ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರನ್ನು ಬೆಂಬಲಕ್ಕೆ ಕೋಮಾರಪಂಥ ಮನವಿ

Last Updated 10 ಫೆಬ್ರುವರಿ 2012, 6:35 IST
ಅಕ್ಷರ ಗಾತ್ರ

ಕಾರವಾರ: ಪುನರ್ವಸತಿ, ಪರಿಹಾರ ಮತ್ತುಉದ್ಯೋಗ ಕಲ್ಪಿಸಿಕೊಡಬೇಕು ಎಂದು ಇಲ್ಲಿಯ ಜಿಲ್ಲಾಧಿಕಾರಿ ಕಚೇರಿ ಎದುರು 67 ದಿನಗಳಿಂದ ಧರಣಿ ಸತ್ಯಾಗ್ರಹ ನಡೆಸುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರ ವ್ಯಾಪ್ತಿಯ ಗ್ರಾಮ ಗಳ ಗ್ರಾಮಸ್ಥರನ್ನು ಅಖಿಲ ಕೋಮಾರ ಪಂಥ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಗುರುವಾರ ಭೇಟಿ ಮಾಡಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು.

ಸತ್ಯಾಗ್ರರ ನಿರತರನ್ನು ಉದ್ದೇಶಿಸಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಉದಯ ನಾಯ್ಕ ಮಾತನಾಡಿ, ಬಾಳೆ ಮನೆ, ಹರ್ಟುಗಾ, ಹರೂರ್, ಬಳಸೆ, ಕುಚೇಗಾರ, ಸುಳಗೇರಿ ಗ್ರಾಮಸ್ಥರು ಬದುಕಿನ ಹಕ್ಕಿಗಾಗಿ ಹೋರಾಟ ನಡೆಸು ತ್ತಿರುವುದು ನ್ಯಾಯ ಸಮ್ಮತವಾಗಿದೆ. ಅವರ ಬೇಡಿಕೆಗಳು ಕೇಂದ್ರದವರೆಗೆ ತಲುಪಿದೆ. ರಾಜ್ಯ ಸರ್ಕಾರ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಕೇಂದ್ರದ ಮೇಲೆ ಒತ್ತಡ ಹಾಕುವುದರ ಮೂಲಕ  ಹೋರಾಟಕ್ಕೆ ಅಂತ್ಯ ಹಾಡಬಹು ದಾಗಿದೆ ಎಂದರು.

ಅಖಿಲ ಕೋಮಾರಪಂತ ಸಂಘ ಅಧ್ಯಕ್ಷ ಪ್ರಭಾಕರ ಮಾಳ್ಸೇಕರ್ ಮಾತ ನಾಡಿ,  ಕೈಗಾ ಅಣು ಸ್ಥಾವರದಿಂದ ಪರಿ ಸರದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ವಿಕಿರಣದ ಪರಿಣಾಮ ದಿಂದಾಗಿ ಜೀವವೈವಿಧ್ಯಗಳು ಕಣ್ಮರೆಯಾ ಗುತ್ತಿವೆ. ಕೈಗಾ ಅಧಿಕಾರಿಗಳು ಹವಾನಿ ಯಂತ್ರಿತ ಕೊಠಡಿಯಲ್ಲಿ ಕುಳಿತು ಅಣು ಸ್ಥಾವರದಿಂದ ಯಾವುದೇ ತೊಂದರೆ ಯಿಲ್ಲ ಎಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಜಿಲ್ಲಾ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಸಮಾಜ ಸೇವಕಿ ಅನು ಕಳಸ, ಸಿಐಟಿಯು ಪ್ರಧಾನ ಕಾರ್ಯದರ್ಶಿ ಯಮುನಾ     ಗಾಂವ್ಕರ್, ಹೋರಾಟ ಸಮಿತಿಯ ಅಧ್ಯಕ್ಷ ಶಾಮನಾಥ ನಾಯ್ಕ, ಸಂತೋಷ ಗೌಡ, ಸುನೀಲ್ ನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT