ಇನ್ನು ಉನ್ನತ ದರ್ಜೆಯ (ಬಿಜಿನೆಸ್ ಕ್ಲಾಸ್) ಪ್ರಯಾಣಕ್ಕೆ ವಿಮಾನ ಟಿಕೆಟ್ ದರದ ಶೇ 10ರಷ್ಟನ್ನು ಸೇವಾ ತೆರಿಗೆಯಾಗಿ ನಿಗದಿ ಮಾಡಲಾಗಿದೆ.
ಇದರಿಂದಾಗಿ ಉನ್ನತ ದರ್ಜೆಯಲ್ಲಿನ ವಿಮಾನ ಪ್ರಯಾಣಿಗರು ದೇಶೀಯ ಹಾಗೂ ವಿದೇಶಿ ಪ್ರಯಾಣಕ್ಕೆ ನೀಡಲಿರುವ ಸೇವಾ ತೆರಿಗೆ ವ್ಯತ್ಯಾಸ ರಹಿತವಾಗಲಿದೆ.
ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾಗೆ ಬಂಡವಾಳ ಹೂಡಿಕೆ ರೂಪದಲ್ಲಿ ಪ್ರಸಕ್ತ ಸಾಲಿಗೆ 1200 ಕೋಟಿ ರೂಪಾಯಿಯನ್ನು ಪ್ರಣವ್ ನೀಡಿದ್ದಾರೆ. ಈ ಮುನ್ನ 2009-10ರಲ್ಲಿ ಈ ಸಂಸ್ಥೆಗೆ ರೂ 800 ಕೋಟಿ ಹಾಗೂ 2010-11ರಲ್ಲಿ 1200 ಕೋಟಿ ರೂಪಾಯಿ ನೀಡಲಾಗಿತ್ತು.
ಒಟ್ಟಾರೆ, ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಯೋಜನೆ ಹಾಗೂ ಯೋಜನೇತರ ವೆಚ್ಚಕ್ಕಾಗಿ 2,393.88 ಕೋಟಿ ರೂಪಾಯಿ ತೆಗೆದಿರಿಸಲಾಗಿದೆ.