ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಆಸ್ಪತ್ರೆ: ಬಡವರ ಮಾತ್ರೆ ಬೆಂಕಿಗೆ

Last Updated 15 ಫೆಬ್ರುವರಿ 2012, 7:30 IST
ಅಕ್ಷರ ಗಾತ್ರ

ದೇವದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಿಂಭಾಗದಲ್ಲಿ ಮಂಗಳವಾರ ಸಾವಿರಾರು ರೂಪಾಯಿ ಬೆಲೆ ಬಾಳುವ ವಿವಿಧ ಮಾತ್ರೆಗಳನ್ನು ಕಸದ ಜತೆಗೆ ಬೆಂಕಿ ಹಚ್ಚಿ ಸುಟ್ಟಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಆಸ್ಪತ್ರೆಯ ಕಾಂಪೌಡ್ ಒಳಗಡೆ ಕೋ-ಟ್ರೈಮೊಗಜೋಲ್ ಎಂಬ ಹೆಸರಿನ ಮಾತ್ರೆಗಳು ಸಾವಿರಾರು ಸಂಖ್ಯೆಯಲ್ಲಿ ಬೆಂಕಿಯಲ್ಲಿ ಸುಡುತ್ತಿರುವುದು ಕಂಡು ಬಂದಿತು. ಸದರಿ ಮಾತ್ರೆಯ ಅವಧಿ ಬರುವ ಜೂನ್ 2012ಕ್ಕೆ ಮುಗಿಯುತ್ತಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಮಾತ್ರೆಗಳನ್ನು ಬೆಂಕಿಗೆ ಹಾಕಿರುವುದರಲ್ಲಿ ಆಸ್ಪತ್ರೆಯ ವೈದ್ಯರ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಸದರಿ ಮಾತ್ರೆಯ  ಜತೆಗೆ ಇತರ ಮಾತ್ರೆಗಳನ್ನೂ ಸುಟ್ಟಿರುವುದು ಕಂಡು ಬಂದಿತು.

ಪ್ರತಿನಿತ್ಯ ಇದೇ ಆಸ್ಪತ್ರೆಯನ್ನು ನಂಬಿ ಬರುವ ಬಡ ರೋಗಿಗಳಿಗೆ ಸಿಗಬೇಕಾದ ಮಾತ್ರೆಗಳನ್ನು ಬೆಂಕಿಗೆ ಹಾಕಿ ಸುಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮದ್ಯದ ಬಾಟೆಲ್: ಜರ್ಮನ್ ನೆರವಿನೊಂದಿಗೆ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸಾರ್ವಜನಿಕರಿಗೆ ಅದರಲ್ಲೂ ಮುಖ್ಯವಾಗಿ ಬಡಜನರಿಗೆ ಅನುಕೂಲವಾಗಲೆಂದು 100 ಹಾಸಿಗೆಯ ಆಸ್ಪತ್ರೆ ನಿರ್ಮಿಸಿದರೂ ಕಳೆದ ದಶಕದಿಂದ ಅಗತ್ಯಗೆ ತಕ್ಕಂತೆ ವೈದ್ಯರು ಮತ್ತು ಸಿಬ್ಬಂದಿ ಇಲ್ಲ. ಸಂಜೆಯಾದರೆ ಸಾಕು ಆಸ್ಪತ್ರೆಯಲ್ಲಿ ಕೇಳವರು ಇಲ್ಲ.
 
ಈ ಎಲ್ಲ ಕೊರತೆಯಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ದಿನದಿಂದ  ದಿನಕ್ಕೆ ಕಡಿಮೆಯಾಗಿದ್ದು,
ಅನಿವಾರ್ಯವಾಗಿ ಬಂದ ದಾರಿಗೆ ವಾಪಸ್ ಹೋಗದೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೆಲ ಮಹಡಿಯ ಕೆಲವು ಕೋಣೆಗಳು ಬಿಕೋ ಎನ್ನುತ್ತಿದ್ದರೆ ಇನ್ನು ಮೊದಲ ಮಹಡಿಯ ಕೋಣೆಗಳು ಕೆಲವರಿಗೆ ಉಳಿದುಕೊಳ್ಳಲು ಅನುಕೂಲವಾಗಿದೆ. ಮದ್ಯದ ಅಂಗಡಿಯ ಮುಂದೆ ಇರದಷ್ಟು ಮದ್ಯದ ವಿವಿಧ ಕಂಪೆನಿಯ ಬಾಟೆಲ್‌ಗಳು ಆಸ್ಪತ್ರೆಯ ಒಳಗಡೆ ಸಿಗುತ್ತಿರುವುದು ಇಲಾಖೆಯ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT