ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದರ ನೆನಪಿನಲ್ಲಿ ಭಾರತಕ್ಕಾಗಿ ಓಟ

Last Updated 12 ಸೆಪ್ಟೆಂಬರ್ 2013, 6:06 IST
ಅಕ್ಷರ ಗಾತ್ರ

ತುಮಕೂರು: ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಪ್ರಯುಕ್ತ ಬುಧವಾರ ‘ಭಾರತಕ್ಕಾಗಿ ಓಟ’ ನಡೆಯಿತು.

ಸ್ವಾಮಿ ವಿವೇಕಾನಂದರ 150ನೇ ಜಯಂತ್ಯುತ್ಸವ ಸಮಿತಿ ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ ವತಿಯಿಂದ ನಡೆದ ಓಟವು ಬೆಳಿಗ್ಗೆ ತುಮ­ಕೂರು ವಿಶ್ವವಿದ್ಯಾಲಯ ಎದುರು ಆರಂಭವಾಯಿತು.

ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಉತ್ಸವ ಸಮಿತಿ ಸದಸ್ಯರಾದ ಬೈರಪ್ಪ ಮಾತನಾಡಿ, ವಿವೇಕಾನಂದರ ಚಿಂತನೆಗಳು ಬರಹಗಳು ಇಂದಿಗೂ ಪ್ರಸ್ತುತ ಎಂದರು.

ಬಿಎಚ್ ರಸ್ತೆ ಮೂಲಕ ಸಾಗಿ ಟೌನ್ ಹಾಲ್ ವೃತ್ತದ ಬಳಿ ಓಟ ಕೊನೆಗೊಂಡಿತು.  ಶಾಸಕ ಸುರೇಶ್‌­ಗೌಡ, ಮುಖಂಡರಾದ ಶ್ರೀನಿವಾಸ್, ಪ್ರದೀಪ್, ಜ್ಯೋತಿಗಣೇಶ್‌, ಎಬಿವಿಪಿ ಸಂಘಟನೆಯ ಸುಬ್ರಮಣಿ, ಶ್ರೀನಿವಾಸ, ರವಿಕುಮಾರ್, ಅಮರೇಶ, ಭಗತ್ ಕ್ರಾಂತಿ ಸೇನೆ ಆರಾಧ್ಯ, ಕಿರಣ್,  ವರ್ಷಾಚರಣೆ ಸಮಿತಿಯ ಜಿಲ್ಲಾ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT