ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ನೊಬೆಲ್ ಸ್ವೀಡನ್ ಮಡಿಲಿಗೆ

Last Updated 6 ಅಕ್ಟೋಬರ್ 2011, 13:15 IST
ಅಕ್ಷರ ಗಾತ್ರ

ಸ್ಟಾಕ್‌ಹೋಮ್, (ಎಪಿ): ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಈ ಬಾರಿ ಸ್ವೀಡಿಷ್ ಕವಿ ಥಾಮಸ್ ಟ್ರಾನ್ಸ್‌ಟ್ರೋಮರ್ ಅವರಿಗೆ ಒಲಿದಿದೆ.

  ಮನುಷ್ಯನ ಮನಸ್ಸಿನ ನಿಗೂಢತೆ ಬಗ್ಗೆ ಅತಿ ವಾಸ್ತವವಾದ ಬರಹಗಳನ್ನು ಬರೆದ  ಥಾಮಸ್ ಟ್ರಾನ್ಸ್‌ಟ್ರೋಮರ್ ಅವರನ್ನು 2011 ನೇ ಸಾಲಿನ ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

`ವಾಸ್ತವಕ್ಕೆ ತಾಜಾ ಆಗಿ ಪ್ರವೇಶ ಸಿಗುವಂತೆ ದಟ್ಟವಾದ ಪಾರದರ್ಶಕ ಪ್ರತಿಮೆಗಳ ಮೂಲಕ ವಾಸ್ತವವನ್ನು ಕಲಾತ್ಮಕವಾಗಿ ಚಿತ್ರಿಸಿದ` 80 ವರ್ಷ ವಯಸ್ಸಿನ ಕವಿಯನ್ನು ಪ್ರಶಸ್ತಿಗೆ  ಆಯ್ಕೆ ಮಾಡಲಾಗಿದೆ ಎಂದು  ಸ್ವೀಡಿಷ್ ಅಕಾಡೆಮಿ ಹೇಳಿದೆ.

ಟ್ರಾನ್ಸ್‌ಟ್ರೋಮರ್ 1990ರಲ್ಲಿ ಪಾರ್ಶ್ವವಾಯು ಪೀಡಿತರಾಗಿದ್ದರು. ಅರ್ಧ ಪಾರ್ಶ್ವವಾಯುವಿನಿಂದ ಅವರು ಮಾತನಾಡಲು ಅಸಮರ್ಥರಾದರೂ ಬರೆಯುವುದನ್ನು ಬಿಡಲಿಲ್ಲ. ಮುಂದೆ 2004ರಲ್ಲಿ `ದಿ ಗ್ರೇಟ್ ಎನಿಗ್ಮಾ~ ಎಂಬ ಕವನ ಸಂಗ್ರಹ ವನ್ನು ಪ್ರಕಟಿಸಿದರು.

ಪ್ರಶಸ್ತಿಯ ಜೊತೆಗೆ 15 ಲಕ್ಷ ಅಮೆರಿಕ ಡಾಲರ್ ಬಹುಮಾನಕ್ಕೆ ಟ್ರಾನ್ಸ್‌ಟ್ರೋಮರ್ ಪಾತ್ರರಾಗಿದ್ದಾರೆ.

1974ರಲ್ಲಿ ಬಂದ `ಬಾಲ್ಟಿಕ್ಸ್~ ಹಾಗೂ ಅವರ ಪ್ರವಾಸಗಳ ವರ್ಣನೆಯಾಗಿರುವ 1966ರಲ್ಲಿ ಬಂದ `ವಿಂಡೋಸ್ ಅಂಡ್ ಸ್ಟೋನ್ಸ್~ ಟ್ರಾನ್ಸ್‌ಟ್ರೋಮರ್ ಅವರ ಪ್ರಸಿದ್ಧ ಬರಹಗಳಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT