ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ರಕ್ಷಣೆಯ ಶಿಕ್ಷಣ- ಸಲಹೆ

Last Updated 21 ಡಿಸೆಂಬರ್ 2012, 20:01 IST
ಅಕ್ಷರ ಗಾತ್ರ

ನೆಲಮಂಗಲ: ಮಕ್ಕಳು ಯೌವನದತ್ತ ಸಾಗುವ ಸಂಧಿ ಕಾಲದಲ್ಲಿ ನೈತಿಕ ಮೌಲ್ಯಗಳ ಸಂಸ್ಕಾರ ನೀಡಿ ಅವರು ಸಂಸ್ಕೃತಿಯ ರಕ್ಷಕರಾಗುವ ಶಿಕ್ಷಣ ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಹಂಗಾಮಿ ನಿರ್ದೇಶಕಿ ಉಮಾಬಸವಣ್ಣ್ಯೆಪ್ಪ ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯು ಯಂಟಗಾನಹಳ್ಳಿ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ವಿಶ್ವಶಾಂತಿ ಆಶ್ರಮದಲ್ಲಿ ಏರ್ಪಡಿಸಿದ್ದ ವಿಭಾಗೀಯ ಮಟ್ಟದ ಏಳು ದಿನಗಳ ಬಾಲಕಿಯರ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೆಂಗಳೂರು ವಿಭಾಗದ ಹತ್ತು ಜಿಲ್ಲೆಗಳಿಂದ ಪಿಯು ಕಾಲೇಜಿನ 200 ಬಾಲಕಿಯರು ಶಿಬಿರದಲ್ಲಿ ಭಾಗವಹಿಸಿದ್ದರು.

ಏಳು ದಿನಗಳಲ್ಲಿ ಆಶ್ರಮದ ಸ್ಥಾಪಕ ಕೇಶವ ದಾಸರ ಶಾಂತಿ ವನದ ರಸ್ತೆ ನಿರ್ಮಾಣ, ಸ್ವಚ್ಛತೆ, ಸುತ್ತಲಿನ ಗ್ರಾಮಗಳಲ್ಲಿ ಜಾಥಾ ನಡೆಸಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು. ಆಶ್ರಮದ ಅಧ್ಯಕ್ಷ ರಮಾ ಕೇಶವದಾಸರ ಸಾನಿಧ್ಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಶಾಸಕ ಎಂ.ವಿ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ನಿತ್ಯ ಬೌದ್ಧಿಕ ಕಾರ್ಯಕ್ರಮದಲ್ಲಿ ಡಾ.ನಾ.ಸೋಮೇಶ್ವರ್, ಡಾ.ಸಿ.ಟಿ.ಮುರ್ತಿ, ಪ್ರೊ.ವೀರಭದ್ರಪ್ಪ, ಡಿ.ಪಾಲಾಕ್ಷಯ್ಯ, ಪ್ರೊ.ಗುರುರಾಜ್ ದಾವಣಗೆರೆ, ಡಾ.ಎಚ್.ಎಸ್.ಗೋಪಾಲರಾವ್ ವಿಶೇಷ ಉಪನ್ಯಾಸ ನೀಡಿದರು.  ಯೋಜನಾಧಿಕಾರಿಗಳಾದ ಮಧುಸೂದನ್, ಎಚ್.ಬಿ.ಪ್ರಕಾಶ್, ಎಸ್.ಪ್ರಕಾಶ್, ಬಿ.ನಾಗಮಣಿ, ಪಿ.ಎಸ್.ಮಂಜುಳಾ, ಸುಗುಣಾ ದೇವಿ ಶಿಬಿರ ಸಂಘಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT