ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘಟಿತರಾದಲ್ಲಿ ವೃತ್ತಿ ಸಮಸ್ಯೆ ಪರಿಹಾರ

Last Updated 2 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅಡುಗೆ ಕೆಲಸಗಾರರು, ಸಹಾಯಕ ಕಾರ್ಮಿಕರು ಸಂಘಟಿತರಾಗಿ ವೃತ್ತಿ ಸಮಸ್ಯೆ ಬಗೆಹರಿಸಿಕೊಳ್ಳುವ ಮೂಲಕ ಜೀವನಕ್ಕೆ ಭದ್ರತೆ ಪಡೆಯಬೇಕು ಎಂದು ಶಾಸಕ ಸಿ.ಟಿ.ರವಿ ಸಲಹೆ ನೀಡಿದರು.

ನಗರದ ಬೆಸುಗೆ ಭವನದಲ್ಲಿ ಬುಧವಾರ ಅಡುಗೆ ಕೆಲಸಗಾರರ-ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಸ್ತಿತ್ವಕ್ಕೆ ಬರುತ್ತಿರುವ ಸಂಘಟನೆಗೆ ಮಾರ್ಗದರ್ಶನ ಕೊರತೆ ಇದೆ. ಅನುಭವಿಗಳಿಂದ ಸಲಹೆ ಪಡೆದು ಸಂಘಟನೆ ಅಸಂಘಟಿತ ಕೆಲಸಗಾರರು, ಕಾರ್ಮಿಕರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಶ್ರಮಿಸಬೇಕು ಎಂದರು.

ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ ತಲಾ ರೂ. 1 ಲಕ್ಷ ಅನುದಾನ ನೀಡುವುದಾಗಿ ಸಿ.ಟಿ.ರವಿ ಮತ್ತು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಘೋಷಿಸಿದರು.

ದಾನಿ ಗೌರಮ್ಮ ಬಸವೇಗೌಡ ಮಾತನಾಡಿದರು. ಇದೇ ಸಂದರ್ಭ ಹಿರಿಯ ಅಡುಗೆ ಕೆಲಸಗಾರರಾದ ಸಿ.ಎಂ.ಈಶ್ವರಪ್ಪ ಹಾಗೂ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ರೇಖಾ ಹುಲಿಯಪ್ಪಗೌಡ, ಸಿಪಿಐನ ರಾಧಾ ಸುಂದರೇಶ್, ಅಡುಗೆ ಕೆಲಸಗಾರರ ಮತ್ತು ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಅಧ್ಯಕ್ಷ ಕೆ.ವಿ.ಸುರೇಶ್ ಕುಮಾರ್, ಗೌರವಾಧ್ಯಕ್ಷ ವೀರಭದ್ರೇಗೌಡ, ಜಿಲ್ಲಾ ಅಧ್ಯಕ್ಷ ನಾಗಭೂಷಣ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT