ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸರಳ ಮದುವೆ ಆಯೋಜಿಸಿ ಮಾದರಿಯಾಗಿ'

Last Updated 6 ಡಿಸೆಂಬರ್ 2012, 6:20 IST
ಅಕ್ಷರ ಗಾತ್ರ

ಬೀದರ್: ವರದಕ್ಷಿಣೆ ರಹಿತ ಸರಳ ಮದುವೆ ಆಯೋಜಿಸುವ ಮೂಲಕ ಪಾಲಕರು ಇತರರಿಗೆ ಮಾದರಿ ಆಗಬೇಕು ಎಂದು ಶಾಹೀನ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಅಬ್ದುಲ್ ಖದೀರ್ ಹೇಳಿದರು.

ಜಾಗೃತಿ ಮಹಿಳಾ ಸಂಘಟನೆಯು ನಗರದ ಜಿಲ್ಲಾ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ `ಮಹಿಳಾ ಜಾಗೃತಿ ಸಮಾವೇಶ'ವನ್ನು ಉದ್ಘಾಟಿಸಿ ಮಾತನಾಡಿದರು.

ಅದ್ದೂರಿ ಮದುವೆಗಳಿಂದ ಸಮಾಜ ದಲ್ಲಿ ಮರ್ಯಾದೆ ಹೆಚ್ಚುತ್ತದೆ ಎಂಬ ಭ್ರಮೆ ಪಾಲಕರಲ್ಲಿ ಆವರಿಸಿದೆ. ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹಿಂದೆ ಮುಂದೆ ನೋಡುವ ಪಾಲಕರು, ಆಡಂಬರದ ಮದುವೆ ಆಯೋಜಿಸಿ ಸಾಲದ ಹೊರೆ ಹೊತ್ತುಕೊಳ್ಳುತ್ತಿದ್ದಾರೆ. ವರದಕ್ಷಿಣೆ ಹಾಗೂ ಆಡಂಬರದ ಮದುವೆಗಳು ಪಾಲಕರ ನೆಮ್ಮದಿ ಹಾಳುಗೆಡವುತ್ತಿವೆ ಎಂದು ಅಭಿಪ್ರಾಯಪಟ್ಟರು.

ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಎಲ್ಲರು ಮದುವೆಗಳನ್ನು ಸರಳವಾಗಿ ನಡೆಸಬೇಕು. ಸರಳ ವಿವಾಹ ಸಮಾರಂಭ ಏರ್ಪಡಿಸುವ ಪಾಲಕರನ್ನು ಪ್ರೋತ್ಸಾಹಿಸಬೇಕು. ಈ ನಿಟ್ಟಿನಲ್ಲಿ ಎಲ್ಲೆಡೆ ಜಾಗೃತಿ ಕೆಲಸ ನಡೆಯಬೇಕು ಎಂದು ಹೇಳಿದರು.

ವೈಭವದ ಮದುವೆಗಳು ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಸರಳ ವಿವಾಹಗಳಿಂದ ಸುಖಮಯ ಜೀವನ ಸಾಧ್ಯ. ವರದಕ್ಷಿಣೆಯ ನಿಮೂರ್ಲನೆಗೆ ಸಾಮೂಹಿಕ ಪ್ರಯತ್ನ ನಡೆಯಬೇಕಾಗಿದೆ ಎಂದು ಜಾಗೃತಿ ಮಹಿಳಾ ಸಂಘಟನೆ ಸದಸ್ಯೆ ಮೇಹರ್ ಸುಲ್ತಾನಾ ನುಡಿದರು.

ಜಾಗೃತಿ ಮಹಿಳಾ ಸಂಘಟನೆ ಆಡಳಿತ ಮಂಡಳಿ ಅಧ್ಯಕ್ಷೆ ಮಂಗಲಾ ಭಾಗವತ್ ಪ್ರಾಸ್ತಾವಿಕವಾಗಿ ಮಾತನಾಡಿದರು. 
ಅಕ್ಕಮಹಾದೇವಿ ಕಾಲೇಜು ಪ್ರಾಚಾರ್ಯೆ ಪ್ರೊ. ಪ್ರೇಮಾ ಸಿರ್ಸೆ, ಡಾ. ವಿಜಯಶ್ರೀ ಬಶೆಟ್ಟಿ, ಪ್ರಮುಖರಾದ ಸಿಸ್ಟರ್ ಕ್ರಿಸ್ಟಿನಾ, ಕಲಾವತಿ ಜೋಶಿ, ಲೀಲಾವತಿ ಚಾಕೋತೆ, ದರ್ಬಾರಾಸಿಂಗ್, ಚನ್ನಬಸಪ್ಪ ಹಾಲಹಳ್ಳಿ, ವೈಜನಾಥ ಕಮಠಾಣೆ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT