ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ಜೀವನ ಶೈಲಿಗಾಗಿ ಪಥ ಸಂಚಲನ

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಕಾರಟಗಿ: ಸಮೀಪದ ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿಗಳು ನೂತನ ವರ್ಷಾಚರಣೆಯನ್ನು ಸರಳ ಜೀವನ ಶೈಲಿಯ ಬಗೆಗೆ ಜಾಗೃತಿ ಮೂಡಿಸುವ ಪಥ ಸಂಚಲನ ನಡೆಸುವ ಮೂಲಕ   ಸಾರ್ವಜನಿಕರ ಗಮನ ಸೆಳೆದರು.

ಭಾನುವಾರ ಇಲ್ಲಿಯ ಎಪಿಎಂಸಿ ಆವರಣದಿಂದ ಆರಂಭಗೊಂಡ ಜಾಥಾಗೆ ಆಡಳಿತ ಮಂಡಳಿಯ ಸೂರಿಬಾಬು ಚಾಲನೆ ನೀಡಿದರು.

ಜಾಥಾದುದ್ದಕ್ಕೂ ಸರಳ ಜೀವನ ಶೈಲಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ `ಶ್ರೇಷ್ಠತೆಗೆ ಸರಳತೆಯೆ ಮೂಲ~, `ಸರಳತೆ ಎಂದರೆ ಬಾಹ್ಯದಲ್ಲಿ ವ್ಯಕ್ತವಾಗುವ ವೇಷಭೂಷಣಗಳಿಗೆ ಸೀಮಿತವಲ್ಲ, ಮೂಲಭೂತವಾದ ಸರಳತೆ ಆಂತರಿಕವಾಗಿದೆ~, ಮನುಷ್ಯರ ಸರಳ ನಡೆ, ನುಡಿಗಳು ಆವರ ವ್ಯಕ್ತಿತ್ವವನ್ನು ಉತ್ತುಂಗಕ್ಕೇರಿಸುತ್ತವೆ~, `ಬೆಂಕಿ ದೇಹವನ್ನು ಹಾಳುಮಾಡಿದರೆ, ಕುಡಿತವು ದೇಹ ಹಾಗೂ ಆತ್ಮವನ್ನು ನಾಶ ಮಾಡುತ್ತದೆ~, ಎಂಬ ಘೋಷಣೆಗಳು ಮುಗಿಲು ಮುಟ್ಟಿದ್ದವು. ಜಾಥಾ ಆರ್. ಜಿ. ರಸ್ತೆ, ಹಳೆಯ ಬಸ್ ನಿಲ್ದಾಣ, ಕನಕದಾಸ ವೃತ್ತ, ಗ್ರಾಪಂ ಕಚೇರಿ ಮಾರ್ಗದ ಮೂಲಕ  ಪೊಲೀಸ್ ಠಾಣೆಯವರೆಗೆ ಸಾಗಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT