ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಕ್ಷಕರಿಗೆ ಬಿಸಿಯೂಟದ ಹೊಣೆ ಬೇಡ

ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಪ್ರತಿಪಾದನೆ
Last Updated 20 ಸೆಪ್ಟೆಂಬರ್ 2013, 10:32 IST
ಅಕ್ಷರ ಗಾತ್ರ

ಮಾಗಡಿ:  ‘ಬಿಸಿಯೂಟದ ಜವಾಬ್ದಾ ರಿಯನ್ನು ಶಿಕ್ಷಕರಿಂದ ಬೇರ್ಪಡಿಸಿ ಬೇರೆಯವರಿಗೆ ವಹಿಸುವುದು ಸೂಕ್ತ’ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಭಿಪೊ್ರಾಯಪಟ್ಟರು.

ಪಟ್ಟಣದಲ್ಲಿ ನಡೆದ ತಾಲ್ಲೂಕು ಮಟ್ಟದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಇವತ್ತು ಶಿಕ್ಷಕರ ಕೆಲಸ ಎಂದರೆ ಬಿಸಿಯೂಟ ಬಡಿಸುವುದು, ಮಕ್ಕಳಿಗೆ ಹಾಲು ಕುಡಿಸುವುದು ಎಂಬಂತಾಗಿದೆ. ಸರ್ಕಾರ ಶಿಕ್ಷಕರನ್ನು ಗುಮಾಸ್ತರನ್ನಾಗಿ ಪರಿವತಿರ್ಸುತ್ತಿದೆ’ ಎಂದು ಅವರು ಟೀಕಿಸಿದರು.

‘ಶಿಕ್ಷಕರನ್ನು ಸರ್ವಶಿಕ್ಷಣ ಅಭಿಯಾ ನದಲ್ಲಿ ತೊಡಗಿಸುವ ಉದ್ದೇಶ ಏನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸ ಬೇಕು. ಶಿಕ್ಷಕರಿಗೆ ಪಾಠ ಮಾಡುವು ದನ್ನು ಬಿಟ್ಟು ದಾಖಲೆ ಬರೆಯುವ ಮತ್ತು ಇತರೆ ಕೆಲಸಗಳ ಜವಾ ಬ್ದಾರಿಯೇ ಹೆಚ್ಚುತ್ತಿದೆ’ ಎಂದು ಪುಟ್ಟಣ್ಣ ಆತಂಕ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿ, ವಿವಿಧ ಶಾಸಕರಿಂದ ಅನುದಾನ ಪಡೆದು ಉತ್ತಮ ಗುರುಭವನ ನಿರ್ಮಿ ಸಿಕೊಡುವ ಭರವಸೆ ನೀಡಿದರು.

ವಕೀಲ ವಿಶ್ವನಾಥ್, ಅ.ದೇವೇಗೌಡ ಮಾತನಾಡಿದರು. ಜಿ.ಪಂ ಮಾಜಿ ಅಧ್ಯಕ್ಷ ಮುದ್ದು ರಾಜ್ ಯಾದವ್, ಜಿ.ಪಂ ಸದಸ್ಯರಾದ ಧನಂಜಯ, ರಂಗಸ್ವಾ ಮಯ್ಯ, ತಾ.ಪಂ ಅಧ್ಯಕ್ಷ ಜಿ.ಕೃಷ್ಣ, ತಾ.ಪಂ ಇ.ಒ ಕೆ.ಬಿ. ಅಕ್ಕೋಜಿ, ತಹಶೀಲ್ದಾರ್ ಶಿವಕುಮಾರ್, ತಾ.ಪಂ ಸದಸ್ಯರಾದ ಶಂಕರಪ್ಪ, ಅನುಸೂಯ ಕಾಂತರಾಜು, ತೇಜಸ್ವಿನಿ ಮುದ್ದಹನು ಮೇಗೌಡ, ಭಾರತಿ ಮಹದೇವಯ್ಯ, ಕಾಂತರಾಜು, ಜೆ.ಡಿ.ಎಸ್ ಮುಖಂಡ ಅ.ದೇವೇಗೌಡ, ತಾಲ್ಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಪ್ರಭುದೇ ವರು, ಕಾರ್ಯದರ್ಶಿ ವೆಂಕಟೇಶ್ ಮೂರ್ತಿ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ  ಸಂಘದ ಅಧ್ಯಕ್ಷ ಟಿ.ಸಿ.ಬಸವ ರಾಜು, ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ಬಿ.ಆರ್.ರಾಜಶೇಖರ್, ತಾಲ್್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕಾಂತರಾಜು ವೇದಿಕೆ ಯಲ್ಲಿದ್ದರು.

ಜಿಲ್ಲಾ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಗುರುಮೂರ್ತಿ ಮತ್ತು ಗಂಗಾಧರ್ ಮತ್ತು ನಿವೃತ್ತ ಶಿಕ್ಷಕ ಎಂ.ರೇವಣ್ಣ, ಬೆಂಗಳೂರು ಉತ್ತರ ವಲಯದ ಬಿ.ಇ.ಒ ಆಂಜನಪ್ಪ ಅವರನ್ನೂ ಸನ್ಮಾನಿಸಲಾಯಿತು. ಕ್ರೀಡಾಕೂಟದಲ್ಲಿ ವಿಜೇತರಾದ ಶಿಕ್ಷಕರಿಗೆ ಬಾಲಕೃಷ್ಣ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಸಂಗೀತ ಶಿಕ್ಷಕ ಸಿದ್ದರಾಮು ರೈತ ಗೀತೆ ಹಾಡಿದರು. ಮುಖ್ಯಶಿಕ್ಷಕ ಜಿ.ವಿ.ರಾಮ ಕೃಷ್ಣಯ್ಯ, ಭದ್ರಯ್ಯ ಸಂಗಡಿಗರು ನಾಡಗೀತೆ ಹಾಡಿದರು. ಬಿ.ಇ.ಒ ರಂಗಸ್ವಾಮಿ ಸ್ವಾಗತಿಸಿ, ಸಿ.ಇ.ಒ ನಾಗಯ್ಯ ವಂದಿಸಿದರು. ಗಂಗಾಧರ್ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT