ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದೇಶಿ ತಂತ್ರಜ್ಞಾನ ಅಳವಡಿಕೆಗೆ ಸಜ್ಜು

ಬೈರಮಂಗಲ ಜಲಾಶಯ ಶುದ್ಧೀಕರಣ
Last Updated 4 ಡಿಸೆಂಬರ್ 2013, 9:28 IST
ಅಕ್ಷರ ಗಾತ್ರ

ರಾಮನಗರ: ಬಿಡದಿ ಹೋಬಳಿಯ ಬೈರಮಂಗಲ ಜಲಾಶಯದ ಕೊಳಚೆ ನೀರನ್ನು ಸಂಪೂರ್ಣ ಶುದ್ಧೀಕರಿಸುವ ಹಾಗೂ ಜಲಾಶಯ ಸುತ್ತಮುತ್ತಲಿನ ಭಾಗಕ್ಕೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ನಿಟ್ಟಿನಲ್ಲಿ ಸಮಗ್ರ ಯೋಜನೆಯೊಂದನ್ನು ರಾಮನಗರ ಜಿಲ್ಲಾಡಳಿತ ರೂಪಿಸಿದೆ.

ಬಹುತೇಕ ಕಲುಷಿತಗೊಂಡಿರುವ ಬೈರಮಂಗಲ ಜಲಾಶಯವನ್ನು ಶುದ್ಧ ಗೊಳಿಸುವ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಈ ಯೋಜನೆಯ ಪ್ರಮುಖ ಉದ್ದೇಶ.

ವಿದೇಶಿ ಯಂತ್ರ: ಇದಕ್ಕಾಗಿ ವಿದೇಶಿ ತಂತ್ರಜ್ಞಾನವನ್ನು ಬಳಸಲು ಜಿಲ್ಲಾಡಳಿತ ಮುಂದಾಗಿದೆ. ಅತ್ಯಾಧುನಿಕ ಮತ್ತು ಬಹು ಸಾಮರ್ಥ್ಯದ ಯಂತ್ರವನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ನಿಟ್ಟಿನಲ್ಲಿಯೂ ಯೋಚಿಸಿದೆ. ‘ಜಲಾ ಶಯದ 60 ಅಡಿ ಆಳಕ್ಕಿಳಿದು ಈ ಯಂತ್ರ ಕೊಳಚೆಯನ್ನು ಎತ್ತುತ್ತದೆ. ಅಮೆರಿಕ, ಯುರೋಪ್‌ ದೇಶಗಳ 500 ರಿಂದ 600 ಕಡೆಗಳಲ್ಲಿ ಈ ಯಂತ್ರ ವನ್ನು ಬಳಸಿಕೊಂಡು ಕೊಳಚೆಯನ್ನು ನಿರ್ಮೂಲನೆ ಮಾಡಿದೆ’ ಎಂದು ಜಿಲ್ಲಾ ಧಿಕಾರಿ ಡಾ.ಡಿ.ಎಸ್‌.ವಿಶ್ವ ನಾಥ್‌ ‘ಪ್ರಜಾವಾಣಿ’ ತಿಳಿಸಿದರು.

‘ಈ ಅತ್ಯಾಧುನಿಕ ತಂತ್ರಜ್ಞಾನದ ಯಂತ್ರ ಬಳಸುವ ಏಜೆನ್ಸಿ ಚೆನ್ನೈನ ಲ್ಲಿದ್ದು, ಅದರ ಪ್ರತಿನಿಧಿಯನ್ನು ಸಂಪ ರ್ಕಿಸಿ ಮಾತುಕತೆ ನಡೆಸಿರುವೆ. ಈ ಯಂತ್ರ ಪ್ರತಿ ದಿನ ಕಾರ್ಯ ನಿರ್ವ ಹಿಸುವ 8ರಿಂದ 10 ಗಂಟೆ ಅವಧಿಗೆ ಇಂತಿಷ್ಟು ಹಣವನ್ನು ನಿಗದಿಪಡಿಸ ಲಾಗುತ್ತದೆ. ಹಾಗಾಗಿ ಬೈರಮಂಗಲ ಜಲಾಶಯದ ಕೊಳೆ ತೆಗೆಯಲು ಎಷ್ಟು ದಿನ ಹಾಗೂ ಅಂದಾಜು ವೆಚ್ಚ ಎಷ್ಟಾಗ ಬಹುದು’ ಎಂಬುದುನ್ನು ಲೆಕ್ಕ ಹಾಕಿ ವರದಿ ನೀಡುವಂತೆ ಏಜೆನ್ಸಿಯ ಪ್ರತಿ ನಿಧಿಗೆ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಇದಕ್ಕೆ ಪೂರಕವಾಗಿ ಬೆಂಗಳೂರಿ ನಿಂದ ಹರಿದು ಬರುವ ವೃಷಭಾವತಿ ಕಣಿವೆಯ ನೀರನ್ನು ಶುದ್ಧೀಕರಿಸಿ ಬಿಡು ವಂತೆ ಬೆಂಗಳೂರು ಜಲಮಂಡಳಿಗೆ ಸೂಚಿಸಲಾಗಿದೆ. 2015ರವೇಳೆಗೆ ಅಗ ತ್ಯವಿರುವಷ್ಟು ಶುದ್ಧೀಕರಣ ಘಟಕಗ ಳನ್ನು ನಿರ್ಮಿಸಿ, 300 ದಶಲಕ್ಷ ಲೀಟರ್‌ಗೂ ಹೆಚ್ಚು ನೀರನ್ನು ಶುದ್ಧೀ ಕರಿಸಿ ಬಿಡುವುದಾಗಿ ಜಲಮಂಡಳಿ ಭರ ವಸೆ ನೀಡಿದೆ. ಈ ಎರಡು ಕಾರ್ಯಗಳು ಪೂರ್ಣಗೊಂಡರೆ ಕಲುಷಿತಗೊಂಡಿರುವ ಬೈರಮಂಗಲ ಜಲಾಶಯಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದು ಅವರು ವಿವರಿಸಿದರು.

ಕಾವೇರಿ ನೀರು: ಬೆಂಗಳೂರು ಜಲಮಂ ಡಳಿ ಕಾವೇರಿ ನೀರನ್ನು ಬಿಡದಿ ಬಳಿಯ ಟೊಯೊಟಾ ಕಂಪೆನಿಗೆ ಸರಬರಾಜು ಮಾಡುತ್ತಿದೆ. ಅಲ್ಲಿಂದ ಬೈರಮಂಗಲ ಜಲಾಶಯ ವ್ಯಾಪ್ತಿಯಲ್ಲಿ ತೊಂದರೆಗೆ ಒಳಗಾಗಿರುವ ಸುಮಾರು 30 ಗ್ರಾಮ ಗಳಿಗೆ ಕಾವೇರಿ ನೀರು ಸರಬರಾಜು ಮಾಡುವಂತೆ ಕೋರಿ ಪ್ರಸ್ತಾವ ಕಳುಹಿ ಸಲಾಗಿದೆ. ಅಲ್ಲದೆ ಎನ್‌ಆರ್‌ ಡಬ್ಲ್ಯುಇಜಿ ಯೋಜನೆಯಲ್ಲಿ 43.75 ಕೋಟಿ ವೆಚ್ಚದಲ್ಲಿ ಬೈರಮಂಗಲ ಸುತ್ತಲಿನ 35 ಗ್ರಾಮಗಳಲ್ಲಿ ಶುದ್ಧೀ ಕರಣ ಘಟಕಗಳನ್ನು (ಆರ್‌.ಒ ಯುನಿಟ್‌) ನಿರ್ಮಿಸಲು ಜಿಲ್ಲಾ ಪಂಚಾ ಯಿತಿ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಧಿಕಾರಿ ಮಾಹಿತಿ ನೀಡಿದರು.

ಇದರೊಂದಿಗೆ ಶಾಸಕರು ಮತ್ತು ಸಂಸದರ ನಿಧಿಯಿಂದ ಕೆಲವೆಡೆ ಶುದ್ಧ ನೀರಿನ ಘಟಕಗಳನ್ನು ನಿರ್ಮಿಸಲಾ ಗುತ್ತಿದ್ದು, ಇದರಿಂದ ಈ ಭಾಗದಲ್ಲಿ ಕೆಲವೇ ದಿನಗಳಲ್ಲಿ ಕುಡಿಯಲು ಯೋಗ್ಯವಾದ ನೀರು ಲಭ್ಯವಾಗಲಿದೆ ಎಂದು ಅವರು ತಿಳಿಸಿದರು.

ಕೆರೆಗಳಿಗೆ ಹರಿಸಲಾಗುವುದು: ಬೈರ ಮಂಗಲ ಜಲಾಶಯ ಸಂಪೂರ್ಣ  ಶುಚಿಗೊಂಡ ನಂತರ, ಅದರ ಹತ್ತಿರದ 33 ಸಣ್ಣಪುಟ್ಟ ಕೆರೆಗಳಿಗೆ ಪೈಪ್‌ಲೈನ್‌ ಮೂಲಕ ಗುರುತ್ವಾಕರ್ಷಣಾ ಶಕ್ತಿಯಿಂದ ನೀರು ತುಂಬಿಸುವ ಚಿಂತನೆಯೂ ಇದೆ. ಇದು ಸಾಧ್ಯವಾದರೆ ಈ ಭಾಗದ ಕೃಷಿ ಮತ್ತು ತೋಟಗಾರಿಕಾ ಚಟುವಟಿಕೆಗೆ ನೆರವಾ ಗುತ್ತದೆ ಎಂದರು.

ಅಲ್ಲದೆ ಜಿಲ್ಲಾ ವ್ಯಾಪ್ತಿಯಲ್ಲಿನ ಕೈಗಾರಿಕಾ ತ್ಯಾಜ್ಯದ ನೀರು ವೃಷಭಾವತಿ ನದಿ ಅಥವಾ ಬೈರಮಂಗಲ ಜಲಾಶಯ ಸೇರದಂತೆ ಎಚ್ಚರವಹಿಸಲು ಕಾರ್ಯ ಪಡೆ ರಚಿಸಲಾಗಿದೆ. ಯಾವುದೇ ಕೈಗಾರಿಕೆಯಿಂದ ತ್ಯಾಜ್ಯ ನೀರಿಗೆ ಬರುತ್ತಿ ದ್ದರೆ, ಅಂತಹ ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT