ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆಯಿಂದ ಸಮಾಜ ಅಭಿವೃದ್ಧಿ

Last Updated 9 ಜನವರಿ 2012, 19:30 IST
ಅಕ್ಷರ ಗಾತ್ರ

ಗುಲ್ಬರ್ಗ: ವಿಜ್ಞಾನ ಕ್ಷೇತ್ರದ ಸಂಶೋಧನೆ ಹೊಸ ಆವಿಷ್ಕಾರಕ್ಕೆ ಕಾರಣವಾದರೆ, ಕಲಾಕ್ಷೇತ್ರದ ಸಂಶೋಧನೆ ಹೊಸ ಚಿಂತನೆಗೆ ಆಯಾಮ ನೀಡುತ್ತದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಎಲ್. ಹಿರೇಮಠ ತಿಳಿಸಿದರು.

ಸಮಾಜಕಾರ್ಯ ಮತ್ತು ಸಮಾಜ ವಿಜ್ಞಾನ ವಿಭಾಗಗಳ ಆಶ್ರಯದಲ್ಲಿ ಸಂಶೋಧನ ವಿಧಾನ ಕುರಿತು ಸೋಮವಾರ ಆಯೋಜಿಸಿದ್ದ 3 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸಂಶೋಧಕರು  ಸಮಾಜದಲ್ಲಿನ ಸಮಸ್ಯೆ ಮತ್ತಿತರ ವಿಷಯಗಳ ಕುರಿತು ಆಳವಾದ ಅಧ್ಯಯನ ನಡೆಸಬೇಕಾಗುತ್ತದೆ. ಈ ಮೂಲಕ ಸಮಾಜದ ಅಭಿವೃದ್ಧಿಗೆ ಕಾರಣರಾಗಬೇಕು ಎಂದು ಸಂಶೋಧನ ವಿಧಾನಗಳ ಕುರಿತು ವಿವರಣೆ ನೀಡಿದರು.

ಮೂರ್ತರೂಪದಲ್ಲಿರುವುದನ್ನು ನಿಖರವಾದ ಸೂತ್ರಗಳ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ನಮಗೆ ಬೇಕಾದುದನ್ನು ಪಡೆಯಬಹುದು. ಆದರೆ ಅಮೂರ್ತವಾಗಿರುವುದನ್ನು ಮೂರ್ತ ರೂಪಕ್ಕೆ ತರುವ ಕಲಾ ಕ್ಷೇತ್ರದ ಸಂಶೋಧನೆ ತುಂಬಾ ಕಠಿಣವಾದು ಎಂದು ಅಭಿಪ್ರಾಯಪಟ್ಟರು.

ಸಂಶೋಧನೆಯಲ್ಲಿ ತೊಡಗುವ ಮುನ್ನ ಆ ಕ್ಷೇತ್ರದ ಪೂರ್ವೇತಿಹಾಸ ಅರಿತಿರಬೇಕು. ವಿಷಯದ ಆಯ್ಕೆ ಮತ್ತು ಗ್ರಹಿಕೆಯ ನೆಲೆ ಅರಿತವರಾಗಿರಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ. ಛಾಯಾ ದೇಗಾಂವಕರ ತಿಳಿಸಿದರು.

ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ.ಎಸ್. ಮಾಲಿಪಾಟೀಲ ಪ್ರಾಸ್ತವಿಕವಾಗಿ ಮಾತನಾಡಿದರು. ಬನಶಂಕರಯ್ಯ ಮಸ್ಕಿ ಮಠ  ನಿರೂಪಿಸಿದರು. ಶೇಖರ ಎಸ್. ಸಲಗರ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT