ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಭನುಡಿ ಸಂಕ್ರಾಂತಿ

Last Updated 13 ಜನವರಿ 2012, 19:30 IST
ಅಕ್ಷರ ಗಾತ್ರ
ADVERTISEMENT

ಜ್ಯೋತಿಷ್ಯ ಶಾಸ್ತ್ರ ಇಂದು ವಾಣಿಜ್ಯೀಕರಣವಾಗಿದೆ. ಕೆಲವು ವರ್ಷಗಳಿಂದ ಆಚರಣೆಗಳಿಗೆ ವಾಣಿಜ್ಯ ಉದ್ದೇಶ ಕಲ್ಪಿಸುತ್ತಾ ಬಂದಿರುವುದನ್ನು ಕಾಣು ತ್ತೇವೆ. ಅಕ್ಷಯ ತೃತೀಯ, ಶನಿ ಪ್ರಭಾವ ಎಂದು ಹೆದರಿಸುವುದು ಅದರ ಮುಂದುವರಿದ ಭಾಗವಷ್ಟೆ. ಜನರನ್ನು ಸುಮ್ಮನೆ ಹೆದರಿಸಿ, ದುಡ್ಡು ಪಡೆಯುವ ಹುನ್ನಾರ ಅನ್ನಿಸುತ್ತದೆ. ಈ ದೇಶದಲ್ಲಿ ಇಂಥದ್ದೆಲ್ಲ ನಂಬುವರರ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಇಂಥ ಮಾರ್ಕೆಟಿಂಗ್ ತಂತ್ರಗಳನ್ನು ಹೂಡುತ್ತಾರೆ. 
 ಪಿ.ರವಿಕುಮಾರ್ (ಉದ್ಯಮಿ, ಯುವ ಮುಖಂಡ)

ನನ್ನ ಪ್ರಕಾರ ಜ್ಯೋತಿಷ್ಯ ಅನ್ನುವುದನ್ನು ತುಂಬಾ ನಂಬಿದರೂ ಕಷ್ಟ, ನಂಬದೆ ಇದ್ದರೂ

ಕಷ್ಟ. ದೇಶದಾದ್ಯಂತ ಈ ಹಬ್ಬವನ್ನು ವಿವಿಧ ಹೆಸರಿನಲ್ಲಿ ಆಚರಿ ಸುತ್ತಾರೆ. ಬೆಳೆದ ಮೊದಲ ಬೆಳೆ ದೇವರಿಗೆ ಸಮರ್ಪಿಸುವ ಈ ಹಬ್ಬಕ್ಕೆ ಹಳ್ಳಿಗರಲ್ಲಿ ಹೆಚ್ಚು ಪ್ರಾಶಸ್ತ್ಯ. ಈ ಹಬ್ಬ ಎಂದರೆ ನನಗೆ ನೆನಪಾಗುವುದು ಕಬ್ಬು ಮತ್ತು ಹಸುಗಳು. ಎಳ್ಳು-ಬೆಲ್ಲ ಜೊತೆಗೆ ಕಬ್ಬು ತಿನ್ನುವುದೇ ಒಂದು ಖುಷಿ. ಇದರ ಜೊತೆಗೆ ಹಳ್ಳಿಗಳಲ್ಲಿ ಹಸುಗಳನ್ನು ಕಿಚ್ಚು ಹಾಯಿಸುವುದನ್ನು ನೋಡುವುದೇ ಸಂತಸ. ಈ ಸಲ ನನ್ನ ಫಾರ್ಮ್ ಹೌಸ್‌ಗೆ ಹೋಗಿ ಹಬ್ಬ ಆಚರಿಸುವ ಯೋಚನೆ ಇದೆ.
 ಎಚ್.ಎಸ್.ನಾಗಕಿರಣ್ (ನಟ)

ಈ ವರ್ಷ ನನಗೆ ವೈಯಕ್ತಿಕವಾಗಿ ಬೇರೆ ವರ್ಷಕ್ಕಿಂತ ಸ್ವಲ್ಪ ಮುಂಚೆಯೇ ಕೆಟ್ಟದಾಗಿದೆ,

ಹಾಗಂತ ನಾನು ಸಂಪೂರ್ಣ ಜ್ಯೋತಿಷ್ಯ ನಂಬುವುದಿಲ್ಲ. ಆದರೂ ಎಲ್ಲೋ ಒಂದು ಕಡೆ ಅದನ್ನು ಅಲ್ಲಗಳೆಯುವಂತಿಲ್ಲ. ಮೂಲತಃ ಕೇರಳದವರಾದ ನಮ್ಮ ಕಡೆ ಮಕರ ಸಂಕ್ರಾಂತಿಯಲ್ಲಿ ಅಯ್ಯಪ್ಪ ದೇವಸ್ಥಾನಕ್ಕೆ ಭಕ್ತರ ದಂಡೇ ಸೇರಿರುತ್ತದೆ, ಆದರೆ ಈ ವರ್ಷ ಅಷ್ಟು ಶುಭ ಅನ್ನಿಸಿಲ್ಲ. ಮುಂದೆ ಏನಾಗುತ್ತದೋ ಗೊತ್ತಿಲ್ಲ.
 ಪ್ರಭಾ (ಉದ್ಯಮಿ, ಗೃಹಿಣಿ)

ಮಾಧ್ಯಮಗಳಲ್ಲಿ ಜನರಿಗೆ ತಪ್ಪು ಗ್ರಹಿಕೆಗಳ ಕಾರ್ಯಕ್ರಮವನ್ನು ತೋರಿಸುತ್ತಿದ್ದಾರೆ. ಕೆಲವು ಜ್ಯೋತಿಷಿಗಳು ಜನರಿಗೆ ಹೆದರಿಕೆ ಹುಟ್ಟಿಸುವಂತೆ ಮಾತನಾಡುತ್ತಾರೆ.ಯಾವ ಹಬ್ಬವೂ ಕೆಟ್ಟದಲ್ಲ. ಅದು ನಮ್ಮ ಭ್ರಮೆ.
  ಶಿಲ್ಪಾ

ದೇವರಲ್ಲಿ ನಂಬಿಕೆಯಿದೆ. ಜ್ಯೋತಿಷ್ಯದಲ್ಲಿ ನಂಬಿಕೆಯಿಲ್ಲ, ಈಗಾಗಲೇ ಒಬ್ಬ ಮಗನಿಗೆ ಗಂಡಾಂತರ, ಮೂರು ಮಕ್ಕಳು ಇರುವವರಿಗೆ ಗಂಡಾಂತರ ಎಂದು ಕೆಲವೊಂದು ವಾಹಿನಿಗಳಲ್ಲಿ ತೋರಿಸಿ ಜನಮರುಳೋ ಜಾತ್ರೆ ಮರುಳೋ ಎಂಬಂತಾಗಿದೆ. ಇದೆಲ್ಲವೂ ಕಲ್ಪಿತ.
 ಗಾಯತ್ರಿ (ಆರ್ಕಿಟೆಕ್ಟ್)

ವಾಹಿನಿಗಳಲ್ಲಿ ಪ್ರಚಾರವಾಗಿರುವ ಸಂಕ್ರಾಂತಿಯ ಅಶುಭ ಫಲದ ವಿಚಾರ ಶುದ್ಧ ಸುಳ್ಳು. ಅಲ್ಲಿ ಮಾತನಾಡುವ ಅನೇಕರಿಗೆ ಸಂಕ್ರಾಂತಿ ಪದದ ಅರ್ಥವಾದರೂ ನಿಜವಾಗಲೂ ತಿಳಿದಿದೆಯಾ.? ಮಾಧ್ಯಮಗಳು ಜನರ ದಿಕ್ಕುತಪ್ಪಿಸಕೂಡದು. ಭಾರತೀಯ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ಸಂಗತಿಯನ್ನೇನೂ ಬರೆದಿಲ್ಲ; ಅದು ಕೇವಲ ಕಲ್ಪಿತ.
- ದೈವಜ್ಞ ಕೆ.ಎನ್. ಸೋಮಯಾಜಿ (ವಾಸ್ತು ತಜ್ಞ) 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT