ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ಗೆ ಒತ್ತಾಯ: ಮೆಸ್ಕಾಂ ಕಚೇರಿ ಮುತ್ತಿಗೆ

Last Updated 7 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ


ಲಿಂಗದಹಳ್ಳಿ (ತರೀಕೆರೆ): ಲಿಂಗದಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ಅಭಾವದಿಂದ ಜನ ಜೀವನ ಅಸ್ತವ್ಯಸ್ತವಾಗಿದೆ ಎಂದು ದೂರಿದ ನೂರಾರು ರೈತರು ಲಿಂಗದಹಳ್ಳಿ ಮೆಸ್ಕಾಂ ಕಚೇರಿಗೆ ಸೋಮವಾರ ಮುತ್ತಿಗೆ ಹಾಕಿದರು.ಹುಲಿತ್ತಿಮ್ಮಾಪುರ, ಎಂಸಿಆರ್‌ಪಿ ಕಾಲೊನಿ, ಮಲ್ಲೇನಹಳ್ಳಿ, ದೊಡ್ಡ ನಿಂಗೇನಹಳ್ಳಿ, ಕೆಂಚಾಪುರಗೇಟ್, ಗುಳ್ಳದಮನೆ, ತ್ಯಾಗದಬಾಗಿ, ಮಲ್ಲಿಗೇನಹಳ್ಳಿ, ಸಿದ್ದಾಪುರ, ತ್ಯಾಗದಬಾಗಿ ತಾಂಡ್ಯ ಮತ್ತು ಕೆಂಚೇನಹಳ್ಳಿಯ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನಾಕಾರನ್ನು ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಗುಳ್ಳದಮನೆ ರಾಮಚಂದ್ರ, ಕಳೆದ ಮೂರು ವರ್ಷದಿಂದ ಪ್ರತಿದಿನ ಎರಡು ಗಂಟೆ ವಿದ್ಯುತ್ ಮಾತ್ರ ವಿತರಣೆಯಾಗುತ್ತಿದ್ದು, ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದರು.

ಲಿಂಗದಹಳ್ಳಿ ಭಾಗಕ್ಕೆ ಅಳವಡಿಸಿರುವ ವಿದ್ಯುತ್ ಪರಿವರ್ತಕ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಅಲ್ಲಿ ಹೊಸ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮೆಸ್ಕಾಂಗೆ ಹಲವು ಬಾರಿ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿಲ್ಲದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿತ್ತು. ಕಡೂರು ಮೆಸ್ಕಾಂ ಅಧಿಕಾರಿ ಕೆ.ಟಿ.ಕರಿಸಿದ್ದಯ್ಯ ಮತ್ತು ತರೀಕೆರೆ ಮೆಸ್ಕಾಂ ಎಇಇ ಪ್ರಕಾಶ್ ಮಾತನಾಡಿ, ಲಿಂಗದಹಳ್ಳಿ ಮುಖ್ಯ ವಿತರಣಾ ಘಟಕದಲ್ಲಿ 5 ಫೀಡರ್‌ಗಳಿದ್ದು, ಗ್ರಾಮಾಂತರ ಪ್ರದೇಶಕ್ಕೆ ಪ್ರತಿದಿನ 2 ಸಮಯ ವಿದ್ಯುತ್ ಒದಗಿಸಲಾಗುತ್ತಿರುವುದರಿಂದ ಪರಿವರ್ತಕಕ್ಕೆ ಹೆಚ್ಚಿನ ಹೊರೆ ಬೀಳುತ್ತಿದೆ. ಆದ್ದರಿಂದ ಹೊಸ ಪರಿವರ್ತಕ ಅಳವಡಿಸಲು ಟೆಂಡರ್ ಕರೆಯಲಾಗಿದೆ ಎಂದರು.ಮೆಸ್ಕಾಂ ಅಧಿಕಾರಿಗಳ ಸಮಜಾಯಿಷಿಗೆ ಮಣಿಯದ ರೈತರು ಮೆಸ್ಕಾಂ ಕಚೇರಿ ಎದುರು ಗಂಟೆ ರಸ್ತೆತಡೆ ನಡೆಸಿದರು.ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ, ಪುರಸಭೆ ಮಾಜಿ ಧ್ಯಕ್ಷ ಟಿ.ಆರ್.ಕೃಷ್ಣಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಯೋಗೀಶ್, ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ, ಎಸ್.ಕೆ.ಕೃಷ್ಣಪ್ಪ, ದೊಡ್ಡನಿಂಗೇನಹಳ್ಳಿ ಮಂಜುನಾಥ್, ಕುಮಾರಸ್ವಾಮಿ, ಟಿ.ವಿ.ಗಿರಿರಾಜ್, ಮತ್ತು ಹೋಬಳಿಯ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT