ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಾಲ ಯೋಜನೆ ಕುರಿತು ತರಬೇತಿ ಕಾರ್ಯಕ್ರಮ

Last Updated 17 ಆಗಸ್ಟ್ 2012, 5:05 IST
ಅಕ್ಷರ ಗಾತ್ರ

ಬೀದರ್: ಸಕಾಲ ಯೋಜನೆ ಕುರಿತು ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಆಯೋಜಿಸಲಾಗಿರುವ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಡಳಿತ ಆಯೋಜಿಸಿದ್ದು, ಜಿಲ್ಲಾಧಿಕಾರಿ ನೂರ್ ಮನ್ಸೂರ್ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು, `ಕಾಯ್ದೆಯ ಪ್ರಕಾರ ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸಬೇಕು. ಈ  ಮೂಲಕ ಸೇವೆಯ ಗುಣಮಟ್ಟ ಉತ್ತಮಪಡಿಸಲು ಸಾಧ್ಯವಿದೆ. ನಿಗದಿತ ಅವಧಿಯ ಒಳಗೆ ಕಡ್ಡಾಯವಾಗಿ ಸೇವೆ ಒದಗಿಸುವುದು ಕಚೇರಿಯ ಎಲ್ಲರ ಜವಾಬ್ದಾರಿಯಾಗಿದೆ~ ಎಂದರು.

ಮುಂದಿನ ದಿನಗಳಲ್ಲಿ ಸರ್ಕಾರದ ಎಲ್ಲಾ ಸೇವೆಗಳು ಯೋಜನೆಯ ವ್ಯಾಪ್ತಿಗೆ ಒಳಪಡಲಿವೆ. ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೆಲಸದ ಬಗ್ಗೆ ತಮ್ಮ ಮನಃಸ್ಥಿತಿಯನ್ನು ಬದಲಿಸಿಕೊಂಡು ಕರ್ತವ್ಯದಲ್ಲಿ ವೃತ್ತಿಪರತೆಯನ್ನು ತಂದುಕೊಳ್ಳಬೇಕು ಎಂದರು.

ಅತಿಥಿ ಉಪನ್ಯಾಸಕರಾಗಿ ನಿವೃತ್ತ ಸಹಾಯಕ ಆಯು ಮಲ್ಲಿಕಾರ್ಜುನಪ್ಪ ಹತ್ತೆ, ನಿವೃತ್ತ ಉಪ ತಹಶೀಲ್ದಾರ್ ಸಿ.ಘಾಳೆಪ್ಪ, ನಿವೃತ್ತ ಸಹಾಯಕ ಆಡಳಿತಾಧಿಕಾರಿ ಅಶೋಕ ಹಳ್ಳಿಖೇಡಕರ, ಹಾಗೂ ಶಿರಸ್ತೆದಾರರಾದ ಬಸವರಾಜ ಅಂಬರಶೆಟ್ಟಿ  ಆಗಮಿಸಿದರು. ಉಪ ಪ್ರಾಚಾರ್ಯ ಬಿ.ಎನ್. ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT