ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರೋತ್ತರ ರಫ್ತು ಚೇತರಿಕೆ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2011ರ ಡಿಸೆಂಬರ್ ತಿಂಗಳಲ್ಲಿ ದೇಶದ ಒಟ್ಟು ರಫ್ತು ವಹಿವಾಟು ಶೇ 6.7ರಷ್ಟು ಚೇತರಿಸಿಕೊಂಡಿದೆ.

ನವೆಂಬರ್ ತಿಂಗಳಿಗೆ ಹೋಲಿಸಿದರೆ ಈ ಅವಧಿಯಲ್ಲಿ ಹಡಗುಗಳ ಮೂಲಕ ನಡೆಯುವ ಸಾಗರೋತ್ತರ ವಹಿವಾಟು ಶೇ 3.8ರಷ್ಟು ಏರಿಕೆಯಾಗಿದೆ. 

ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ವೇಳೆಗೆ 300 ಶತಕೋಟಿ ಡಾಲರ್ (ರೂ15,60,000 ಕೋಟಿ) ರಫ್ತು ವಹಿವಾಟು ಗುರಿಯನ್ನು ಸರ್ಕಾರ ಹೊಂದಿದೆ. ಆರ್ಥಿಕ ಅಸ್ಥಿರತೆ ನಡುವೆಯೂ ವಹಿವಾಟು  ಚೇತರಿಸಿಕೊಂಡಿರುವುದು ಈ ಗುರಿ ತಲುಪುವ ವಿಶ್ವಾಸ ಮೂಡಿಸಿದೆ ಎಂದು ವಾಣಿಜ್ಯ ಸಚಿವಾಲಯ ಹೇಳಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಆಮದು ವಹಿವಾಟು ಶೇ  19ರಷ್ಟು ಹೆಚ್ಚಿದ್ದು, 37 ಶತಕೋಟಿ (ರೂ1,92,400) ಡಾಲರ್‌ಗಳಷ್ಟಾಗಿದೆ. ವ್ಯಾಪಾರ ಕೊರತೆಯು 12 ಶತಕೋಟಿ ಡಾಲರ್‌ಗಳಷ್ಟಾಗಿದೆ (ರೂ62,400ಕೋಟಿ) ಎಂದು ವಾಣಿಜ್ಯ ಕಾರ್ಯದರ್ಶಿ ರಾಹುಲ್ ಖುಲ್ಲರ್ ತಿಳಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ದೇಶದ ಒಟ್ಟು ರಫ್ತು ವಹಿವಾಟು ಶೆ 25ರಷ್ಟು ಹೆಚ್ಚಿದ್ದು 217 ಶತಕೋಟಿ ಡಾಲರ್ (ರೂ11,28,400 ಕೋಟಿ)ಗಳಷ್ಟಾಗಿದೆ. ಕಳೆದ ಜುಲೈ ತಿಂಗಳಲ್ಲಿ ರಫ್ತು ದಾಖಲೆ ಮಟ್ಟದ ಶೇ 44ರಷ್ಟು ಏರಿಕೆ ಕಂಡಿತ್ತು. ಮುಂದಿನ ಮೂರು ತಿಂಗಳಲ್ಲಿ 80 ಶತಕೋಟಿ ಡಾಲರ್‌ಗಳಷ್ಟು (ರೂ4,16,000 ಕೋಟಿ) ವಹಿವಾಟು ದಾಖಲಾದರೆ 300 ಶತಕೋಟಿ ಡಾಲರ್ ರಫ್ತು ವಹಿವಾಟು ಗುರಿ ತಲುಪಬಹುದು ಎಂದು ಖುಲ್ಲರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ಆಮದು ವಹಿವಾಟು 460 ಶತಕೋಟಿ ಡಾಲರ್ (ರೂ23,92,000 ಕೋಟಿ ) ದಾಟುವ ನಿರೀಕ್ಷೆ ಇದೆ. ಈಗಾಗಲೇ ಮೊದಲ ಮೂರು ತ್ರೈಮಾಸಿಕ ಅವಧಿಗಳಲ್ಲಿ ಆಮದು ಶೇ 30ರಷ್ಟು ಹೆಚ್ಚಿದ್ದು, 350 ಶತಕೋಟಿ ಡಾಲರ್ ವಹಿವಾಟು (ರೂ18,20,000 ಕೋಟಿ) ದಾಖಲಾಗಿದೆ. ಈ ಅವಧಿಯಲ್ಲಿ ವಿತ್ತೀಯ ಕೊರತೆಯು 133 ಶತಕೋಟಿ ಡಾಲರ್‌ಗಳಷ್ಟಾಗಿದೆ (ರೂ6,91,600 ಕೋಟಿ) ಎಂದು ಖುಲ್ಲರ್ ಹೇಳಿದ್ದಾರೆ.  ಹಣಕಾಸು ವರ್ಷದ ಅಂತ್ಯಕ್ಕೆ 155ರಿಂದ 160 ಶತಕೋಟಿ ಡಾಲರ್ (ರೂ8,32,000 ಕೋಟಿ) ವಿತ್ತೀಯ ಕೊರತೆ ಕಾಯ್ದುಕೊಳ್ಳುವ ಗುರಿ ಸರ್ಕಾರದ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT