ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ವಿದ್ಯಾರ್ಥಿಗಳಿಗೆ ಉಚಿತ ಮಾಹಿತಿ

Last Updated 3 ಜನವರಿ 2014, 20:06 IST
ಅಕ್ಷರ ಗಾತ್ರ

ಬೆಂಗಳೂರು: ಐಪೊಮೊ ಸಂಸ್ಥೆಯು ಪಿಇಎಸ್‌ ವಿಶ್ವವಿ­ದ್ಯಾಲಯ, ವಿದ್ಯಾ ಪೋಷಕ್‌ ಹಾಗೂ ಬೇಸ್‌ ಕೋಚಿಂಗ್‌ ಸಂಸ್ಥೆಯ ಆಶ್ರಯದಲ್ಲಿ ಸಿಇಟಿ, ಕಾಮೆಡ್‌ ಕೆ, ಪೆಸ್ಸಾಟ್‌ ವ್ಯಾಸಂಗ ಮಾಡಲು ಆಸಕ್ತರಾಗಿರುವ ವಿದ್ಯಾರ್ಥಿಗಳಿಗೆ ಮೊಬೈಲ್‌ ಮೂಲಕ ಉಚಿತ ಪರೀಕ್ಷೆ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು  ರಾಜ್ಯದಾದ್ಯಂತ ಹಮ್ಮಿಕೊಂಡಿದೆ.

ದ್ವಿತೀಯ ಪಿಯುಸಿ (ವಿಜ್ಞಾನ) ಕಲಿ­ಯು­ತ್ತಿರುವ ವಿದ್ಯಾರ್ಥಿಗಳು ಭಾಗವಹಿ­ಸ­ಬಹುದು. ರಾಜ್ಯದಾದ್ಯಂತ 10,000 ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಆಸಕ್ತ ವಿದ್ಯಾರ್ಥಿಗಳು ಹಾಗೂ ಪೋಷಕರು ಕಾರ್ಯಕ್ರಮದ ಸಮಗ್ರ ಮಾಹಿತಿಗೆ 8139999903 ಕರೆ ಮಾಡಬಹುದು.

ಇದೇ 5ರಂದು ಬೆಂಗಳೂರಿನ ಪಿಇಎಸ್­ಐಟಿ ಕ್ಯಾಂಪಸ್‌­ನಲ್ಲಿ, 12ರಂದು ಮಂಗಳೂರಿನ ಎಸ್‌ಡಿಎಂ ಪಿಜಿ ಸೆಂಟರ್‌­ನಲ್ಲಿ, 14ರಂದು ಶಿವಮೊಗ್ಗದ ಡಿವಿಎಸ್ ಪದವಿಪೂರ್ವ ಕಾಲೇಜು, ಫೆ.2ರಂದು ಮೈಸೂರಿನ ಮಹಾರಾಜ ಕಾಲೇಜಿ­ನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT