ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ಸ್‌ಗೆ ಕಿಮ್ಮತ್ತು ನೀಡದ ನಶೀದ್

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಾಲೆ (ಪಿಟಿಐ): ತಾವು ಅಧ್ಯಕ್ಷರಾಗಿದ್ದಾಗ ನ್ಯಾಯಮೂರ್ತಿಯೊಬ್ಬರನ್ನು ಬಂಧಿಸಲು ಹೊರಡಿಸಿದ್ದ ವಿವಾದಾತ್ಮಕ ಆದೇಶದ ಹಿನ್ನೆಲೆಯಲ್ಲಿ ತಮಗೆ ಪೊಲೀಸರು ಜಾರಿಗೊಳಿಸಿರುವ ಸಮನ್ಸ್‌ನ್ನು ಮಾಲ್ಡೀವ್ಸ್ ಪದುಚ್ಯುತ ಅಧ್ಯಕ್ಷ ಮೊಹಮ್ಮದ್ ನಶೀದ್ ತಿರಸ್ಕರಿಸಿದ್ದಾರೆ.

ನಶೀದ್ ಅಧ್ಯಕ್ಷರಾಗಿದ್ದಾಗ ನ್ಯಾಯಮೂರ್ತಿಯೊಬ್ಬರನ್ನು ಬಂಧಿಸಲು ಸೇನೆಗೆ ಆದೇಶಿಸಿದ್ದರು. ಈ ಕುರಿತು ಇದೀಗ ಪೊಲೀಸರು ತನಿಖೆ ನಡೆಸುತ್ತಿದ್ದು ನಶೀದ್ ಹೇಳಿಕೆ ದಾಖಲಿಸಿಕೊಳ್ಳುವ ಸಲುವಾಗಿ ಸಮನ್ಸ್ ಜಾರಿಗೊಳಿಸಿದ್ದಾರೆ.

ಆದರೆ, ಈ ಸಮನ್ಸ್‌ಗೆ ತಮ್ಮ ನಾಯಕ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಶೀದ್ ಅವರ ಆಪ್ತ ಮೂಲಗಳು ತಿಳಿಸಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT