ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ, ಜನತಾದರ್ಶನಕ್ಕೆ ವೆಬ್‌ಸೈಟ್‌

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಕಾಲ ವೆಬ್‌ಸೈಟ್‌ ಮೂಲಕ ಅರ್ಜಿ ಹಾಗೂ ದೂರುಗಳ ವಿಲೇವಾರಿಗೆ ಜಿಲ್ಲಾಧಿಕಾರಿಗಳಿಗೂ ಅವಕಾಶ ನೀಡಲು ಸರ್ಕಾರ ನಿರ್ಧ­ರಿಸಿದೆ. ಮುಖ್ಯಮಂತ್ರಿಯವರ ಸಚಿವಾ­ಲಯದ ನೇರ ಉಸ್ತುವಾರಿಯಲ್ಲಿ ಈ ವೆಬ್‌ಸೈಟ್‌ ಮೂಲಕ ಅರ್ಜಿ, ದೂರು­ಗಳ ವಿಲೇವಾರಿ ನಡೆಯಲಿದೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್‌ ನೇತೃತ್ವದಲ್ಲಿ ಸೋಮ­ವಾರ ವಿಧಾನಸೌಧದಲ್ಲಿ ನಡೆದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆ­ಯಲ್ಲಿ ಸಿಬ್ಬಂದಿ ಮತ್ತು ಆಡಳಿತ ಸುಧಾ­ರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌  ಈ ವಿಷಯ ತಿಳಿಸಿದರು.

ಸಕಾಲಕ್ಕೆ ಸಂಬಂಧಿಸಿದ ದೂರುಗಳ ವಿಲೇವಾರಿಗಾಗಿ www.sakala.kar.­nic.in ಎಂಬ ವೆಬ್‌ಸೈಟ್‌ ರೂಪಿಸ­ಲಾಗಿದೆ. ಮುಖ್ಯಮಂತ್ರಿಯವರ ಜನತಾ­­ದರ್ಶನದಲ್ಲಿ ಸಲ್ಲಿಕೆಯಾಗುವ ಅರ್ಜಿ­ಗಳ ವಿಲೇವಾರಿಗೂ ವೆಬ್‌­ಸೈಟ್‌ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಮುಖ್ಯಮಂತ್ರಿ ಅವರು ಜಿಲ್ಲಾ ಉಸ್ತುವಾರಿ ಕಾರ್ಯ­ದರ್ಶಿಗಳ ಸಭೆ­ಯನ್ನು ನಿಗದಿ ಮಾಡಿ­ದ್ದರು.

ಆದರೆ, ರಾಷ್ಟ್ರಕವಿ ಡಾ.ಜಿ.­ಎಸ್‌.­­ಶಿವರುದ್ರಪ್ಪ ಅವರ ನಿಧನದ ಕಾರಣ­ದಿಂದ ಅವರು ಸಭೆಯಲ್ಲಿ ಭಾಗಿಯಾಗ­ಲಿಲ್ಲ. ಮುಖ್ಯ ಕಾರ್ಯ­ದರ್ಶಿ ಕೌಶಿಕ್‌ ಮುಖರ್ಜಿ ಕೂಡ ಸಭೆಯಲ್ಲಿ ಹಾಜರಿ­ರಲಿಲ್ಲ. ಮುಖ್ಯ­ಮಂತ್ರಿ­ಯವರ ಸೂಚನೆ­ಯಂತೆ ಉಮೇಶ್‌ ಅವರೇ ಸಭೆ ನಡೆಸಿದರು.

 ಶ್ರದ್ಧಾಂಜಲಿ ಮರೆತಿದ್ದರು: ಸಭೆ ಆರಂಭಕ್ಕೆ ಕೆಲ ಗಂಟೆಗಳ ಮೊದಲೇ ರಾಷ್ಟ್ರಕವಿ ಡಾ. ಜಿ.ಎಸ್‌.ಶಿವರುದ್ರಪ್ಪ ಇಹಲೋಕ ತ್ಯಜಿಸಿದ್ದರು. ಈ ವಿಷಯ ಸಭೆಯಲ್ಲಿದ್ದ ಎಲ್ಲರಿಗೂ ಗೊತ್ತಿತ್ತು. ಆದರೂ,  ಆರಂಭದಲ್ಲಿ ಶ್ರದ್ಧಾಂಜಲಿ ಸಲ್ಲಿಸುವುದನ್ನು  ಮರೆತೇಬಿಟ್ಟರು.

ಸ್ವಲ್ಪ ಸಮಯದ ಬಳಿಕ ಉಮೇಶ್‌ ಅವರ ಬಳಿ ತೆರಳಿದ ಕಿರಿಯ ಅಧಿಕಾರಿ­ಯೊಬ್ಬರು ಪಿಸುದನಿಯಲ್ಲಿ ಏನನ್ನೋ ಹೇಳಿದರು. ನಂತರ ಜಿ.ಎಸ್‌.ಎಸ್‌ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷ  ಮೌನ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT