ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯ ಪ್ರಜ್ಞೆ ರೂಢಿಸಿಕೊಳ್ಳಲು ಸಲಹೆ

Last Updated 20 ಜುಲೈ 2013, 7:39 IST
ಅಕ್ಷರ ಗಾತ್ರ

ರಾಣೆಬೆನ್ನೂರು: `ದೌರ್ಬಲ್ಯಗಳನ್ನು ದೂರ ಮಾಡಿದರೆ ಜೀವನದಲ್ಲಿ ಬರುವ ಕಠಿಣ ಸಮಸ್ಯೆಗಳನ್ನು ಎದುರಿಸಲು ಸಾಧ್ಯ' ಎಂದು ಕೇಂದ್ರ ನಾಗರಿಕ ಸೇವಾ ಆಯೋಗ ಪರೀಕ್ಷೆಯಲ್ಲಿ 32ನೇ ರ‌್ಯಾಂಕ್ ಪಡೆದ ತಾಲ್ಲೂಕಿನ ಕರೂರು ಗ್ರಾಮದ  ಡಾ. ರಾಜೇಂದ್ರ ಹೇಳಿದರು.

ನಗರದ ಸ್ಟೇಶನ್ ರಸ್ತೆಯ ವರ್ತಕರ ಸಮುದಾಯ ಭವನದಲ್ಲಿ ನಡೆದ ಲಯನ್ಸ್ ಮತ್ತು ಲಯನೆನ್ ಸಂಸ್ಥೆಯ 2013-14ನೇ ಸಾಲಿನ ನೂತನ ಪದಾಧಿಕಾರಿಗಳ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಪ್ರಾಥಮಿಕ ಹಂತದಿಂದಲೇ ಕನ್ನಡ ಹಾಗೂ ಇಂಗ್ಲೀಷ್ ಪತ್ರಿಕೆಗಳನ್ನು ಓದಬೇಕು, ಸಮಯ ಪ್ರಜ್ಞೆಯನ್ನು ರೂಢಿಸಿಕೊಂಡು ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸಿದಾಗ ಗುರಿ ಮುಟ್ಟಲು ಸಾಧ್ಯ' ಎಂದರು.

`ಗ್ರಾಮೀಣ ಹಾಗೂ ನಗರ ಪ್ರದೇಶಗಳು ಎಂಬ ಮನೋಭಾವ ದೂರವಾಗಬೇಕು, ಸಂಘ ಸಂಸ್ಥೆಗಳು ನಗರ ಪ್ರದೇಶಗಳಿಗೆ ಸೀಮಿತವಾಗದೇ ಗ್ರಾಮೀಣ ಪ್ರದೇಶ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸಬೇಕು' ಎಂದು ರಾಜೇಂದ್ರ ಸಲಹೆ ನೀಡಿದರು.

ಲಯನ್ಸ್‌ನ ನಿಕಟಪೂರ್ವ ಜಿಲ್ಲಾ ಗೌರ‌್ನರ್ ಎಂ.ಬಿ.ಸದಾಶಿವ ಅವರು ಲಯನ್ಸ್ ಅಧ್ಯಕ್ಷ ಚಂದ್ರಣ್ಣ ಸಾಮಂತ್ರಿ, ಕಾರ್ಯದರ್ಶಿ ಎಂ.ವಿ. ಮಲ್ಲೂರು ಮತ್ತು ಲಯನೆಸ್ ಸಂಸ್ಥೆಯ ಅಧ್ಯಕ್ಷೆ ಜ್ಯೋತಿ ಹಿರೇಮಠ ಹಾಗೂ ಕಾರ್ಯದರ್ಶಿ ಸರೋಜಾ ಅಜ್ಜೋಡಿಮಠ ಹಾಗೂ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ನಿಕಟಪೂರ್ವ ಅಧ್ಯಕ್ಷ ಸಿ.ಎಸ್ ಕಲ್ಯಾಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಎಚ್.ಕೆ. ಶಿವಕುಮಾರ ಅವರು ಲಯನ್ಸ್ ಸಂಸ್ಥೆ ಸಾರ್ವಜನಿಕರಿಗೆ ಅನುಕೂಲವಾಗುವ ಉತ್ತಮ ಕೆಲಸಗಳನ್ನು ಮಾಡಲಿ ಎಂದು ಶುಭ ಹಾರೈಸಿದರು.

ಎಂ.ಎಸ್.ಅರಕೇರಿ, ಜಿ.ಪಿ.ಪಾಟೀಲ, ಅನಿಲ್‌ಕುಮಾರ ಕಲಾಲ, ಪ್ರೇಮಾ ಅರಕೇರಿ, ನೂರಜಾನ್ ನಂದ್ಯಾಲ, ಸುಜಾತಾ ಸಾಮಂತ್ರಿ, ಎಲ್.ಜಿ.ಶೆಟ್ರ, ಸಿ.ಸಿ.ಮುಂಡಾಸದ, ಜಯಣ್ಣ ಮುಚಡಿ, ಟಿ.ವೈ.ಅಂಬಿಗೇರ, ಆರ್. ಎಂ.ಅಸುಂಡಿ, ಎಂ.ಚನಬಸಪ್ಪ, ಬಿ.ಎನ್.ಪಾಟೀಲ, ಟಿ.ಸಿ.ಪಾಟೀಲ, ವಿಜಯಾ ಪಟ್ಟಣಶೆಟ್ಟಿ, ಟಿ.ಎಂ.ಕೆ ಬಸವರಾಜಯ್ಯ, ಬಸವರಾಜ ತಾವರಗೊಂದಿ, ಅಶೋಕ ಹೊಟ್ಟಿಗೌಡ್ರ, ಪದ್ಮಾವತಿ ದೈವಜ್ಞ, ಗಿರಿಜಾ ಜಂಬಿಗಿ, ಸರಸ್ವತಿ ಶೆಟ್ರ, ಪೂರ್ಣಿಮಾ ಬೆನ್ನೂರು, ಎಸ್.ಎಸ್.ನ್ಯಾಮತಿ, ವಸಂತ ಹುಲ್ಲತ್ತಿ, ರೂಪಾ ಪವಾರ, ವಿಜಯಲಕ್ಷ್ಮಿ ಬ್ಯಾಡಗಿ, ಚಂದ್ರಕಲಾ ಸುತ್ತಿನಭಾವಿಮಠ, ಅನಸೂಯಾ ಮಲ್ಲೂರು, ಬಿ.ಎಸ್.ನಂದೀಹಳ್ಳಿ, ಜಾನ್ವವಿ ಉಪ್ಪಿನ ಮತ್ತಿತರರು ಉಪಸ್ಥಿತರಿದ್ದರು.
ರಜನಿ ಕುಲಕರ್ಣಿ ಪ್ರಾರ್ಥಿಸಿದರು. ನಾಗರಾಜ ಕುಲಕರ್ಣಿ ಸ್ವಾಗತಿಸಿದರು. ಪ್ರೊ. ಬಿ.ಬಿ.ನಂದ್ಯಾಲ ಕಾರ್ಯಕ್ರಮ ನಿರೂಪಿಸಿದರು. ಎಂ.ವಿ.ಮಲ್ಲೂರು  ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT