ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಯಕ್ಕೆ ಸರಿಯಾಗಿ ಬಸ್ ಓಡಿಸಿ: ಗ್ರಾಮಸ್ಥರ ಒತ್ತಾಯ

Last Updated 9 ಸೆಪ್ಟೆಂಬರ್ 2011, 9:45 IST
ಅಕ್ಷರ ಗಾತ್ರ

ಹಿರೇಕೆರೂರ: ತಾಲೂಕಿನ ಗಡಿಭಾಗ ದಲ್ಲಿರುವ ದೊಡ್ಡಗ್ರಾಮವಾದ ಕುಡು ಪಲಿ ಗ್ರಾಮಕ್ಕೆ ಸಮರ್ಪಕ ಬಸ್ಸಿನ ಸೌಲಭ್ಯ ಕಲ್ಪಿಸುವಂತೆ ಹಾಗೂ ಸರಿ ಯಾದ ಸಮಯಕ್ಕೆ ಬಸ್ಸು ಸಂಚರಿಸು ವಂತೆ ಮಾಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.

ಗ್ರಾಮಕ್ಕೆ ಬೆಳಗ್ಗೆ ಆಗಮಿಸಿದ್ದ ಬಸ್ಸು ಗಳನ್ನು ಗ್ರಾಮಸ್ಥರು ಸಾರಿಗೆ ಇಲಾ ಖೆಯ ಅಧಿಕಾರಿಗಳು ಗ್ರಾಮಕ್ಕೆ ಆಗಮಿ ಸುವವರೆಗೂ ತಡೆದು ಪ್ರತಿಭಟನೆ ನಡೆಸಿದರು.

ಗ್ರಾಮಕ್ಕೆ ವಾಯವ್ಯ ರಸ್ತೆ ಸಾರಿಗೆ ಬಸ್ಸುಗಳು ಸರಿಯಾಗಿ ಬರುತ್ತಿಲ್ಲ ಇದ ರಿಂದ ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತೀವ್ರ ತೊಂದರೆ ಅನು ಭವಿಸುವಂತಾಗಿದೆ. ಖಾಸಗಿ ಟಂಟಂ ವಾಹನಗಳನ್ನು ಆಶ್ರಯಿಸಬೇಕಾದ ಸ್ಥಿತಿ ಯಿಂದಾಗಿ ಜನತೆ ಸಂಕಷ್ಟ ಎದುರಿ ಸುವಂತಾಗಿದೆ. ಇದರ ಬಗ್ಗೆ ಅನೇಕ ಬಾರಿ ತಿಳಿಸಿದರೂ ವಾಯವ್ಯ ಸಾರಿಗೆ ಘಟಕದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೇ ದಿವ್ಯ ನಿರ್ಲಕ್ಯ ವಹಿ ಸಿದ್ದಾರೆ ಎಂದು ದೂರಿದರು.

ಆಗಾಗ ಬರುವ ಕೆಲವು ಬಸ್ಸುಗಳು ಸಹ ಅಲ್ಲಲ್ಲಿ ಕೆಟ್ಟು ನಿಲ್ಲುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಯನ್ನು ಅನುಭವಿಸುತ್ತಿದ್ದಾರೆ ಹಾಗಾಗಿ ಸಕಾಲಕ್ಕೆ ಸರಿಯಾದ ಬಸ್ಸುಗಳನ್ನು ಬಿಡುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಅಶೋಕಗೌಡ ಚಿಕ್ಕಗೌಡ್ರ, ನಾಗರಾಜ ಮಾಗನೂರ, ವಿನೋದಮ್ಮ ಹೊಂಕಣದ, ಪ್ರಕಾಶ ಸರ್ವಂದ, ಬಾಬಾ ಪೆಟಪ್ಪನವರ, ಶಿವ ಕುಮಾರ ಚೌಡಕ್ಕನವರ ಮೊದಲಾದ ವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT