ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿಗಳ ‘ಪ್ರಯೋಗ’– ಸಹಪಾಠಿ ಕಣ್ಣಿಗೆ ಕುತ್ತು!

Last Updated 21 ಸೆಪ್ಟೆಂಬರ್ 2013, 9:29 IST
ಅಕ್ಷರ ಗಾತ್ರ

ಮಂಗಳೂರು:ನಗರದ ಜೆಪ್ಪುವಿನ ಸೇಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳ ‘ಪ್ರಯೋಗ’ದ ಉತ್ಸಾಹದಿಂದಾಗಿ 12 ವರ್ಷದ ವಿದ್ಯಾರ್ಥಿಯೊಬ್ಬ ದೃಷ್ಟಿಯನ್ನೇ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವುದು ಶುಕ್ರವಾರ ಬೆಳಕಿಗೆ ಬಂದಿದೆ.

ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಅಮೋಘ್ ಕಣ್ಣುಗಳಿಗೆ ಗಂಭೀರ ಗಾಯ­ಗಳಾಗಿದ್ದು, ಆಸ್ಪತ್ರೆಗೆ ದಾಖಲಿಸ­ಲಾಗಿದೆ.
ಶಾಲೆಯ ಕೆಲವು ವಿದ್ಯಾರ್ಥಿಗಳು ಸೇರಿ ಪ್ರಯೋಗಾಲಯದಿಂದ ರಾಸಾಯನಿಕದ ಬಾಟಲಿಯೊಂದನ್ನು ಕದ್ದು ಶಾಲೆಯ ಆವರಣದಲ್ಲಿರುವ ಶೌಚಾಲಯದ ಬಳಿ ಸೋಮವಾರ ‘ಪ್ರಯೋಗ’ ನಡೆಸಿದ್ದರು. ಆ ವೇಳೆ ಸಣ್ಣ ಮಟ್ಟಿನ ಸ್ಫೋಟ ಸಂಭವಿಸಿದ ಪರಿಣಾಮ ವಿದ್ಯಾರ್ಥಿ ಅಮೋಘ್‌ ಕಣ್ಣು ಉರಿಯಿಂದ ಬಳಲಿದ್ದ. ಆತನನ್ನು ತಕ್ಷಣ ಖಾಸಗಿ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

‘ವಿದ್ಯಾರ್ಥಿಯ ಕಣ್ಣು ಯಾವ ಸ್ಥಿತಿಯಲ್ಲಿದೆ ಎಂದು ಈ ಹಂತದಲ್ಲೇ ಹೇಳಲು ಸಾಧ್ಯವಿಲ್ಲ. ಚಕಿತ್ಸೆಯ ಬಳಿಕ ಕಣ್ಣು ಸರಿಹೊಂದುವ ಸಾಧ್ಯತೆಯೂ ಇದೆ’ ಎಂದು ವೈದ್ಯರು ತಿಳಿಸಿದ್ದಾರೆ.  ವಿದ್ಯಾರ್ಥಿ ಅಮೋಘ್ ಸ್ಥಳೀಯ ಟೈಲರ್ ಅಶೋಕ್ – ಆಶಾ ದಂಪತಿಯ ಪುತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT