ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಮೀರ್, ಪ್ರಿಯಾ ವೇಗದ ರಾಜ-ರಾಣಿ

Last Updated 12 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇರಳದ ಶಮೀರ್ ಮೋನ್ ಹಾಗೂ ಪಿ.ಕೆ.ಪ್ರಿಯಾ ಅವರು ಇಲ್ಲಿ ನಡೆಯುತ್ತಿರುವ 51ನೇ ರಾಷ್ಟ್ರೀಯ ಸೀನಿಯರ್ ಅಂತರ ರಾಜ್ಯ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ `ವೇಗದ ರಾಜ-ರಾಣಿ~ ಗೌರವಕ್ಕೆ ಪಾತ್ರರಾದರು.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ಸಂಜೆ ನಡೆದ ಪುರುಷರ ವಿಭಾಗದ 100 ಮೀಟರ್ ಓಟದಲ್ಲಿ ಕೇರಳದ ಶಮೀರ್ ಚಿನ್ನದ ಪದಕ ಗೆದ್ದರು. ಅವರು 10.58 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದರು.

ಮಹಿಳೆಯರ ವಿಭಾಗದ 100 ಮೀ. ಓಟದಲ್ಲಿ ಪ್ರಿಯಾ ಮೊದಲ ಸ್ಥಾನ ಗಳಿಸಿದರು. ಅವರು ಈ ದೂರವನ್ನು 11.97 ಸೆಕೆಂಡ್‌ಗಳಲ್ಲಿ ಕ್ರಮಿಸಿದರು.

ಆದರೆ ಚಾಂಪಿಯನ್‌ಷಿಪ್‌ನ ಎರಡನೇ ದಿನ ಎಲ್ಲರ ಕೇಂದ್ರ ಬಿಂದುವಾಗಿದ್ದು ಕರ್ನಾಟಕದ ಅಶ್ವಿನಿ ಅಕ್ಕುಂಜಿ. ಏಷ್ಯನ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಅಶ್ವಿನಿ ಇಲ್ಲಿ 400 ಮೀ.ನಲ್ಲಿ ಮೊದಲ ಸ್ಥಾನ ಪಡೆದರು. ಅವರು ಇದಕ್ಕೆ ತೆಗೆದುಕೊಂಡಿದ್ದು ಕೇವಲ 52.82 ಸೆಕೆಂಡ್. ಚಿನ್ನದ ಪದಕದ ಆಕಾಂಕ್ಷಿ ಪಂಜಾಬ್‌ನ ಮಂದೀಪ್ ಕೌರ್ ಹಿಂದಿಕ್ಕಿ ಈ ಸಾಧನೆ ಮಾಡಿದರು. ಇದು ವೈಯಕ್ತಿಕವಾಗಿ ಅಶ್ವಿನಿ ಅವರ ಅತ್ಯುತ್ತಮ ಸಾಧನೆ.

ಡಿಸ್ಕಸ್ ಥ್ರೋನಲ್ಲಿ ಕಾಮನ್‌ವೆಲ್ತ್ ಕೂಟದ ಚಿನ್ನದ ಪದಕ ಗೆದ್ದಿದ್ದ ರಾಜಸ್ತಾನದ ಕೃಷ್ಣ ಪೂಣಿಯಾ ಸ್ಪರ್ಧೆಯ ಮಧ್ಯೆದಲ್ಲಿಯೇ ಹಿಂದೆ ಸರಿದರು. ಇದಕ್ಕೆ ಕಾರಣ ಹಿಂದಿನ ಗಾಯದ ನೋವು ಮರುಕಳಿಸಿದ್ದು. ಆದರೂ ಅವರು ಎರಡನೇ ಸ್ಥಾನ ಪಡೆದರು. ಹೈಜಂಪ್‌ನಲ್ಲಿ ಕರ್ನಾಟಕದ ಸಹನಾ ಕುಮಾರಿ (1.81 ಮೀ.) ಬಂಗಾರದ ಪದಕ ಜಯಿಸಿದರು.

ರಾಷ್ಟ್ರೀಯ ದಾಖಲೆ: ಡೆಕಥ್ಲಾನ್‌ನಲ್ಲಿ ಹರಿಯಾಣದ ಭಾರತೀಂದರ್ ಸಿಂಗ್ (7658 ಪಾಯಿಂಟ್) ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದರು. ಹಾಗಾಗಿ 2006ರಲ್ಲಿ ಜೋರಾ ಸಿಂಗ್ (7502 ಪಾಯಿಂಟ್) ನಿರ್ಮಿಸಿದ್ದ ದಾಖಲೆ ಅಳಿಸಿ ಹೋಯಿತು.

ಕೂಟ ದಾಖಲೆ: 3000 ಮೀ. ಸ್ಟೀಪಲ್‌ಚೇಸ್‌ನಲ್ಲಿ ತಮಿಳುನಾಡಿನ ರಾಮಚಂದ್ರನ್ (8:42.58) ನೂತನ ಕೂಟ ದಾಖಲೆ ಸ್ಥಾಪಿಸಿದರು. 2009ರಲ್ಲಿ ಉತ್ತರ ಪ್ರದೇಶದ ಇಲಾಮ್ ಸಿಂಗ್ (8:43.89) ನಿರ್ಮಿಸಿದ್ದ ದಾಖಲೆಯನ್ನು ಅಳಿಸಿ ಹಾಕಿದರು.

ಫಲಿತಾಂಶ ಇಂತಿವೆ: ಪುರುಷರ ವಿಭಾಗ: 100 ಮೀ.: ಶಮೀರ್ ಮೋನ್ (ಕೇರಳ; 10.58 ಸೆ.)-1. ಕೃಷ್ಣ ಕೆ.ಆರ್.ರಾಣೆ (ಮಹಾರಾಷ್ಟ್ರ; 10.61 ಸೆ.)-2, ರಿತೇಶ್ ಆನಂದ್ (ಜಾರ್ಖಂಡ್; 10.71 ಸೆ.)-3. 20000 ಮೀ.ನಡಿಗೆ: ಮಣಿರಾಮ್ ಪಟೇಲ್ (ಮಧ್ರಪ್ರದೇಶ; 1:29:35.00)-1, ಕೆ.ಟಿ.ಇರ್ಫಾನ್ (ಕೇರಳ; 1:30:34.00)-2, ಮಂಜಿತ್ ಸಿಂಗ್ (ಪಂಜಾಬ್; 1:31:34.00)-3. ಟ್ರಿಪಲ್ ಜಂಪ್: ಅರ್ಪಿಂದರ್ ಸಿಂಗ್ (ಪಂಜಾಬ್; 16.32 ಮೀ.)-1, ರೆಂಜಿತ್ ಮಹೇಶ್ವರಿ (ತಮಿಳುನಾಡು; 15.96 ಮೀ.)-2, ಬಿಪಿನ್ ದೇವ್ (ಮಹಾರಾಷ್ಟ್ರ; 15.86 ಮೀ.)-3. 1500 ಮೀ: ಘಮಾಂಡ ರಾಮ್ (ರಾಜಸ್ತಾನ; 3:48.12)-1, ಪ್ರಾಂಜಲ್ ಗೊಗೊಯಿ (ಮಹಾರಾಷ್ಟ್ರ; 3:48.43)-2, ಸಂದೀಪ್ (ಹರಿಯಾಣ; 3:48.52)-3. 3000 ಮೀ. ಸ್ಟೀಪಲ್‌ಚೇಸ್: ರಾಮಚಂದ್ರನ್ (ತಮಿಳುನಾಡು; 8: 42.58)-1, ಟಿ.ಎಚ್.ಸಂಜಿತ್ ಲುವಾಂಗ್ (ಮಣಿಪುರ; 8:44.26)-2, ಜೈವೀರ್ (ಹರಿಯಾಣ; 8:45.16)-3. 400 ಮೀ.: ಎಸ್.ಕೆ.ಮೊರ್ತಜಾ (ಪಶ್ಚಿಮ ಬಂಗಾಳ; 47.05)-1, ದೇವಿಂದರ್ ಸಿಂಗ್ (ಪಂಜಾಬ್; 47.32)-2, ಜೆ.ಪ್ರೇಮಾನಂದ (ಮಧ್ಯಪ್ರದೇಶ; 47.80)-3. ಡೆಕಥ್ಲಾನ್: ಭಾರತೀಂದರ್ ಸಿಂಗ್ (ಹರಿಯಾಣ; 7658)-1, ರಾಹುಲ್ ಕುಮಾರ್ (ರಾಜಸ್ತಾನ; 6599)-2, ಚಂದ್ರಹಾಸ್ ಕುಶ್‌ವಾಹ್ (ಉತ್ತರಪ್ರದೇಶ; 6537)-3.

ಮಹಿಳೆಯರ ವಿಭಾಗ: 100 ಮೀ.: ಪಿ.ಕೆ.ಪ್ರಿಯಾ (ಕೇರಳ; 11.97 ಸೆ.)-1, ಆಷಾ ರಾಯ್ (ಪಶ್ಚಿಮ ಬಂಗಾಳ; 12.20 ಸೆ.)-2, ಎನ್.ಸುಧಾ (ಆಂಧ್ರಪ್ರದೇಶ; 12.22 ಸೆ.)-3. 20000 ಮೀ.ನಡಿಗೆ: ದೀಪಮಾಲಾ ದೇವಿ (ಜಾರ್ಖಂಡ್; 1:47:19.29)-1, ಗೌರವ್ ಕುಮಾರಿ (ಮಧ್ರಪ್ರದೇಶ; 1:52:26.09)-2, ರಂಜನಾ ಗುಪ್ತಾ (ಮಧ್ಯಪ್ರದೇಶ; 1:52:49.31)-3. 1500 ಮೀ.: ಓ.ಪಿ.ಜೈಶಾ (ಪಂಜಾಬ್; 4:21.32)-1, ಜುಮಾ ಖತುನ್ (ಜಾರ್ಖಂಡ್; 4:23.89)-2, ಎಸ್.ಆರ್.ಬಿಂದು (ಕೇರಳ; 4:25.56)-3. ಹೈಜಂಪ್: ಸಹನಾ ಕುಮಾರಿ (ಕರ್ನಾಟಕ; 1.81 ಮೀ.)-1, ಮಲ್ಲಿಕಾ ಮೊಂಡಲ್ (ಪಶ್ಚಿಮ ಬಂಗಾಳ; 1.76 ಮೀ.)-2, ಎನ್.ಕೆ.ಸಿಜಿ (ಕೇರಳ; 1.73ಮೀ.)-3. 400 ಮೀ.: ಅಶ್ವಿನಿ ಅಕ್ಕುಂಜೆ (ಕರ್ನಾಟಕ; 52.82 ಸೆ.)-1, ಮಂದೀಪ್ ಕೌರ್ (ಪಂಜಾಬ್; 53.21)-2, ಜವುನಾ ಮುರ್ಮು (ಒರಿಸ್ಸಾ; 53.81)-3. ಡಿಸ್ಕಸ್ ಥ್ರೊ: ಹರ್ವಂತ್ ಕೌರ್ (ಪಂಜಾಬ್; 58.78 ಮೀ.)-1, ಕೃಷ್ಣಾ ಪೂಣಿಯಾ (ರಾಜಸ್ತಾನ; 55.45 ಮೀ.)-2, ಪ್ರವೀಣ್ ಕುಮಾರಿ (ರಾಜಸ್ತಾನ; 49.21 ಮೀ.)-3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT