ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ 10ಕೆ ಬೆಂಗಳೂರು ಮ್ಯಾರಥಾನ್: ಲಿಮೊ, ಟುನ್ ಚಾಂಪಿಯನ್

Last Updated 5 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೀನ್ಯಾದ ಫಿಲೊಮನ್ ಲಿಮೊ ಹಾಗೂ ಇಥಿಯೋಪಿಯಾದ ಡಿರೆ ಟುನ್ ಅವರು ಭಾನುವಾರ ಉದ್ಯಾನನಗರಿಯಲ್ಲಿ ನಡೆದ ವಿಶ್ವ 10ಕೆ ಮ್ಯಾರಥಾನ್ ಮುಖ್ಯ ಸ್ಪರ್ಧೆಗಳಲ್ಲಿ ಕ್ರಮವಾಗಿ ಪುರುಷರ ಹಾಗೂ ಮಹಿಳೆಯರ ವಿಭಾಗದಲ್ಲಿ ಚಾಂಪಿಯನ್ ಆದರು.

ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ (ಟಿಸಿಎಸ್) ಆಶ್ರಯದಲ್ಲಿ ನಡೆದ ಈ ಮ್ಯಾರಥಾನ್‌ನಲ್ಲಿ ಭಾರತದವರ ವಿಭಾಗದ ಸ್ಪರ್ಧೆಯಲ್ಲಿ ರಾಷ್ಟ್ರೀಯ ಕ್ರೀಡಾಕೂಟದ ಚಾಂಪಿಯನ್ ಸುರೇಶ್ ಕುಮಾರ್ ಹಾಗೂ ಮಹಿಳೆಯರ ವಿಭಾಗದಲ್ಲಿ ಕವಿತಾ ರಾವತ್ ಅವರು ಅಗ್ರಸ್ಥಾನದ ಗೌರವ ಪಡೆದುಕೊಂಡರು.

ನಗರದ ಕಂಠೀರವ ಕ್ರೀಡಾಂಗಣದಿಂದ ಆರಂಭವಾದ ಸ್ಪರ್ಧೆಯಲ್ಲಿ ಲಿಮೊ (28 ನಿಮಿಷ 1 ಸೆಕೆಂಡ್) ಹಾಗೂ ಇಥಿಯೋಪಿಯಾದ ಡಿರೆ ಟುನ್ (33 ನಿ.:19ಸೆ. ) ಅವರು ಮೊದಲಿಗರಾಗಿ ಗುರಿ ತಲುಪಿದರು.

ವಿವಿಧ ವಿಭಾಗದ ಸ್ಪರ್ಧೆಗಳಲ್ಲಿ ಒಟ್ಟು 20 ಸಾವಿರಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು. ದೆಹಲಿ ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ಗುವಾಂಗ್ ಜೌನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿದ ಕವಿತಾ ರಾವತ್ ಅವರು ಭಾರತದವರ ವಿಭಾಗದ ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡರು.

ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಸ್ತಿ ಜಯಿಸಿದ್ದ ಸುರೇಶ್ ಕುಮಾರ್ ಪುರುಷರ ವಿಭಾಗದಲ್ಲಿ ಮೊದಲ ಸ್ಥಾನ ಪಡೆದರು. ಇವರು ನಿಗದಿತ ಅಂತರವನ್ನು 30 ನಿಮಿಷ 17 ಸೆ.  ಕ್ರಮಿಸಿದರು. ಮೊದಲ ಹತ್ತರ ಪಟ್ಟಿಯಲ್ಲಿ ಕಾಣಿಸಿಕೊಂಡ ಭಾರತದ ಸ್ಪರ್ಧಿಗಳು ತಲಾ 2 ಲಕ್ಷ ರೂಪಾಯಿ ಬಹುಮಾನ ವನ್ನು ತಮ್ಮದಾಗಿಸಿಕೊಂಡರು.

 ಸಿಎಂ ಚಾಲನೆ:  ನಗರದಲ್ಲಿ ನಡೆದ ಮ್ಯಾರಥಾನ್‌ಗೆ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿದರು. ಬಿಬಿಎಂಪಿ ಆಯುಕ್ತರಾದ ಶಾರದಮ್ಮ ಇತರ ಗಣ್ಯರು ಪಾಲ್ಗೊಂಡಿದ್ದರು.

ಫಲಿತಾಂಶಗಳು ಇಂತಿವೆ: ಮುಖ್ಯ ಸ್ಥರ್ಧೆಯ ಪುರುಷರ ವಿಭಾಗ: ಫಿಲೊಮನ್ ಲಿಮೊ (ಕೀನ್ಯಾ) ಅವಧಿ 28 ನಿಮಿಷ:01ಸೆ; ಲೆನಾರ್ಡ್ ಲಂಗತ್ (ಕೀನ್ಯಾ) 28 ನಿ.:09ಸೆ; ಲೀಲೆಸಾ ದೆಸಿಸಾ (ಇಥಿಯೋಪಿಯಾ) 28 ನಿ.:09 ಸೆ; ಇಮ್ಯೂನಿಯಲ್ ಕಿಕೆಮಾಯಿ (ಕೀನ್ಯಾ) 28 ನಿ.:20ಸೆ; ವಿನ್ಸಂಟ್ ಕಿಪ್ರುತೊ (ಕೀನ್ಯಾ) 28 ನಿ.:45ಸೆ; ಅಚೆಲವಾ ಮೆಕೆತಾ (ಇಥಿಯೋಪಿಯಾ) 28 ನಿ.:47ಸೆ; ನಿಚೊಲಸ್ ಕಾಮಕಾಯ್ (ಕೀನ್ಯಾ) 28 ನಿ.:54ಸೆ; ಸೆಂತಹೆಯು ಮೆರ್ಗಾ (ಇಥಿಯೋಪಿಯಾ) 29 ನಿ.:04ಸೆ; ಹಬ್ಟಿಮು ಫಿಕಿದು (ಇಥಿಯೋಪಿಯಾ) 29 ನಿ.:05ಸೆ.

ಮುಖ್ಯ ಸ್ಥರ್ಧೆಯ ಮಹಿಳೆಯರ ವಿಭಾಗ:  ಡಿರೆ ಟುನ್ (ಇಥಿಯೋಪಿಯಾ) 33 ನಿ.:19ಸೆ; ಮೆರಿಮಾ ಮೊಹಮ್ಮದ್ (ಇಥಿಯೋಪಿಯಾ) 33 ನಿ.:19ಸೆ; ಬೆಲಿಯಾನಿಷಾ ಒಲಿಜಿರಾ (ಇಥಿಯೋಪಿಯಾ) 33 ನಿ. :20ಸೆ; ಕಾರೆನ್ ಯಾಲ್ (ಇಥಿಯೋಪಿಯಾ) 33 ನಿ.:21ಸೆ; ಪಿಲಿಸ್ ಓಂಗೊರಿ (ಕೀನ್ಯಾ) 33 ನಿ.:22ಸೆ; ಡೊರಿಸ್ ಚಾಂಗೆವೈವೊ (ಕೀನ್ಯಾ) 33: ನಿ. 26ಸೆ; ಅಸೆಲಫಿಚ್ ಮಾರ್ಗಿಯಾ (ಇಥಿಯೋಪಿಯಾ) 33 ನಿ. :27ಸೆ; ಈಡನ್ ಕಿಪ್ಲಾಗಾಟ್ (ಕೀನ್ಯಾ) 33 ನಿ.:35ಸೆ; ಹಿಲ್ಡಾ ಕೆಬಿಟ್ (ಹಾಲೆಂಡ್) 33 ನಿ. :40ಸೆ; ಮಾರೆ ದಿಬಾಬಾ (ಇಥಿಯೋಪಿಯಾ)33.43ಸೆ.

ಭಾರತದ ಪುರುಷರ ವಿಭಾಗ: ಸುರೇಶ್ ಕುಮಾರ್ 30 ನಿ.:17ಸೆ; ವಿ.ಎಲ್. ದಂಗಿ 30 ನಿ.:25ಸೆ; ಖೇತಾ ರಾಮ್ 30 ನಿ.:34ಸೆ; ಇಂದ್ರಜೀತ್ ಪಟೇಲ್ 30 ನಿ.:38ಸೆ; ಸಂದೀಪ್ ಕುಮಾರ್ 30 ನಿ.:53ಸೆ; ಸಂಜಿತ್ ಲುವಾಂಗ್ 30 ನಿ.:56ಸೆ; ರಾಶ್‌ಪಾಲ್ ಸಿಂಗ್ 30 ನಿ.:58ಸೆ; ಮುಕೇಶ್ ರಾವತ್ 31 ನಿ.:11; ಪ್ರತಿಮಾ ಬಿಂದ್ 31 ನಿ.:26ಸೆ; ಸಂತೋಷ್ 31 ನಿ.:33.

ಭಾರತದ ಮಹಿಳೆಯರ ವಿಭಾಗ: ಕವಿತಾ ರಾವತ್ 35 ನಿ.:09ಸೆ; ಸುಧಾ ಸಿಂಗ್ 35 ನಿ.:28ಸೆ; ಪ್ರಿಯಾಂಕ ಸಿಂಗ್ ಪಟೇಲ್ 37 ನಿ.:04ಸೆ; ಲಲಿತಾ ಬಾಬ್ಬರ್ 37 ನಿ.:19ಸೆ; ಕಿರಣ್ ತಿವಾರಿ 35 ನಿ.:27ಸೆ; ಸ್ವಾತಿ ಗವಾಡೆ 37 ನಿ.:41ಸೆ; ಅನುರಾಧ ಸಿಂಗ್ 37 ನಿ.:49ಸೆ; ಜುಮ್ಮಾ ಕಾಟೂನ್ 38 ನಿ.:15ಸೆ; ಸವಿತಾ ದೇವಿ 38 ನಿ.:36ಸೆ; ವಿಜಯ ಮಾಲಾ ಪಾಟೀಲ್ 38 ನಿ.:46ಸೆ.

ಓಪನ್ 10 ಕೆ ಪುರುಷರ ವಿಭಾಗ: 15ರಿಂದ 39 ವರ್ಷದೊಳಗಿನವರು-ಅಂಕಿತ್ ರಾಯ್ (ಭಾರತ) 34 ನಿ.:00ಸೆ; ಬಿ. ರ್ಮರಾಜು (ಭಾರತ) 34 ನಿ.:15ಸೆ; ರಾಜೇಂದ್ರ ಕುಮಾರ್ ಬಿಂದ್ (ಭಾರತ) 34 ನಿ.:31ಸೆ.; 40ರಿಂದ 49 ವರ್ಷದೊಳಗಿನವರು- ಗಿರೀಶ್ ಚಂದ್ರ (ಭಾರತ) 38 ನಿ.:08ಸೆ; ದಾಮೈನ್ ಮಿಲೆರ್ (ಅಮೆರಿಕ) 38 ನಿ.:09ಸೆ; ಸುರೇಶ್ ಚಂದ್ (ಭಾರತ) 39 ನಿ.:51ಸೆ.; 50ರಿಂದ 59ವರ್ಷದೊಳಗಿನ ವಿಭಾಗ- ಕೆ.ಸಿ. ಕೋತಂಡ ಪಾಣಿ 44 ನಿ.:00ಸೆ; ಎಚ್. ಸಿದ್ದೇಶ (ಭಾರತ) 45 ನಿ.:25ಸೆ; ಭಾಸ್ಕರ್ ಶರ್ಮಾ (ಭಾರತ) 45 ನಿ.:57ಸೆ.; 60ರಿಂದ 69ವರ್ಷದೊಳಗಿನ ವಿಭಾಗ- ಮಂಜುನಾಥ್ ಕೋಟಾ (ಭಾರತ) 47 ನಿ.:42ಸೆ; ಗುಯಿಂಟರ್ ಕ್ಲೆಂಕಿನಾಚಾತ್ (ಜರ್ಮನಿ) 48 ನಿ: 57ಸೆ; ಜಿ. ಚಂದ್ರನ್ (ಭಾರತ) 50 ನಿ.:02ಸೆ).

10 ಕೆ ಮಹಿಳೆಯರ ವಿಭಾಗ: 15ರಿಂದ 39 ವರ್ಷದೊಳಗಿನವರ ವಿಭಾಗ- ರಾಜ ಕುಮಾರಿ (ಭಾರತ) 41 ನಿ.: 46ಸೆ; ಅನಿಷಾ ದೇವಿ (ಭಾರತ) 42 ನಿ.:25ಸೆ; ರಾಚೆಲ್ ಕಾರ್ಟೆರ್ (ಆಸ್ಟ್ರೇಲಿಯ) 45 ನಿ.03ಸೆ.; 40ರಿಂದ 49 ವರ್ಷದೊಳಗಿನವರ ವಿಭಾಗ- ಸಾಂದ್ರಾ ಹೊಲ್ಮಸ್ (ಇಂಗ್ಲೆಂಡ್) 54 ನಿ.: 36ಸೆ; ಜಾಕಲೈನ್ ಹೈದೆ (ಇಂಗ್ಲೆಂಡ್) 55 ನಿ.:23ಸೆ; ಅಂಜಲಿ ಚಲಿಸ್ಗಾಂವಕರ್ (ಭಾರತ) 55 ನಿ.:56ಸೆ.; 50ರಿಂದ 59ವರ್ಷದೊಳಗಿನ           ವಿಭಾಗ- ಸರೋಜಾ ದೀಲಿಪನ್ (ಭಾರತ) 01:06:44ಸೆ; ಶಾಮಲಾ ಮನಮೋಹನ್ (ಭಾರತ) 1:08:51ಸೆ; ಜೂಜು ಗ್ರೇವೆ (ಇಂಗ್ಲೆಂಡ್) 1:09:44ಸೆ.; 60ರಿಂದ 69ವರ್ಷದೊಳಗಿನ ವಿಭಾಗ- ಮಾಲಿನಿ ಕಿಣಿ (ಭಾರತ) 1:27:57ಸೆ; ಶ್ರೀಲತಾ ಬಂಗೆರ್ (ಭಾರತ) 1:57:41ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT