ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಗೆ ಬಹುಶಿಸ್ತೀಯ ನೆಲೆ ಮುಖ್ಯ

Last Updated 11 ಫೆಬ್ರುವರಿ 2012, 9:45 IST
ಅಕ್ಷರ ಗಾತ್ರ

ತಿಪಟೂರು: ಅಂತರ್‌ಶಿಸ್ತೀಯ ನೆಲೆಯಲ್ಲಿ ವಿಶಾಲ ದೃಷ್ಟಿಕೋನದಿಂದ ಅಧ್ಯಯನ ಮಾಡಿದರೆ ಮಾತ್ರ ಮೌಲ್ಯಯುತ ಸಂಶೋಧನೆ ಸಾಧ್ಯ ಎಂದು ಬೆಂಗಳೂರು ಸೈಂಟ್ ಕ್ಲಾರೆಟ್ ಕಾಲೇಜು ಪ್ರಾಧ್ಯಾಪಕ ಡಾ.ಯೋಗಾನಂದ ತಿಳಿಸಿದರು.

ಇಲ್ಲಿನ ಕಲ್ಪತರು ವಿದ್ಯಾಸಂಸ್ಥೆಯ ಸಂಶೋಧನೆ ಮತ್ತು ಕೈಗಾರಿಕೆ ಸಲಹಾ ಕೇಂದ್ರದಿಂದ ಗುರುವಾರ ನಡೆದ `ಇತ್ತೀಚಿನ ಸಂಶೋಧನೆಯ ವಿದ್ಯಾಮಾನಗಳ~ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿ, ಏಕಮುಖ ಅಧ್ಯಯನದಿಂದ ವಿಷಯ ಪರಿಪೂರ್ಣತೆ ಮತ್ತು ವೈವಿಧ್ಯ ಆಯಾಮ ದಕ್ಕಲಾರದು. ಒಂದಕ್ಕೊಂದು ಸಂಬಂಧ ಎಣೆದಿರುವ ಕರುಳುಬಳ್ಳಿ ಅರಿವು ಇಲ್ಲದಿದ್ದರೆ ಸಂಶೋಧನೆ ಸೀಮಿತ ಪರಿದಿಯಲ್ಲಿ ಉಳಿಯುತ್ತದೆ ಎಂದರು.

ಸಂಶೋಧನಾ ಕೇಂದ್ರದ ಸಂಯೋಜಕ ಡಾ.ಸಿದ್ದಲಿಂಗಯ್ಯ ಹೊಲತಾಳ್ ಮಾತನಾಡಿ, ಕೆರೆಕಟ್ಟೆಗಳಿಗೆ ಹಲವು ಆಯಾಮಗಳಿರುವಂತೆ ಪ್ರತಿಯೊಂದು ವಿಷಯದ ಸುತ್ತ ಮೇಲ್ನೋಟದ, ಆಳದ ಮತ್ತು ಸಂಕೀರ್ಣ ಸಂಬಂಧ ಬೆಸೆದಿರುತ್ತವೆ. ಸಂಶೋಧಕನಿಗೆ ವಿಷಯ ಮೂಲದ ದಿಕ್ಕು ದೆಸೆ, ಜಾಡು, ಕವಲು ಗೊತ್ತಿರಬೇಕು ಎಂದರು.

ಕೆಐಟಿ ಪ್ರಾಂಶುಪಾಲ ಡಾ.ಎಸ್.ಎಂ. ಶಶಿಧರ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಟಿ.ಎಸ್. ನಾಗರಾಜಶೆಟ್ಟಿ, ಕಲ್ಪತರು ವಿದ್ಯಾಸಂಸ್ಥೆ ಉಪಾಧ್ಯಕ್ಷರಾದ ಟಿ.ಯು. ಜಗದೀಶಮೂರ್ತಿ, ಟಿ.ಎಂ. ಚಂದ್ರ ಶೇಖರ್, ಪ್ರಾಧ್ಯಾಪಕರಾದ ಡಾ. ಆರ್. ಎಸ್. ಸದಾಶಿವಯ್ಯ, ಪ್ರೊ.ಸಾವಿತ್ರಿ ಹೊಸಮನಿ, ಪ್ರೊ.ಎಸ್.ಪೂರ್ಣಾದೇವಿ, ಪ್ರೊ.ಎಚ್.ಸಿ.ಜಗದೀಶ್, ಪ್ರೊ. ಕುಮಾರಸ್ವಾಮಿ, ಪ್ರೊ.ನಾಗರಾಜ್, ಪ್ರೊ.ಸಿಎಂಎಸ್ ಲೋಕೇಶ್ ಇದ್ದರು.

ದೇವಾಲಯ ವಾರ್ಷಿಕೋತ್ಸವ
ಕುಣಿಗಲ್: ತಾಲ್ಲೂಕು ಭಾವಸಾರ ಕ್ಷತ್ರಿಯ ಮಂಡಲಿಯ ವತಿಯಿಂದ ಪಾಂಡುರಂಗ ರುಕುಮಾಯಿ ದೇವಸ್ಥಾನದ 7ನೇ ವಾರ್ಷಿಕೋತ್ಸವ ಸಮಾರಂಭ ಫೆ. 11 ಮತ್ತು 12ರಂದು ಭದ್ರಾವತಿ ಗೋಂದಿ ಆಶ್ರಮದ ನಾಮದೇವಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯಲಿದೆ ಎಂದು ಮಂಡಲಿ ಅಧ್ಯಕ್ಷ ಕೆ.ಜಿ.ಕೃಷ್ಣಮೂರ್ತಿ ಅಷ್ಟಕರ್ ತಿಳಿಸಿದ್ದಾರೆ.

ನಾಳೆ ಹಾಸ್ಟೆಲ್ ಉದ್ಘಾಟನೆ
ಪಾವಗಡ:  ನಾರಾಯಣಮ್ಮ ಮತ್ತು ಡಿ.ಟಿ.ಹನುಮಂತರಾಯಪ್ಪ ಸ್ಮಾರಕ ಕಮ್ಮ ಉಚಿತ ವಿದ್ಯಾರ್ಥಿನಿಲಯ ಉದ್ಘಾಟನೆ ಮತ್ತು ಸಾಕಮ್ಮ ಗಂಗಿನೇನಿ ರಾಮಯ್ಯ ಸ್ಮಾರಕ ವಿದ್ಯಾರ್ಥಿನಿಯರ ಹಾಸ್ಟೆಲ್ ಭೂಮಿ ಪೂಜೆ ಶಿಲನ್ಯಾಸ ಕಾರ್ಯಕ್ರಮ ಫೆ. 12ರಂದು ನಡೆಯಲಿದೆ ಎಂದು ಕಮ್ಮ ಚಾರಿಟೆಬಲ್ ಉಪಾಧ್ಯಕ್ಷ  ಡಾ. ಸವೆಂಕಟರಾಮಯ್ಯ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ರೂ. ಒಂದು ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದ್ದು, ವಿದ್ಯಾರ್ಥಿನಿಯರ ಹಾಸ್ಟೆಲ್‌ಗೂ ಶಂಕುಸ್ಥಾಪನೆ ಮಾಡಲಾ ಗುತ್ತಿದೆ. ಬಡ ವಿದ್ಯಾರ್ಥಿಗಳು ವಿದ್ಯೆ ಯಿಂದ ವಂಚಿತವಾಗಬಾರದೆಂಬುದು ಆಶಯ ವಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಮ್ಮ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷರಾದ ಟಿ.ಎನ್. ನರಸಿಂಹಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಸ್.ವಿ.ಗೋವಿಂದಪ್ಪ, ತಾ.ಪಂ. ಸದಸ್ಯ ರಾಮಾಂಜಿನರೆಡ್ಡಿ, ಪ್ರಾಂಶುಪಾಲ ನಾಗೇಂದ್ರ, ವಾರ್ಡನ್ ಪ್ರಭಾಕರ್ ಉಪಸ್ಥಿತರಿದ್ದರು.

20ರಿಂದ ಕಗ್ಗೆರೆ ಜಾತ್ರೆ
ಕುಣಿಗಲ್: ತಾಲ್ಲೂಕಿನ ಕಗ್ಗೆರೆ ತೋಂಟದ ಸಿದ್ದಲಿಂಗೇಶ್ವರ ಸ್ವಾಮಿ ಜಾತ್ರೆಯು ಫೆ. 20ರಿಂದ ಆರಂಭವಾಗಿ ಮಾರ್ಚ್ 4ರ ವರೆಗೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ಜಾತ್ರೆ ಆರಂಭದ ದಿನದಿಂದಲೂ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿದ್ದು, ಫೆ. 28ರಂದು ರಾತ್ರಿ 10 ಗಂಟೆಗೆ ಮುತ್ತಿನ ಪಲ್ಲಕ್ಕಿ ಉತ್ಸವ ಜರುಗಲಿದೆ. ಮರುದಿನ ಸಿದ್ದಲಿಂಗೇಶ್ವರ ಸ್ವಾಮಿ ಮಹಾ ರಥೋತ್ಸವ ನಡೆಯಲಿದೆ. ಮಾ. 3ರಂದು ಬೆಳ್ಳಿ ಪಲ್ಲಕ್ಕಿ ಉತ್ಸವ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT