ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಹಿತ್ಯದಿಂದ ಜನಾಭಿಯಾನ ನಡೆಯಲಿ'

Last Updated 11 ಫೆಬ್ರುವರಿ 2013, 19:54 IST
ಅಕ್ಷರ ಗಾತ್ರ

ಬೆಂಗಳೂರು: `ಕಲ್ಪನೆಯನ್ನು ಬದಲಾಯಿಸುವ ಕ್ರಮದ ಮೂಲಕ ಎಂ.ಎಸ್.ಶ್ರೀರಾಮ ಅವರ ಕತೆಗಳು ಓದುಗರನ್ನು ಹಿಡಿದಿಡುತ್ತದೆ' ಎಂದು ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಶ್ಲಾಘಿಸಿದರು.

ಅಂಕಿತ ಪುಸ್ತಕ ಪ್ರಕಾಶನವು ನಗರದಲ್ಲಿ ಭಾನುವಾರ ಆಯೋಜಿಸಿದ್ದ ಎಂ.ಎಸ್.ಶ್ರೀರಾಮ ಅವರ `ಸಲ್ಮಾನ್‌ಖಾನನ ಡಿಫಿಕಲ್ಟೀಸು' `ಶನಿವಾರದ ಸಂತೆ' ಮತ್ತು ಎಚ್.ಡುಂಡಿರಾಜ್ ಅವರ `ಅನಿವಾಸಿಗಳೇ ವಾಸಿ' `ಹನಿಗಣಿ' ಪುಸ್ತಕಗಳನ್ನು ಬಿಡುಗಡೆಮಾಡಿ ಅವರು ಮಾತನಾಡಿದರು.

`ಶ್ರೀರಾಮ ಅವರು ಈ ನೆಲದ ಸಮಸ್ಯೆಗಳನ್ನು ಗಂಭೀರವಾಗಿ ಚರ್ಚಿಸಲು ಪ್ರಯತ್ನಿಸಿದರೆ, ಡುಂಡಿರಾಜ್ ಅವರು ಅದೇ ಸಮಸ್ಯೆಗಳಿಗೆ ಮೊನಚಾದ ಹಾಸ್ಯದ ಲೇಪ ನೀಡಿ ಓದುಗರಲ್ಲಿ ಜಾಗೃತ ಮನೋಭಾವವನ್ನು ಉಂಟುಮಾಡುತ್ತಾರೆ. ಈ ಎರಡು ಪ್ರಕಾರಗಳು ಜನರಲ್ಲಿ ಸಾಹಿತ್ಯದ ಕುರಿತು ಆಸಕ್ತಿಯನ್ನು ಹೆಚ್ಚುಮಾಡುತ್ತದೆ' ಎಂದು ಅಭಿಪ್ರಾಯಪಟ್ಟರು.

`ಇತರರಲ್ಲಿ ಕೀಳರಿಮೆ ಹುಟ್ಟಿಸುವ ಮಟ್ಟಿಗೆ ಅಭಿಮಾನ ಸೂಚಕವಾಗಿ ಹಲವು ಪಾತ್ರಗಳು ಶ್ರೀರಾಮ ಅವರ ಕತೆಯಲ್ಲಿ ಕಾಡುತ್ತವೆ. ನೈಜತೆ ಮತ್ತು ಕಾಲ್ಪನಿಕ ಅಂಶಗಳು ಸಮಪ್ರಮಾಣದಲ್ಲಿ ಮಿಳಿತಗೊಂಡು ವಾಸ್ತವಾಂಶಗಳನ್ನು ತಲಸ್ಪರ್ಶಿಯಾಗಿ ಚಿಂತಿಸುವಂತೆ ಪ್ರೇರೇಪಿಸುತ್ತದೆ' ಎಂದು ಹೇಳಿದರು.

ಹಿರಿಯ ಪತ್ರಕರ್ತ ನಾಗೇಶ ಹೆಗಡೆ, `ಜಾಗತಿಕ ತಾಪಮಾನ, ಬಡತನ, ಅನಕ್ಷರತೆಯಂತಹ ಸಮಸ್ಯೆಗಳನ್ನು ಕೇಂದ್ರಿಕರಿಸಿ ಸಾಹಿತ್ಯ ರಚಿಸುವವರ ಸಂಖ್ಯೆ ಹೆಚ್ಚಾಗಬೇಕು. ಸಾಹಿತ್ಯದ ಮೂಲಕ ಜನಾಭಿಯಾನ ನಡೆದರೆ ಅಕ್ಷರ ಲೋಕದ ಸಾರ್ಥಕ್ಯತೆ ಹೆಚ್ಚುತ್ತದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT