ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದಗಳು ಒಂದು ಜಾತಿಯ ಸ್ವತ್ತಲ್ಲ

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ವೇದಗಳು ಯಾವೋ ದೋ ಒಂದು ಜಾತಿಯ ಸ್ವತ್ತಲ್ಲ. ಸಮಾಜವನ್ನು ಮುನ್ನಡೆಸುವ ದಿವ್ಯ ಬೆಳಕು~ ಎಂದು ದೊಡ್ಡಬಳ್ಳಾಪುರದ ಪುಷ್ಪಾಂಡಜ ಮಹರ್ಷಿ ಆಶ್ರಮದ ದಿವ್ಯ ಜ್ಞಾನಾನಂದ ಸ್ವಾಮೀಜಿ ಬಣ್ಣಿಸಿದರು.

ವೇದಭಾಷ್ಯ ಪ್ರಕಾಶನ ಸಮಿತಿಯು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಯಾನಂದ ಸರಸ್ವತಿ ಅವರ `ಋಗ್ವೇದ ಭಾಷ್ಯ~ ಸಂಪುಟವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ವೇದಗಳು ಸೂಸುವ ಜ್ಞಾನದಿಂದ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಸಾಧ್ಯವಿದೆ. ಹೊಸ ಬಗೆಯ ಪ್ರಶ್ನೆಗಳು ಮತ್ತು ಸವಾಲುಗಳಿಗೆ ವೇದಾಧ್ಯಯನದಿಂದ ಉತ್ತರ ಕಂಡುಕೊಳ್ಳಬಹುದು~ ಎಂದು ಅವರು ಅಭಿಪ್ರಾಯಪಟ್ಟರು.

ಸಮಿತಿಯ ಧರ್ಮದರ್ಶಿ ಮಂಡಳಿಯ ಸದಸ್ಯ ಡಾ.ಪುಟ್ಟಶಂಕರಪ್ಪ, `ಸರ್ಕಾರದ ಕಿಂಚಿತ್ತು ಸಹಾಯವಿಲ್ಲದೇ ಸಮಿತಿಯು ವೇದಾಧ್ಯಯನಕ್ಕೆ ಸಂಬಂಧಪಟ್ಟಂತೆ ಹಲವಾರು ಪುಸ್ತಕಗಳನ್ನು ಹೊರತರುತ್ತಿವೆ. ವೇದಾಧ್ಯಯನಾಸಕ್ತರು ಇರುವುದರಿಂದಲೇ ಇಂದಿಗೂ ಪುಸ್ತಕಗಳು ಮರುಮುದ್ರಣಗೊಳ್ಳುತ್ತಿವೆ~ ಎಂದು ಹೇಳಿದರು.
ಶತಾಯುಷಿ ಪಂ.ಸುಧಾಕರ ಚತುರ್ವೇದಿ, ಮಂಡಳಿಯ ಅಧ್ಯಕ್ಷ ರಮಾನಂದ ಆರ್ಯ, ಕಾರ್ಯದರ್ಶಿ ಎಸ್. ನಂಜುಂಡಪ್ಪ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT