ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಅಡ್ಡಪಲ್ಲಕ್ಕಿ ಉತ್ಸವ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ವಿಜಾಪುರ: ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಅಡ್ಡಪಲ್ಲಕ್ಕಿ ಮಹೋತ್ಸವ ಮಂಗಳವಾರ ಇಲ್ಲಿ ವಿಜೃಂಭಣೆಯಿಂದ ಜರುಗಿತು.

ಇಲ್ಲಿಯ ಉಕ್ಕಲಿ ರಸ್ತೆಯಲ್ಲಿರುವ ವಿಶ್ವಶಾಂತಿ ಪೀಠದಲ್ಲಿ ಜಗದಾರಾದ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಜಾತ್ರಾ ಮಹೋತ್ಸವದ ಅಂಗವಾಗಿ ಈ ಅಡ್ಡಪಲ್ಲಕ್ಕಿ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕಾಶಿ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದಂಗಳವರ ನೇತೃತ್ವದಲ್ಲಿ ಪೂರ್ಣಕುಂಭ ಮೇಳದೊಂದಿಗೆ ನಡೆದ ಈ ಮಹೋತ್ಸವದಲ್ಲಿ ವಿಜಾಪುರ ಮತ್ತು ಜಾಲಹಳ್ಳಿ ಮಹಾಸಂಸ್ಥಾನ ಬೃಹನ್ಮಠದ ಜಯಶಾಂತೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಬಲೇಶ್ವರದ ಡಾ.ಮಹಾದೇವ ಶಿವಾಚಾರ್ಯರು, ಸಿಂದಗಿ ಸಾರಂಗಮಠದ ಡಾ.ಪ್ರಭು ಸಾರಂಗದೇವ ಶಿವಾಚಾರ್ಯರು ಹಾಗೂ ವಿವಿಧ ಮಠಾಧೀಶರು ಕಾಲ್ನಡಿಗೆಯಲ್ಲಿ ಪಾಲ್ಗೊಂಡಿದ್ದರು.

ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಈ ಅಡ್ಡಪಲ್ಲಕ್ಕಿ ಮಹೋತ್ಸವದಲ್ಲಿ ಸಹಸ್ರಾರು ಸುಮಂಗಲೆಯರು ಪೂರ್ಣಕುಂಭಗಳನ್ನು ಹೊತ್ತು ಭಕ್ತಿ ಮೆರೆದರು. ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚುತ್ತ, ಆಗಾಗ ಹೆಜ್ಜೆ ಹಾಕುತ್ತ ಉತ್ಸವಕ್ಕೆ ಕಳೆ ಕಟ್ಟಿದರು.

ಜಾನಪದ ತಂಡಗಳ ಕಲಾ ವೈಭವ, ಕುದುರೆ ಸಾರೋಟಿನ ಆಕರ್ಷಣೆ, ಹಲಗೆ-ಡೊಳ್ಳಿನ ಮೇಳಗಳು ಮೆರಗು ಹೆಚ್ಚಿಸಿದ್ದವು.

~ಧರ್ಮದಿಂದಲೇ ಬೆಳಕು. ಎಲ್ಲರೂ ಸದ್ಗುಣ, ಪರೋಪಕಾರವನ್ನು ಮೈಗೂಡಿಸಿಕೊಂಡು ಧರ್ಮವಂತರಾಗಿ ಬಾಳಬೇಕು. ಅಂದಾಗ ಸುಖೀ ಸಮಾಜ ನಿರ್ಮಾಣ ಸಾಧ್ಯ~ ಎಂದು ಜಗದ್ಗುರುಗಳು ಆಶೀರ್ವಚನ ನೀಡಿದರು.
ಸಂಜೆ ಮಠದಲ್ಲಿ ಮಹಾರಥೋತ್ಸವ, ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥದ ಬಿಡುಗಡೆ, ಶಿವಯೋಗ ಸಂಗೋಷ್ಠಿ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT