ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಕೋಣೆಗಳಲ್ಲಿ ದೇಶದ ಭವಿಷ್ಯ

Last Updated 6 ಜುಲೈ 2012, 9:50 IST
ಅಕ್ಷರ ಗಾತ್ರ

ಚಿತ್ತಾಪುರ: ಒಂದು ದೇಶದ ಜನರ ಜೀವನದ ರೀತಿ, ಬದುಕಿನ ವ್ಯವಸ್ಥೆ, ಸಮಾಜದ ಸ್ಥಿತಿಗತಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಅಲ್ಲಿನ ಶಿಕ್ಷಣ ವ್ಯವಸ್ಥೆ ಸಾಕ್ಷಿಯಾಗುತ್ತದೆ. ಶಿಕ್ಷಣವೇ ದೇಶದ ಪ್ರಗತಿಯ ಕನ್ನಡಿ. ದೇಶದ ಭವಿಷ್ಯ ಶಾಲೆಯ ತರಗತಿ  ಕೋಣೆಗಳಲ್ಲಿ ರೂಪುಗೊಳ್ಳುತ್ತದೆ. ಇಡೀ ದೇಶದ ಭವಿಷ್ಯ ರೂಪಿಸುವವರು ಶಿಕ್ಷಕರು.

ಶಿಕ್ಷಕರ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚವ್ಹಾಣಶೆಟ್ಟಿ ಹೇಳಿದರು.
ತಾಲ್ಲೂಕಿನ ಭಂಕಲಗಾ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ `ಶಾಲೆಗಾಗಿ ನಾವು ನೀವು~ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಸಿದ್ಧವೀರಯ್ಯಾ ರುದ್ನೂರು, ಮಲ್ಲಿಕಾರ್ಜುನ ಎಮ್ಮೆನೋರ್, ಶಾಲೆಯ ಮುಖ್ಯಗುರು ಅಶೋಕ ಭಾಸ್ಕರ್ ಮಾತನಾಡಿದರು.

ಶ್ರೀನಿವಾಸರೆಡ್ಡಿ, ಮಹಾದೇವ ಸಾಲಹಳ್ಳಿ, ಮಲ್ಲರೆಡ್ಡಿ, ಶಿವಶರಣಪ್ಪ ಸಾಲಹಳ್ಳಿ, ದುರ್ಗಣ್ಣ, ಸೈಯದ್ ಹುಸೇನ್, ದೊಡ್ಡಪ್ಪ ನಾಮಾರ, ಹಣಮಂತ ಕುಂಬಾರ, ಮಲ್ಲಪ್ಪ ಸುಭೇದಾರ್, ಮಲ್ಲಿಕಾರ್ಜುನ ಬಾಳದ್, ಸಾಬಯ್ಯಾ ಗುತ್ತೇದಾರ್, ಹನುಮಂತ ಮೂಲಿಮನಿ, ನಾಗರೆಡ್ಡಿ, ರಾಘವೇಂದ್ರ ಇನ್ನಿತರರು ಇದ್ದರು. ವಿಜಯಕುಮಾರ ನಿರೂಪಿಸಿದರು. ಚಾಂದಪಾಶಾ ಸ್ವಾಗತಿಸಿ ವಂದಿಸಿದರು.   ಶಾಲೆಗೆ ಅಗತ್ಯ ಸಾಮಗ್ರಿಗಳನ್ನು ಗ್ರಾಮಸ್ಥರು ದೇಣಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT