ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಶ್ವತ ಯೋಜನೆಗೆ ಒತ್ತು: ಮುರಳಿ ಅಭಯ

Last Updated 11 ಫೆಬ್ರುವರಿ 2012, 10:25 IST
ಅಕ್ಷರ ಗಾತ್ರ

ಕೊಳ್ಳೇಗಾಲ: `ಪಂಚಾಯಿತಿ ಆದಾಯ ಹೆಚ್ಚಿಸುವ ಶಾಶ್ವತ ಯೋಜನೆಗಳಿಗೆ ಒತ್ತು ನೀಡಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮುರಳಿ ನುಡಿದರು.

ತಾಲ್ಲೂಕಿನ ಅಜ್ಜೀಪುರ ಗ್ರಾಮ ಪಂಚಾಯಿತಿ ಬಳಿ ರೂ. 5.40 ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾ ಗುತ್ತಿರುವ 5 ದಾಸ್ತಾನು ಮಳಿಗೆಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ತಾಲ್ಲೂಕು ಪಂಚಾಯಿತಿ ಅನಿರ್ಬಂಧಿತ ಯೋಜನೆಯಡಿ 3.20 ಲಕ್ಷ ಅಂದಾಜುವೆಚ್ಚದಲ್ಲಿ 3, ಹಾಗೂ ಗ್ರಾಮ ಪಂಚಾಯಿತಿ ವತಿಯಿಂದ 2.20 ಲಕ್ಷ ರೂ. ಅಂದಾಜುವೆಚ್ಚದಲ್ಲಿ 2 ದಾಸ್ತಾನು ಮಳಿಗೆ ನಿರ್ಮಿ ಸಲಾಗುತ್ತಿದೆ. ಈ ಮಳಿಗೆಗಳ ಮೂಲಕ ಪಂಚಾಯಿತಿಗೆ ಶಾಶ್ವತ ಕಟ್ಟಡ ನಿರ್ಮಾಣದ ಜೊತೆಗೆ ಹೆಚ್ಚಿನ ಆದಾಯ ಲಭಿಸಲಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹದೇವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಟಿ. ಮಹದೇವ, ಸದಸ್ಯರುಗಳಾದ ಪಿ. ನಾಗರಾಜು, ರಂಗುನಾಯ್ಕ, ಬಸವರಾಜು, ಸಮೀದ್ ಜಬ್ಬಾರ್, ಲೋಕೇಶ, ದೊಡ್ಡವೀರೇಗೌಡ, ಗುಣಶೇಖರ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT