ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದದಲ್ಲಿ ಕೇರಳ ಸಿಪಿಎಂ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ತಿರುವನಂತಪುರ (ಐಎಎನ್‌ಎಸ್):  ಶಿಲುಬೆಗೆ ಏರುವ ಮುನ್ನ ಏಸು ಕ್ರಿಸ್ತ ತನ್ನ ಅನುಯಾಯಿಗಳೊಂದಿಗೆ ಮಾಡಿದ್ದ `ಲಾಸ್ಟ್ ಸಪ್ಪರ್~ (ಕೊನೆಯ ಊಟ)ನ ಚಿತ್ರವನ್ನು ರಾಜಕೀಯ ಕಾರಣಕ್ಕಾಗಿ ಬಳಸಿಕೊಂಡಿದ್ದಕ್ಕಾಗಿ ಕೇರಳ ಸಿಪಿಎಂ ಈಗ ವಿವಾದದಲ್ಲಿ ಸಿಲುಕಿದೆ.

ಸಿಪಿಎಂನ ಕಾರ್ಮಿಕ ವಿಭಾಗ ಈ ವಿವಾದಾತ್ಮಕ ಪೋಸ್ಟರ್ ಮುದ್ರಿಸಿದ್ದು, `ಲಾಸ್ಟ್ ಸಪ್ಪರ್~ ಸಮಯದಲ್ಲಿ ಏಸು ಕುಳಿತಿದ್ದ ಜಾಗದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಚಿತ್ರಿಸಲಾಗಿದೆ.
ಅನುಯಾಯಿಗಳು ಏಸುವನ್ನು ಸುತ್ತುವರಿದಂತೆ ಈ ಚಿತ್ರದಲ್ಲಿ ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ನರೇಂದ್ರ ಮೋದಿ, ರಾಹುಲ್ ಗಾಂಧಿ, ಎಲ್.ಕೆ. ಅಡ್ವಾಣಿ ಹಾಗೂ ಕೇರಳ ಕಾಂಗ್ರೆಸ್ ನಾಯಕ ಒಮನ್ ಚಾಂಡಿ ಅವರುಗಳು ಒಬಾಮಾ ಸುತ್ತ ನೆರೆದಿದ್ದಾರೆ.

ಈ ಘಟನೆಯನ್ನು ಖಂಡಿಸಿರುವ ಮುಖ್ಯಮಂತ್ರಿ ಒಮನ್ ಚಾಂಡಿ, `ಸಿಪಿಎಂ ಪಕ್ಷವು ಏಸು ಮತ್ತು ಕ್ರೈಸ್ತಧರ್ಮದ ಕುರಿತು ಅಪಾರ ಗೌರವವಿದೆ ಎಂದು ಹೇಳುತ್ತದೆ. ಆದರೆ, ಆ ಧರ್ಮಕ್ಕೆ ಅಗೌರವ ತೋರುವ ಕೆಲಸ ಮಾಡುತ್ತಲೇ ಇರುತ್ತದೆ. ಸಿಪಿಎಂ ಇದಕ್ಕಾಗಿ ಕೂಡಲೇ ಕ್ಷಮೆ ಯಾಚಿಸಬೇಕು~ ಎಂದಿದ್ದಾರೆ.

ಕೇರಳದ ಕ್ಯಾಥೋಲಿಕ್ ಬಿಷಪ್‌ರ ಒಕ್ಕೂಟದ ವಕ್ತಾರ ಪಾಲ್ ಥೆಲೆಕ್ಕಾಟ್ ಸಹ ರಾಜಕೀಯ ವ್ಯಂಗ್ಯಾವಳಿಗಾಗಿ ಲಾಸ್ಟ್ ಸಪ್ಪರ್ ಚಿತ್ರ ಬಳಸಿದ್ದನ್ನು ಖಂಡಿಸಿದ್ದು, `ಸಿಪಿಎಂ, ಕ್ರೈಸ್ತರ ಭಾವನೆಗಳಿಗೆ ಧಕ್ಕೆ ಮಾಡಿದೆ~ ಅಂದಿದ್ದಾರೆ.

ಈ ಮಧ್ಯೆ, ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿಣರಾಯಿ ವಿಜಯನ್, `ಪೋಸ್ಟರ್ ಸಿದ್ಧಪಡಿಸುವಲ್ಲಿ ಪಕ್ಷದ ಪಾತ್ರವಿಲ್ಲ. ಏಸುವಿಗೆ, ಕ್ರೈಸ್ತರಿಗೆ ಅವಮಾನ ಮಾಡುವ ಯಾವ ಉದ್ದೇಶವೂ ಪಕ್ಷಕ್ಕೆ ಇರಲಿಲ್ಲ. ಪೋಸ್ಟರ್ ಕುರಿತು ಮಾಹಿತಿ ಬಂದ ತಕ್ಷಣ ಪಕ್ಷದ ನಾಯಕರು ಅಲ್ಲಿಗೆ ಧಾವಿಸಿ ಅದನ್ನು ಕಿತ್ತುಹಾಕಿಸಿದ್ದಾರೆ~ ಎಂದು ಸ್ಪಷ್ಟಪಡಿಸಿದ್ದಾರೆ.
3.3 ಕೋಟಿ ಜನಸಂಖ್ಯೆ ಹೊಂದಿರುವ ಕೇರಳದಲ್ಲಿ ಶೇ 23ರಷ್ಟು ಕ್ರೈಸ್ತರೇ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT