ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಕೃತಿಗಳ ಸೆನ್ಸಾರ್: ಕಂಬಾರ ವಿರೋಧ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹಾವೇರಿ: ಚಲನಚಿತ್ರಗಳ ಮಾದರಿ­ಯಲ್ಲಿ ಸಾಹಿತ್ಯ ಕೃತಿಗಳನ್ನು ಬಿಡುಗಡೆಗೆ ಮುನ್ನ ಪರಿಶೀಲಿಸಲು ಸೆನ್ಸಾರ್ ಮಂಡಳಿ ರಚಿಸುವುದು ಸೂಕ್ತವಲ್ಲ. ಹಾಗೊಂದು ವೇಳೆ ರಚಿಸಲು ಸರ್ಕಾರ ಮುಂದಾದರೆ, ತಾವು ತೀವ್ರವಾಗಿ ವಿರೋಧಿ­ಸುವುದಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ ತಿಳಿಸಿದರು.

ಜಿಲ್ಲೆಯ ಶಿಗ್ಗಾವಿ ತಾಲ್ಲೂಕು ಗೊಟಗೋಡಿಯ ಕರ್ನಾಟಕ ಜಾನ­ಪದ ವಿಶ್ವವಿದ್ಯಾಲಯದಲ್ಲಿ ಸೋಮ­ವಾರ ಅವರು ಪತ್ರಕರ್ತ­ರೊಂದಿಗೆ ಮಾತನಾಡಿದರು.

ಐಎಎಸ್‌ಗಳ ನಿರಾಸಕ್ತಿ: ‘ರಾಜ್ಯದ ಹಿರಿಯ ಐಎಎಸ್‌ ಅಧಿಕಾರಿಗಳು ಕನ್ನಡ ಭಾಷೆ ಬಗ್ಗೆ ನಿರ್ಲಕ್ಷ್ಯ ಭಾವನೆ ಹೊಂದಿರುವುದರಿಂದಲೇ ‘ಕನ್ನಡ ಯೂನಿಕೋಡ್ ತಂತ್ರಾಂಶ‘ವನ್ನು ಈವರೆಗೆ ರಾಜ್ಯದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗಿಲ್ಲ’ ಎಂದು  ಸರ್ಕಾರ­ದಲ್ಲಿರುವ ಸಚಿವರುಗಳಿಗೆ ಈ ಬಗ್ಗೆ ಯಾವುದೇ ಜ್ಞಾನ ಇಲ್ಲ. ಅದನ್ನು ಅಧಿಕಾರಿಗಳು ದುರು­ಪ­ಯೋಗ ಮಾಡಿ­ಕೊಂಡು  ತಂತ್ರಾಂಶ ಅಭಿವೃದ್ಧಿಗೆ ಸಹ­ಕಾರ ನೀಡುತ್ತಿಲ್ಲ’ ಎಂದು ದೂರಿದರು.

‘ತಮಿಳುನಾಡಿನಲ್ಲಿ ಆ ಭಾಷೆಯ ಅಭಿವೃದ್ಧಿಗಾಗಿ ವಿಶ್ವ ತಮಿಳು ಸಮ್ಮೇಳನ ನಡೆಸಿ ವಿಷಯ ತಜ್ಞರಿಂದ ನೂರಕ್ಕೂ ಹೆಚ್ಚು ಪ್ರಬಂಧ ಮಾಡಿಸ­ಲಾಯಿತು. ಅವುಗಳ ಅನುಷ್ಠಾನಕ್ಕಾಗಿ ರಾಜ್ಯದ 10 ಐಎಎಸ್‌ ಅಧಿಕಾರಿ­ಗಳನ್ನು ನೇಮಕ ಮಾಡಲಾಯಿತು. ಆದರೆ, ರಾಜ್ಯದಲ್ಲಿ ಕನ್ನಡ ಉಳಿಸು­ವುದಕ್ಕಾಗಿ ಇಂಥದೊಂದು ತಂತ್ರಾಂಶ ಅಗತ್ಯವಿದೆ ಎಂಬುದರ ಬಗ್ಗೆ ಸರ್ಕಾರ ನಡೆಸುವ ಜನಪ್ರತಿನಿಧಿಗಳಿಗೆ ಅರಿವು ಇಲ್ಲದಿರುವುದು ಬೇಸರದ ಸಂಗತಿ’ ಎಂದು ಹೇಳಿದರು.

‘ಇದಕ್ಕೆ ರಾಜಕೀಯ ವ್ಯಕ್ತಿಗಳಷ್ಟೇ ಕಾರಣರಲ್ಲ. ಬೇರೆ ಬೇರೆ ಖಾಸಗಿ ಕಂಪೆನಿಗಳ ಜತೆ ಹೊಂದಾಣಿಕೆ ಮಾಡಿ­ಕೊಂಡಿರುವ ಕನ್ನಡ ಭಾಷಿಕರೇ ಆದ ಹಿರಿಯ ಐಎಎಸ್‌ ಅಧಿಕಾರಿಗಳೂ ಕಾರಣ­ರಾಗಿದ್ದಾರೆ’ ಎಂದು ದೂರಿದರು. ‘ಕನ್ನಡ ಭಾಷೆ ಉಳಿಕೆಗೆ  ಆವಿಷ್ಕಾರ, ಯಂತ್ರಜ್ಞಾನ, ತಂತ್ರಜ್ಞಾನ­ಗಳನ್ನು ಕನ್ನಡದಲ್ಲಿ   ಅಳವಡಿಸಬೇಕು. ಆದರೆ, ಸರ್ಕಾರದಲ್ಲಿ ಆಡಳಿತ ನಡೆಸು­ತ್ತಿರುವವರಿಗೆ ಈ ತಂತ್ರಾಂಶಗಳ ಬಗ್ಗೆ ಮಾಹಿತಿ ನೀಡಬೇಕಾದ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಅವರನ್ನು ಕತ್ತಲಲ್ಲಿ ಇಡುತ್ತಿದ್ದಾರೆ’ ಎಂದು ದೂರಿದರು.

ತರಗತಿ ಮೀಸಲಿಡಿ: ‘ಗಮಕ, ತಾಳಮದ್ದಲೆ, ಕೀರ್ತನೆಯಂಥ ಅನೇಕ ಜನಪದ ಕಥನ ಮಾದರಿಗಳನ್ನು ಪೂರ್ವಪ್ರಾಥಮಿಕದಿಂದ ಎಸ್ಸೆಸ್ಸೆಲ್ಸಿ­ವರೆಗೆ ಓದಿಸಲು ವಾರದಲ್ಲಿ ಒಂದು ತರಗತಿ ಮೀಸಲಿಡಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿ­ಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT