ): ಭಯೋತ್ಪಾದನೆಯ ಆರೋಪಕ್ಕೆ ಗುರಿಯಾಗಿ ಬ್ರಿಟನ್‌ನಿಂದ ಅಮೆರಿಕಗೆ ಹಸ್ತಾಂತರವಾಗಿರುವ ಅಬು ಹಮ್ಜಾ ಅಲ್- ಮಸ್ರಿಯನ್ನು ಇಲ್ಲಿನ ನ್ಯಾಯಾಲಯಕ್ಕೆ ಶನಿವಾರ ಹಾಜರು ಪಡಿಸಲಾಯಿತು. ನ್ಯಾಯಾಲಯವು ಮಂಗಳವಾರದವರೆಗೆ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಆತನ ವಿರುದ್ಧ ಅ. 9ರಂದೇ ಅಧಿಕೃತವಾಗಿ ದೋಷಾರೋಪಪಟ್ಟಿ ದಾಖಲಾಗಲಿದೆ.

ಅಪಹರಣದ ಮತ್ತು ಅಲ್ ಖೈದಾ ಸಂಘಟನೆಗೆ ಸಾಧನ- ಸಲಕರಣೆಗಳನ್ನು ಪೂರೈಕೆ ಮಾಡಿದ ಆರೋಪವನ್ನು ಹಮ್ಜಾ ವಿರುದ್ಧ ಮಾಡಲಾಗಿದೆ. ಬ್ರಿಟನ್‌ನಲ್ಲಿದ್ದ ಈತನನ್ನು ತನ್ನ ವಶಕ್ಕೆ ನೀಡುವಂತೆ ಅಮೆರಿಕ ಕೋರಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಅಮೆರಿಕಗೆ ಶನಿವಾರವಷ್ಟೇ ಕರೆತರಲಾಯಿತು.

ತ್ರಿಲೋಚನ್ ಸಿಂಗ್ ಸಹಾನಿಗೆ ಗೌರವ
ಲಂಡನ್ (ಪಿಟಿಐ): ಮಾಜಿ ರಾಜತಾಂತ್ರಿಕ ಅಧಿಕಾರಿ, ಉದ್ಯಮಿ ತ್ರಿಲೋಚನ್ ಸಿಂಗ್ ಸಹಾನಿ ಅವರು ಭಾರತ ಮತ್ತು ಬ್ರಿಟನ್‌ಗೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ `ಪ್ರೈಡ್ ಆಫ್ ಇಂಡಿಯಾ~ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಭಾರತದ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಎಸ್. ಎಸ್. ಸಿದ್ದು ಅವರು ಸಹಾನಿ ಅವರಿಗೆ ಪ್ರಶಸ್ತಿ ಪತ್ರ ಮತ್ತು ಚಿನ್ನದ ಪದಕವನ್ನು ನೀಡಿ ಗೌರವಿಸಿದರು. ಬ್ರಿಟನ್‌ನ ಪಂಜಾಬ್ ಸಮಾಜ ಈ ಕಾರ್ಯಕ್ರಮವನ್ನು ಏರ್ಪಡಿಸಿತ್ತು.

ಟ್ವಿಟರ್‌ನಲ್ಲಿ ಕ್ಯಾಮೆರಾನ್
ಲಂಡನ್ (ಪಿಟಿಐ): ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮೆರಾನ್ ಅವರು ಜನಪ್ರಿಯ ಕಿರು ಬ್ಲಾಗಿಂಗ್ ತಾಣ ಟ್ವಿಟರ್‌ನಲ್ಲಿ ಖಾತೆ ತೆರೆದಿದ್ದಾರೆ. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷದ ಮುಖಂಡರಾಗಿ ದೇಶದ ನಾಗರಿಕರನ್ನು ತಲುಪುವ ಯತ್ನವಾಗಿ ಅವರು ಟ್ವಿಟರ್‌ನಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT