ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಕಷ್ಟದಿಂದ ಪಾರಾದ ಶ್ರೀಲಂಕಾ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಅಬುಧಾಬಿ (ಎಎಫ್‌ಪಿ): ಏಂಜೆಲೊ ಮ್ಯಾಥ್ಯೂಸ್‌ ಶತಕದ ಬಲದಿಂದ ಶ್ರೀಲಂಕಾ ತಂಡದವರು  ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್‌ ಕ್ರಿಕೆಟ್‌ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದ್ದಾರೆ.

ಶೇಖ್‌ ಜಾಯೆದ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶ್ರೀಲಂಕಾ ಎರಡನೇ ಇನಿಂಗ್ಸ್‌ನಲ್ಲಿ ಶುಕ್ರವಾರದ ಅಂತ್ಯಕ್ಕೆ 148 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 420 ರನ್‌ ಕಲೆ ಹಾಕಿದೆ.  ಸಿಂಹಳೀಯ ನಾಡಿನ ತಂಡ ಇದರಿಂದ 241 ರನ್‌ಗಳ ಮುನ್ನಡೆ ಪಡೆದಿದೆ. ಪಾಕ್‌ ಪ್ರಥಮ ಇನಿಂಗ್ಸ್‌ನಲ್ಲಿ 383 ರನ್‌ ಗಳಿಸಿತ್ತು.

ಬಲತುಂಬಿದ ಜೊತೆಯಾಟ:
ಮೂರನೇ ದಿನವಾದ ಗುರುವಾರದ ಅಂತ್ಯಕ್ಕೆ ಲಂಕಾ 61.3 ಓವರ್‌ಗಳಲ್ಲಿ 186 ರನ್‌ ಗಳಿಸಿ ನಾಲ್ಕು ವಿಕೆಟ್‌ ಕಳೆದು ಕೊಂಡಿತ್ತು. ಆದರೆ, ನಾಲ್ಕನೇ ದಿನದಾಟ ದಲ್ಲಿ ಮ್ಯಾಥ್ಯೂಸ್‌್ ಶತಕ ಗಳಿಸಿ ತಂಡ ವನ್ನು ಸಂಕಷ್ಟದಿಂದ ಪಾರು ಮಾಡಿ ದರು. 282 ಎಸೆತಗಳನ್ನು ಎದುರಿಸಿದ ಮ್ಯಾಥ್ಯೂಸ್‌ 12 ಬೌಂಡರಿ ಮತ್ತು ಒಂದು ಸಿಕ್ಸರ್‌್ ಸೇರಿದಂತೆ 116 ರನ್‌ ಕಲೆ ಹಾಕಿ ಕ್ರೀಸ್‌ನಲ್ಲಿದ್ದಾರೆ. ಟೆಸ್ಟ್‌ನಲ್ಲಿ ಎರಡನೇ ಶತಕ ಗಳಿಸಿದ ಬಲಗೈ ಬ್ಯಾಟ್ಸ್‌ಮನ್‌ಗೆ ದಿನೇಶ್‌ ಚಾಂಡಿಮಾಲ್‌ (89, 166ಎಸೆತ, 12 ಬೌಂಡರಿ) ಬೆಂಬಲ ನೀಡಿದರು.

ಐದನೇ ವಿಕೆಟ್‌ಗೆ ಚಾಂಡಿಮಾಲ್‌ ಮತ್ತು ಮ್ಯಾಥ್ಯೂಸ್‌್ 138 ರನ್‌ ಕಲೆ ಹಾಕಿದರೆ, ಪ್ರಸನ್ನ ಜಯವರ್ಧನೆ ಹಾಗೂ ಮ್ಯಾಥ್ಯೂಸ್‌ ಮುರಿಯದ ಆರನೇ ವಿಕೆಟ್‌ ಜೊತೆಯಾಟದಲ್ಲಿ 96  ರನ್‌ ಗಳಿಸಿದ್ದಾರೆ. ಆದ್ದರಿಂದ ಲಂಕಾ ತಂಡಕ್ಕೆ ತಿರುಗೇಟು ನೀಡಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ ಮೊದಲ ಇನಿಂಗ್ಸ್‌ 204 ಮತ್ತು 148 ಓವರ್‌ಗಳಲ್ಲಿ 5 ವಿಕೆಟ್‌ಗೆ 420. (ದಿನೇಶ್‌ ಚಾಂಡಿಮಾಲ್‌ 89, ಏಂಜೆಲೊ ಮ್ಯಾಥ್ಯೂಸ್‌ ಬ್ಯಾಟಿಂಗ್‌ 116, ಪ್ರಸನ್ನ ಜಯವರ್ಧನೆ ಬ್ಯಾಟಿಂಗ್‌ 48; ಜುನೈದ್‌ ಖಾನ್‌ 81ಕ್ಕೆ3, ಬಿಲಾವಲ್‌ ಭಟ್ಟಿ 131ಕ್ಕೆ2).

ಪಾಕಿಸ್ತಾನ ಪ್ರಥಮ ಇನಿಂಗ್ಸ್‌ 129.1 ಓವರ್‌ಗಳಲ್ಲಿ 383.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT