ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದ ಸೌಲಭ್ಯಗಳನ್ನು ಬಳಸಲು ಸಲಹೆ

Last Updated 10 ಅಕ್ಟೋಬರ್ 2011, 10:05 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಅಂಗವಿಕಲರ ನಿರ್ವಹಣೆಗಾಗಿ ಬರುತ್ತಿರುವ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳ ೀಕೆಂದು ವಿಶ್ವೇಶ್ವರಯ್ಯ ಅಂಗವಿಕಲರ ರೂರಲ್ ಡೆವಲೆಂಪ್‌ಮೆಂಟ್ ಅಂಡ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಗಂಗೇನಾಯ್ಕ ತಿಳಿಸಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈಚೆಗೆ ವಿಶ್ವೇಶ್ವರಯ್ಯ ಅಂಗವಿಕಲರ ರೂರಲ್ ಡೆವಲೆಂಪ್‌ಮೆಂಟ್ ಅಂಡ್ ಎಜುಕೇಷನ್ ಟ್ರಸ್ಟ್ ವತಿಯಿಂದ ಎರ್ಪಡಿಸಲಾಗಿದ್ದ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಅಫಘಾತ ಹಾಗೂ ಹುಟ್ಟಿನಲ್ಲಿ ಕೆಲ ತೊಂದರೆಗಳಿಂದ ವ್ಯಕ್ತಿಯಲ್ಲಿ ಅಂಗವಿಕಲತೆ ಆಗಿರಬಹುದು. ಆದರೆ ಸಮಾಜದಲ್ಲಿ ಇತರರಂತೆ ಎಂದು ತಿಳಿಯಬೇಕಾಗಿದೆ ಎಂದರು.

ಸರ್ಕಾರ ಅಂಗವಿಕಲರ ಉದ್ಧಾರಕ್ಕಾಗಿ ಕೋಟ್ಯಂತರ ಹಣ ವಿತರಿಸುತ್ತಿದೆ. ಸರ್ಕಾರದಿಂದ ಮನೆಗಳ ನಿರ್ಮಾಣಕ್ಕೆ ಶೇ. 5ರಂತೆ ಪ್ರತಿ ಗ್ರಾಮ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ನೀಡಲಾಗುತ್ತಿದೆ. ಆದರೆ ಸೌಲಭ್ಯಗಳ ವಿವರ ಅಂಗವಿಕಲರಿಗೆ ತಿಳಿಯದೆ ದುರುಪಯೋಗವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಭೆಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ವೆಂಕಟರವಣಪ್ಪ, ಕಾರ್ಯದರ್ಶಿ ನಾಗರಾಜ, ಖಜಾಂಚಿ ಮದ್ದರೆಡ್ಡಿ, ಮಹಿಳಾ ಪ್ರತಿನಿಧಿ ಲಲಿತಾದೇವಿ, ವೆಂಕಟರಮಣಪ್ಪ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT