ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ಗೆ ಭಾರತ ಅರ್ಹತೆ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಪುರುಷರ ಫ್ರೀ ಸ್ಟೈಲ್‌ ಕುಸ್ತಿ ತಂಡವು ಮುಂದಿನ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ. ಹಂಗರಿಯ ಬುಡಾಪೆಸ್ಟ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಈ ಅವಕಾಶ ಲಭಿಸಿದೆ.
ಭಾರತದ ಫ್ರೀ ಸ್ಟೈಲ್‌ ಸ್ಪರ್ಧಿಗಳಾದ ಅಮಿತ್‌ ಕುಮಾರ್ ಹಾಗೂ ಬಜರಂಗ್‌ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಜಯಿಸಿದ್ದರು.

ಇದರಿಂದ ಒಟ್ಟು 23 ಪಾಯಿಂಟ್‌ಗಳೊಂದಿಗೆ ಭಾರತ ಆರನೇ ಸ್ಥಾನ ಪಡೆಯಿತು. ಅಂತರರಾಷ್ಟ್ರೀಯ ಕುಸ್ತಿ ಫೆಡರೇಷನ್‌ ನಿಯಮದಂತೆ ಮೊದಲ ಎಂಟು ಸ್ಥಾನಗಳನ್ನು ಪಡೆಯುವ ತಂಡಗಳು ವಿಶ್ವಕಪ್‌ಗೆ ನೇರವಾಗಿ ಅರ್ಹತೆ ಪಡೆಯುತ್ತವೆ.

ಇರಾನ್‌, ರಷ್ಯಾ, ಜಾರ್ಜಿಯ, ಉಕ್ರೇನ್‌ ಮತ್ತು ಅಮೆರಿಕದ ಬಳಿಕ ಭಾರತ ಆರನೇ ಸ್ಥಾನದಲ್ಲಿ ಕಾಣಿಸಿ ಕೊಂಡಿತು. ಭಾರತ ತಂಡ ವಿಶ್ವಕಪ್‌ಗೆ ಅರ್ಹತೆ ಪಡೆದದ್ದು ಇದೇ ಮೊದಲು.

ಮಹಿಳಾ ಸ್ಪರ್ಧಿಗಳಿಗೆ ನಿರಾಸೆ: ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿಗಳ ನೀರಸ ಪ್ರದರ್ಶನ ಮುಂದುವರಿದಿದೆ.

ನವಜೋತ್‌ ಕೌರ್‌ (67 ಕೆ.ಜಿ. ವಿಭಾಗ) ಎರಡನೇ ಸುತ್ತಿನಲ್ಲಿ ಸೋಲು ಅನುಭವಿಸಿದರೆ, ಜ್ಯೋತಿ (72 ಕೆ.ಜಿ) ಮೊದಲ ಸುತ್ತಿನಲ್ಲೇ ಎಡವಿದರು.

ನವಜೋತ್‌ ಮೊದಲ ಸುತ್ತಿನಲ್ಲಿ ಬ್ರೆಜಿಲ್‌ನ ಗಿಲ್ಡಾ ಡಿ ಒಲಿವಿಯೆರಾ ಅವರನ್ನು 11-4 ರಲ್ಲಿ ಮಣಿಸಿದರು. ಆದರೆ ಕೊಲಂಬಿಯದ ಲೀಡಿ ಮೆಂಡೆಜ್‌ ಎದುರು 0-9 ರಲ್ಲಿ ಸೋಲು ಅನುಭವಿಸಿದರು.

ಜ್ಯೋತಿ ಪ್ರಬಲ ಪೈಪೋಟಿಯ ಬಳಿಕ 5-9 ರಲ್ಲಿ ಟರ್ಕಿಯ ಯೆಮಿನ್‌ ಅದರ್‌  ಎದುರು ಪರಾಭವ ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT