ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ಪ್ರತಿಭಟನೆ

ಇಸ್ಕಾನ್‌ ಊಟದ ಕೂಪನ್‌
Last Updated 3 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇಸ್ಕಾನ್‌ನ ‘ಅಕ್ಷಯ­ಪಾತ್ರ’ ಯೋಜನೆಯ ಊಟದ ಕೂಪನ್‌ಗಳನ್ನು ತಿಂಗಳ ಲೆಕ್ಕದಲ್ಲಿ ತೆಗೆದುಕೊಳ್ಳಬೇಕೆಂಬ ಹೊಸ ನಿಯಮ ವಿರೋಧಿಸಿ ಅಖಿಲ ಭಾರತ ಪ್ರಜಾ­ಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಬೆಂಗ­ಳೂರು ವಿಶ್ವವಿದ್ಯಾಲಯದ ಜ್ಞಾನ­ಭಾರತಿ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ  ಸುದ್ದಿ ತಿಳಿದ ಕೂಡಲೇ ಕುಲಸಚಿವರಾದ ಪ್ರೊ.ಕೆ.ಸೀತಮ್ಮ ಅವರು ಇಸ್ಕಾನ್‌ ಪ್ರತಿನಿಧಿಗಳನ್ನು ಮೊಬೈಲ್‌ ಮೂಲಕ ಸಂಪರ್ಕಿಸಿ, ‘ಹಾಲಿ ವ್ಯವಸ್ಥೆಯಂತೆ ದಿನದ ಲೆಕ್ಕದಲ್ಲೇ ಕೂಪನ್‌ಗಳನ್ನು ತೆಗೆದು­ಕೊಳ್ಳಲು ಅವಕಾಶ ಕೊಡಿ. ತಿಂಗಳ ಲೆಕ್ಕದಲ್ಲಿ ಕೂಪನ್‌ಗಳನ್ನು ತೆಗೆದು­ಕೊಳ್ಳಬೇಕೆಂಬ ನಿಯಮವನ್ನು ಕೈಬಿಡಿ’ ಎಂದು ನಿರ್ದೇಶನ ನೀಡಿದರು. ನಂತರ  ಪ್ರತಿಭಟನೆ ಕೈಬಿಡಲಾಯಿತು.

ಸಂಘಟನೆಯ ಮುಖಂಡ ರವಿನಂದನ್‌ ಮಾತನಾಡಿ, ‘ಊಟಕ್ಕೆ ಪ್ರತಿ ವಿದ್ಯಾರ್ಥಿಗೆ ವಿ.ವಿ.ಯು ₨ 10 ನೀಡುತ್ತಿದೆ. ವಿದ್ಯಾರ್ಥಿ ಪಾವತಿಸ­ಬೇಕಾದ ದರ­ವನ್ನು ₨ 5ರಿಂದ 7ಕ್ಕೆ ಹೆಚ್ಚಿಸಲಾಗಿದೆ. ಏಕಪಕ್ಷೀಯವಾಗಿ ದರ ಏರಿಸುವುದರ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಹಮ್ಮಿಕೊಳ್ಳ­ಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT