ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಮಾಜದ ಒಳಿತಿಗಾಗಿ ದುಡಿಯಿರಿ'

Last Updated 6 ಏಪ್ರಿಲ್ 2013, 5:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ವಿದ್ಯಾರ್ಥಿ ಜೀವನದಲ್ಲಿ ನಿಶ್ಚಿತ ಗುರಿಯೊಂದನ್ನು ಇಟ್ಟುಕೊಂಡು ಅದನ್ನು ಸಾಧಿಸಲು ಕಠಿಣ ಪರಿಶ್ರಮ ಪಡಬೇಕು. ಶ್ರಮದಿಂದ ಸಾಧಿಸಿದ ಸಾಧನೆ ನೀಡುವ ಸಂತೋಷ ಉನ್ನತವಾದುದು' ಎಂದು ವಿಜಾಪುರ ವಿಶ್ವವಿದ್ಯಾಲಯದ ಕುಲಪತಿ ಡಾ. ಮೀನಾ ಚಂದಾವರಕರ ಹೇಳಿದರು.

ನಗರದ ಕೆಎಲ್‌ಇ ಸಂಸ್ಥೆಯ ಪಿ.ಸಿ. ಜಾಬಿನ್ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಮೂರನೇ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

`ಬ್ಯಾಂಕಿನಲ್ಲಿ ಅರೆಕಾಲಿಕ ಪಾಸ್‌ಬುಕ್ ಬರವಣಿಗೆಯ ಕೆಲಸಕ್ಕೆ ಸೇರಿಕೊಂಡ ನಾನು ಕಷ್ಟಪಟ್ಟು ಇಂದು ಕುಲಪತಿ ಸ್ಥಾನಕ್ಕೆ ಬಂದಿದ್ದೇನೆ. ಕಷ್ಟಪಟ್ಟರೆ ಉನ್ನತವಾದುದನ್ನು ಸಾಧಿಸಬಹುದು ಎನ್ನುವುದಕ್ಕೆ ನಾನೆ ಉದಾಹರಣೆ. ಬಡತನ ಸೇರಿದಂತೆ ಇತರ ಕಾರಣಗಳಿಂದಾಗಿ ಶಿಕ್ಷಣನ್ನು ಮೊಟಕುಗೊಳಿಸುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಪಡೆಯುತ್ತಿರುವವರು ಕೇವಲ ಶೇ 8ರಷ್ಟು ವಿದ್ಯಾರ್ಥಿಗಳು ಮಾತ್ರ. ಆದ್ದರಿಂದ ಉನ್ನತ ಶಿಕ್ಷಣ ಪಡೆದ ನೀವು ಭಾಗ್ಯವಂತರು. ಈ ಶಿಕ್ಷಣದ ಮೌಲ್ಯವನ್ನು ಸಮಾಜದ ಒಳಿತಿಗಾಗಿ ನೀವು ಸದುಪಯೋಗಪಡಿಸಿಕೊಳ್ಳಬೇಕು' ಎಂದು ಅವರು ಸಲಹೆ ನೀಡಿದರು.

`ಯುವಜನತೆ ದೇಶದ ಶಕ್ತಿ. ದೇಶದ ಜನಸಂಖ್ಯೆಯಲ್ಲಿ ಯುವಕರದು ಎರಡನೇ ಸ್ಥಾನ. ಆದರೆ ಅಭಿವೃದ್ಧಿ ದೃಷ್ಟಿಯಿಂದ 134ನೇ ಸ್ಥಾನದಲ್ಲಿದ್ದೇವೆ. ಸಮಯ, ಸಂಪತ್ತು, ಶಕ್ತಿ, ಶರೀರ ಇವು ಯಾವತ್ತೂ ನಮ್ಮಂದಿಗೆ ಇರುವುದಿಲ್ಲ. ಆದರೆ ಸ್ವಭಾವ, ಹೊಂದಾಣಿಕೆ, ಸತ್ಸಂಗ, ಒಳ್ಳೆಯ ಸಂಬಂಧಗಳು ಯಾವಾಗಲೂ ನಮ್ಮ ಜೊತೆ ಇರುತ್ತವೆ' ಎಂದರು.

`ವಿದ್ಯಾರ್ಥಿಗಳು ಸಮಾಜದ ಅಭಿವೃದ್ಧಿಗಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು' ಎಂದು ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕ ಶಂಕ್ರಣ್ಣ ಮುನವಳ್ಳಿ ಹೇಳಿದರು.

ಬಂಗಾರದ ಪದಕ ಪ್ರದಾನ
ಕಳೆದ ವರ್ಷ ಏಪ್ರಿಲ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಬಂಗಾರದ ಪದಕ ವಿತರಿಸಲಾಯಿತು. ಬಿಎಸ್‌ಸಿಯಲ್ಲಿ ತುಳಸಾ ರಾಯನಗೌಡ, ಬಿಸಿಎದಲ್ಲಿ ಮೈತ್ರಿ ಹೆಗಡೆ, ಎಂಎಸ್‌ಸಿ (ಕಂಪ್ಯೂಟರ್ ಸೈನ್ಸ್)ನಲ್ಲಿ ವಿಜಯಲಕ್ಷ್ಮೀ ಕೆ.ವಿ., ಎಂಎಸ್‌ಸಿ (ರಸಾಯನಶಾಸ್ತ್ರ)ನಲ್ಲಿ ಮಹೇಶ ಕಲ್ಲೋಳಿ, ಎಂಎಸ್‌ಸಿ (ಬಯೋಟೆಕ್ನಾಲಜಿ)ನಲ್ಲಿ ಅಶ್ವಿನಿ ಟಿಕಾರೆ ಎಲ್ಲರೂ ಬಂಗಾರದ ಪದಕ ಪಡೆದರು. ರಾಜೇಶ್ವರಿ ಹುಲಕೋಟಿ, ವರ್ಷಾ ಸಾಲಿಮಠ, ಶ್ರುತಿ ಟಿಕಾರೆ, ಸುಮನ ಬಗಲಿ, ಪೂಜಾ ರಾಯ್ಕರ್, ಅಂಬಿಕಾ ನಿರಂಜನ ನಗದು ಬಹುಮಾನ ಪಡೆದರು.

ಕಾಲೇಜಿಗೆ ರೂ 1.50 ಲಕ್ಷ ದಾನ ನೀಡಿದ ಸೋದರಿಯರಾದ ಅಂಜನಾ ನಾಯಕ ಹಾಗೂ ರಚನಾ ಹೇರಸಂಗ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಡಾ. ವಿ.ಬಿ. ಹಿರೇಮಠ, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ. ಎಂ.ಟಿ. ಹೊಸಮನಿ, ಗೌರವಾನ್ವಿತ ಅತಿಥಿ ಜೆ.ಪಿ. ಜಾಬಿನ್ ಹಾಗೂ ಡಾ. ಎಂ.ಕೆ. ಅರಲಕ್ಕನವರ ವೇದಿಕೆ ಮೇಲಿದ್ದರು.

ಶೀತಲ್ ತಿವಾರಿ ನಿರೂಪಿಸಿದರು. ಎಸ್.ಬಿ. ನಾಡಗೌಡ ಪರಿಚಯಿಸಿದರು. ಡಾ. ಎಂ.ಕೆ. ಅರಲಕ್ಕನವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT