ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಯೋಜನೆಗಳ ಅರಿವು ಅಗತ್ಯ

Last Updated 2 ಫೆಬ್ರುವರಿ 2011, 7:15 IST
ಅಕ್ಷರ ಗಾತ್ರ

ಚಳ್ಳಕೆರೆ: ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಭಾಗದ ರೈತರು ಸದುಪಯೋಗ ಪಡಿಸಿಕೊಳ್ಳುವ ಮೂಲಕ ತಮ್ಮ ವೃತ್ತಿಯಲ್ಲಿ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಜೆ.ಪಿ. ಜಯಪಾಲಯ್ಯ ಅಭಿಪ್ರಾಯಪಟ್ಟರು.ಮಂಗಳವಾರ ತೋಟಗಾರಿಕೆ ಇಲಾಖೆಯಲ್ಲಿ ಗಿರಿಜನ ಉಪ ಯೋಜನೆಯಲ್ಲಿ ರೈತರಿಗೆ ತರಕಾರಿ ಬೀಜ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀರಾವರಿ ಪ್ರದೇಶ ಕಡಿಮೆ ಇರುವುದರಿಂದ ಪ್ರಧಾನ ಬೆಳೆಗಳ ಜತೆಗೆ, ಬೆಳೆಯುವ ಉಪಬೆಳೆಗಳ ಬಗ್ಗೆ ಸಂಬಂಧಿಸಿದ ಇಲಾಖೆ ಮುಖ್ಯಸ್ಥರಿಂದ ಮಾರ್ಗದರ್ಶನ ಪಡೆದರೆ ಉತ್ತಮ ಬೆಳೆಯನ್ನು ಕಾಣಬಹುದು. ಇಲಾಖೆಯ ಅಧಿಕಾರಿಗಳೂ ಕೂಡ ರೈತರಿಗೆ ಇಂತಹ ಯೋಜನೆಗಳ ಕುರಿತು ಮಾಹಿತಿ ಒದಗಿಸುವ ಕಾರ್ಯಮಾಡಬೇಕಿದೆ ಎಂದರು.

ಈ ಸಂದರ್ಭದಲ್ಲಿ ಸುಮಾರು 63 ಫಲಾನುಭವಿಗಳಿಗೆ ತಲಾ 2 ಸಾವಿರ ಮೌಲ್ಯದ ಬೆಂಡೆ, ಮೆಣಸು, ಹೀರೆಕಾಯಿ ತರಕಾರಿ ಬೀಜಗಳನ್ನು ವಿತರಿಸಲಾಯಿತು. ತಾ.ಪಂ. ಸದಸ್ಯ ಪಾಲಣ್ಣ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪಾಂಡುರಗಂಪ್ಪ ಇನ್ನಿತರರು ಇದ್ದರು. 

ಪರಿಶ್ರಮದಿಂದ ಯಶಸ್ಸು
ಹೊಸದುರ್ಗ: ಆತ್ಮವಿಶ್ವಾಸ, ಆಸಕ್ತಿ ಹಾಗೂ ಸತತ ಪರಿಶ್ರಮ ಪರೀಕ್ಷೆಯ ಯಶಸ್ಸಿನ ಗುಟ್ಟು ಎಂದು ಜೆಸೀಸ್ ಸಂಸ್ಥೆ ವಲಯ ತರಬೇತುದಾರ ನವೀನ್ ಕುಮಾರ್ ಹೇಳಿದರು.ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಜೆಸಿಐ  ವೇದಾ ಸಂಸ್ಥೆ  ಮಂಗಳವಾರ ಏರ್ಪಡಿಸಿದ್ದ ‘ಪರೀಕ್ಷೆ ಒಂದು ಸಂಭ್ರಮ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂಸಿ ಅಧ್ಯಕ್ಷೆ ಸಾವಿತ್ರಮ್ಮ ಮಾತನಾಡಿದರು. ಡಾ.ಉಮೇಶ್, ಏಕಾಗ್ರತೆಗೆ ಅಗತ್ಯವಾದ ಧ್ಯಾನ, ಪ್ರಾಣಾಯಾಮ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕರಾದ ಪಿ. ಮಲ್ಲಯ್ಯ, ಎಸ್. ಚಂದ್ರಶೇಖರ್, ಕೃಷ್ಣಮೂರ್ತಿ, ಜೆಸಿಐ ವೇದಾ ಸಂಸ್ಥೆ ಪ್ರಧಾನ ಕಾರ್ಯದರ್ಶಿ ವಿ.ಎಂ. ಮುಕುಂದನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT