ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವರ ಡಾಕ್ಟರೇಟ್ ಪದವಿ ರದ್ದು

Last Updated 24 ಫೆಬ್ರುವರಿ 2011, 16:25 IST
ಅಕ್ಷರ ಗಾತ್ರ

ಬರ್ಲಿನ್ (ಪಿಟಿಐ): ಜರ್ಮನಿಯ ರಕ್ಷಣಾ ಸಚಿವ ಕಾರ್ಲ್- ಥಿಯೊದರ್ ಗಟೆನ್‌ಬರ್ಗ್ ಅವರು ಕೃತಿ ಚೌರ್ಯ ಮಾಡಿದ ಆರೋಪದಲ್ಲಿ ಸಿಲುಕಿದ್ದು ಅವರ ಡಾಕ್ಟರೇಟ್ ಪದವಿಯನ್ನು ವಾಪಸ್ ಪಡೆಯಲಾಗಿದೆ.

ಗಟೆನ್‌ಬರ್ಗ್ ಸಲ್ಲಿಸಿದ್ದ ಮಹಾಪ್ರಬಂಧದ ಅನೇಕ ಭಾಗಗಳು ಕೃತಿ ಚೌರ್ಯ ಮಾಡಿ ರಚಿಸಿದಂಥವು ಎಂಬುದು ಬೆಳಕಿಗೆ ಬಂದ ಒಂದು ವಾರದ ಬಳಿಕ ಬೈರೂತ್‌ನ ವಿಶ್ವವಿದ್ಯಾಲಯವು ಈ ಕ್ರಮ ಕೈಗೊಂಡಿದೆ.

ಜರ್ಮನಿಯ ಸಂಸತ್‌ನಲ್ಲಿ ಗಟೆನ್‌ಬರ್ಗ್ ಅವರು ಈ ತಪ್ಪಿಗಾಗಿ ‘ಹೃದಯದಾಳದಿಂದ’ ಕ್ಷಮೆ ಕೋರುವುದಾಗಿ ತಿಳಿಸಿದ್ದರೂ ವಿವಿ ಬುಧವಾರ ಅವರ ಡಾಕ್ಟರೇಟ್ ಪದವಿ ಹಿಂದಕ್ಕೆ ಪಡೆದಿದೆ. ಈ ಆರೋಪಗಳ ಆಧಾರದ ಮೇಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಅವರು ನಿರಾಕರಿಸಿದ್ದಾರೆ.

‘ಪ್ರಜಾಪೂರ್ವಕವಾಗಿ ಅಥವಾ ಉದ್ದೇಶಪೂರ್ವಕವಾಗಿ ನಾನು ವಂಚಿಸಿಲ್ಲ. ಆದರೆ ನಾನು ಪ್ರಮಾದ ಮಾಡಿದ್ದೇನೆ. ಬಿಡುವಿಲ್ಲದ ಕಾರ್ಯಭಾರದಿಂದ ಈ ತಪ್ಪು ಆಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT