ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಂಕರಾಚಾರ್ಯರು ಭವರೋಗದ ಶ್ರೇಷ್ಠ ವೈದ್ಯರು

Last Updated 4 ಫೆಬ್ರುವರಿ 2011, 17:10 IST
ಅಕ್ಷರ ಗಾತ್ರ

ಹಾಸನ: ‘ಭವದ ಜಂಜಡದಲ್ಲಿ ಸಿಲುಕಿದ್ದ ಮನುಷ್ಯನಿಗೆ ತನ್ನ ನಿಜವಾದ ಸ್ವರೂಪ ಏನೆಂಬುದನ್ನು ಶಂಕರಾಚಾರ್ಯರು ತಿಳಿಸಿದ್ದರು. ಅತ್ಯಂತ ಕಡಿಮೆ ಶ್ಲೋಕಗಳಲ್ಲಿ ಅತ್ಯಂತ ಸರಳ ರೂಪದಲ್ಲಿ ಉಪನಿಷತ್ತುಗಳ ಸಾರವನ್ನೇ ತಿಳಿಸಿದ ಶಂಕರಾಚಾರ್ಯರು ನಿಜವಾಗಿಯೂ ಭವರೋಗದ ಶ್ರೇಷ್ಠ ವೈದ್ಯರು’ ಎಂದು ಯಡತೊರೆ ಸರಸ್ವತೀ ಮಠದ ಶಂಕರಭಾರತೀ ಸ್ವಾಮೀಜಿ ನುಡಿದರು.

ವೇದಾಂತ ಭಾರತೀ ಸಂಸ್ಥೆಯವರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ದಶಶ್ಲೋಕಿ ಅಭಿಯಾನದ ಸಾಮೂಹಿಕ ಸಮರ್ಪಣಾ ಸಮಾರಂಭದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು.

‘ಶಂಕರಾಚಾರ್ಯರ ತ್ತು ಶ್ಲೋಕಗಳು ನೂರಾರು ವಿಚಾರಗಳನ್ನು ತಿಳಿಸುತ್ತವೆ. ದೇವರ ಬಗ್ಗೆ, ಜೀವಾತ್ಮನ ಬಗ್ಗೆ, ಜೀವಾತ್ಮ ಹಾಗೂ ಪರಮಾತ್ಮನ ಐಕ್ಯದ ಬಗ್ಗೆ ಶಂಕರಾಚಾರ್ಯರು ತಿಳಿಸಿದ್ದಾರೆ.

ಪ್ರಾಸ್ತಾವಿಕವಾಗಿ ಮಾತನಾಡಿದ ಡಾ. ಕೆ. ಅನಂತರಾಮು, ‘ವೇದಾಂತ ಭಾರತೀ ಸಂಸ್ಥೆ ಚಾಮರಾಜ ನಗರದಿಂದ ಬೀದರ್‌ವರೆಗಿನ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ಸಂಘಟಿಸಿದೆ ಎಂದರು. 

ಸುಮಾರು ಏಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು, ವಿದ್ಯಾರ್ಥಿಗಳು ಮೈದಾನದಲ್ಲಿ ಒಗ್ಗಟ್ಟಿನಿಂದ ದಶ ಶ್ಲೋಕಗಳನ್ನು ಪಠಿಸುತ್ತ ಸ್ವಾಮೀಜಿ ಮುಂದೆ ಮಹಾ ಸಮರ್ಪಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT