ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ ಬಂದ್:ಯುವಕಾಂಗ್ರೆಸ್ ಖಂಡನೆ

Last Updated 19 ಜುಲೈ 2012, 5:10 IST
ಅಕ್ಷರ ಗಾತ್ರ

ದಾವಣಗೆರೆ: ಶೇ 25ರಷ್ಟು ದಾಖಲಾತಿಯನ್ನು ಬಡಮಕ್ಕಳಿಗೆ ಮೀಸಲಿಡಲು ವಿರೋಧಿಸಿ, `ಕುಸ್ಮಾ~ ಅಧ್ಯಕ್ಷ ಜಿ.ಎಸ್. ಶರ್ಮಾ ರಾಜ್ಯದ್ಯಾಂತ ಅನುದಾನ ರಹಿತ ಶಾಲೆಗಳಿಗೆ ಬಂದ್ ಕರೆ ನೀಡಿರುವುದು ಖಂಡನೀಯ ಎಂದು ಯುವ ಕಾಂಗ್ರೆಸ್‌ನ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಖಲೀಲುಲ್ಲಾ ತಿಳಿಸಿದರು.

`ಕುಸ್ಮಾ~ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಜಿ.ಎಸ್. ಶರ್ಮಾ ದೇಶಬಿಟ್ಟು ಹೋಗಬೇಕು. ಅವರು ನಡೆಸುತ್ತಿರುವ ಶಾಲಾ ಕಾಲೇಜುಗಳನ್ನು ಸರ್ಕಾರ ಮುಟ್ಟುಗೋಲು ಹಾಕಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಜಾತಿ ರಾಜಕಾರಣ ಹಾಗೂ ಬಣಗಳ ರಾಜಕಾರಣದಲ್ಲಿ ಮುಳುಗಿದೆ. ಇವರಿಂದ ಸರ್ಕಾರ ನಡೆಸಲು ಆಗುತ್ತಿಲ್ಲ. ರಾಜ್ಯದಲ್ಲಿ ಬರಗಾಲ ಇರುವಾಗ ಬಿಜೆಪಿ ಶಾಸಕರು ತಮ್ಮ ಸ್ವಾರ್ಥಕ್ಕಾಗಿ ದೆಹಲಿ, ಬೆಂಗಳೂರು ಹಾಗೂ ಹೋಟೆಲ್‌ಗಳಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ವಿನಾಯಕ ಪೈಲ್ವಾನ್, ಡಿ.ಆರ್. ಅನಿಲ್‌ಕುಮಾರ್, ಶಂಭು ಎಸ್. ಉರೇಕುಂಡಿ, ಎಂ. ಹಬೀಬ್, ಜಾನ್ ಡಿಸೋಜ, ಮೊಹಮದ್ ಜಾಫೀರ್, ಬಿ.ಕೆ. ಸುನೀಲ್ ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT