ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ ಸಿಬ್ಬಂದಿಯಿಂದ ಅನುಚಿತ ವರ್ತನೆ ಆರೋಪ...

Last Updated 2 ಆಗಸ್ಟ್ 2011, 6:45 IST
ಅಕ್ಷರ ಗಾತ್ರ

ಗುತ್ತಲ: ಹಾವೇರಿಯ ಖಾಸಗಿ ಶಾಲೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪಾಲಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಸಮೀಪದ ಕನವಳ್ಳಿ ಗ್ರಾಮದಲ್ಲಿ ಪಾಲಕರು ಸೋಮವಾರ ಶಾಲಾ ವಾಹನ ತಡೆದು ಪ್ರತಿಭಟಿಸಿದರು.

ಬೆಳಿಗ್ಗೆ 8 ಗಂಟೆ ಸುಮಾರಿಗೆ ಗ್ರಾಮಕ್ಕೆ ಮಕ್ಕಳನ್ನು ಕರೆದೊಯ್ಯಲು ಬಂದ ವಾಹನವನ್ನು ನಾಲ್ಕು ಗಂಟೆಗಳ ಕಾಲ ತಡೆದು ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪಾಲಕರು, ಶಾಲೆಯ ಸಿಬ್ಬಂದಿ ಪಾಲಕರೊಂದಿಗೆ ಕಠೋರವಾಗಿ ನಡೆದುಕೊಳ್ಳುತ್ತಿದ್ದಾರೆ. ಶಾಲೆಗೆ ತೆರಳಿದ ಮಕ್ಕಳಿಗೆ ಸೂಕ್ತ ರಕ್ಷಣೆ ಒದಗಿಸಲು ಆಡಳಿತ ಮಂಡಳಿ ವಿಫಲವಾಗಿದೆ ಎಂದು ದೂರಿದರು.

ಗ್ರಾಮಸ್ಥರಾದ ಮಂಜುನಾಥ ಕದಂಬ, 4500 ರೂಪಾಯಿ ಡೊನೇಷನ್ ನೀಡಿ ಪ್ರವೇಶ ಪಡೆದರೂ ಶಾಲೆಯ ಆಡಳಿತ ಮಂಡಳಿಯಿಂದ ಮಕ್ಕಳಿಗೆ ಸೂಕ್ತ ರಕ್ಷಣೆ ಸಿಗುತ್ತಿಲ್ಲ ಎಂದು ಆರೋಪಿಸಿದರು.ಶಾಲೆಯ ಅವ್ಯವಸ್ಥೆಯನ್ನು ನೋಡಿ ತಮ್ಮ ಮಗನ ಪ್ರವೇಶವನ್ನು ರದ್ದುಗೊಳಿಸಿ ಡೊನೇಶನ್ ಹಣವನ್ನು ಮರಳಿಸುವಂತೆ ಕಳೆದ ಎರಡು ತಿಂಗಳಿಂದ ಕೇಳಿಕೊಳ್ಳುತ್ತಿದ್ದೇವೆ.

ಆದರೆ ಶಾಲೆಯ ಸಿಬ್ಬಂದಿಯಾಗಲಿ ಅಥವಾ ಆಡಳಿತ ಮಂಡಳಿಯಾಗಲಿ ತಮ್ಮ ಮನವಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಬದಲಾಗಿ ಮ್ಮನ್ನು ನಿಂದಿಸಿ ತಮ್ಮ ಮೇಲೆ ಹಲ್ಲೆಗೂ ಯತ್ನ ನಡೆಸಿದ್ದಾರೆ ಎಂದು ದೂರಿದರು.
ಬೆಳಿಗ್ಗೆ 8 ಗಂಟೆಯಿಂದ ಮಕ್ಕಳಿರುವ ವಾಹನವನ್ನು ಗ್ರಾಮದಲ್ಲಿ ತಡೆದರೂ ಈವರೆಗೂ ಯಾರೊಬ್ಬರೂ ಇತ್ತ ಕಡೆಗೆ ಸುಳಿದಿಲ್ಲ.

ಹೀಗಾದರೆ ಮಕ್ಕಳಿಗೆ ಯಾವ ರೀತಿ ರಕ್ಷಣೆ ನೀಡುತ್ತಾರೆ? ಎಂದು ಆರೋಪಿಸಿದರು.
ಆಡಳಿತ ಮಂಡಳಿ ಸ್ಥಳಕ್ಕೆ ಬಂದು ತಮ್ಮ ಹಾಗೂ ಇನ್ನಿತರ ಪಾಲಕರಿಗೆ ಕೊಡಬೇಕಾದ ಡೊನೇಶನ್ ಹಣವನ್ನು ಮರಳಿಸಿದ ನಂತರವೇ ಶಾಲಾ ವಾಹನವನ್ನು ಬಿಡುವುದಾಗಿ ಎಚ್ಚರಿಸಿದರು.

ನಂತರ ಪ್ರವೇಶವನ್ನು ರದ್ದುಗೊಳಿಸಿ ಡೊನೇಶನ್ ಹಣವನ್ನು ಮರಳಿಸುವುದಾಗಿ ಭರವಸೆ ನೀಡಿದ ನಂತರ ವಾಹನವನ್ನು ಬಿಡುಗಡೆ ಮಾಡಲಾಯಿತು.ಪಾಲಕರಾದ ಕಲಂದರ್ ಬೇವಿನಮರದ, ನಾಗಪ್ಪ ರವತರ, ಮಾಂತೇಶ ಕಾಟೇನಹಳ್ಳಿ, ಚಮನಸಾಬ್ ಮುನ್ನಾ, ಚಮನಸಾಬ್ ದೊಡ್ಡಮನಿ, ಬಸಯ್ಯ ಹಿರೇಮಠ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT