ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ವೈದ್ಯಕೀಯ ಕಾಲೇಜುಗಳಿಗೆ ನೋಟಿಸ್‌

Last Updated 9 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ­ಯಲ್ಲಿ ನಡೆದ ಅಕ್ರಮಗಳ ಕುರಿತು ತನಿಖೆ ನಡೆಸುತ್ತಿರುವ ಸಿಐಡಿ, ಹೊರರಾಜ್ಯ ವಿದ್ಯಾರ್ಥಿಗಳ ಸಂಪೂರ್ಣ ಮಾಹಿತಿ ಸಲ್ಲಿಸುವಂತೆ ಕಾಮೆಡ್‌–ಕೆ ವ್ಯಾಪ್ತಿಯಲ್ಲಿರುವ ವೈದ್ಯಕೀಯ ಕಾಲೇಜು­ಗಳಿಗೆ ನೋಟಿಸ್‌ ಜಾರಿ ಮಾಡಿದೆ.

ಕಾಮೆಡ್‌–ಕೆ ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳನ್ನು ಬೆಂಗಳೂರು ಅಂತರ­ರಾಷ್ಟ್ರೀಯ ವಿಮಾನನಿಲ್ದಾಣ ಪೊಲೀಸರು ಪತ್ತೆ ಮಾಡಿದ್ದರು. ನಂತರ ಸಮಗ್ರ ತನಿಖೆಗಾಗಿ  ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.

ಈಗ ಸಿಐಡಿ, 14 ಖಾಸಗಿ ವೈದ್ಯ­ಕೀಯ ಕಾಲೇಜುಗಳಲ್ಲಿ ದಾಖಲಾ­ಗಿ­ರುವ ಹೊರರಾಜ್ಯ ವಿದ್ಯಾರ್ಥಿಗಳ ಕುರಿತು ಸಂಪೂರ್ಣ ವಿವರಗಳನ್ನು ಸಂಗ್ರಹಿಸುತ್ತಿದೆ.

ಡಿಸೆಂಬರ್‌ 7ಕ್ಕೆ ಬೆಳಗಾವಿಯ ಜವಾಹರಲಾಲ್‌ ನೆಹರು ವೈದ್ಯಕೀಯ ಕಾಲೇಜಿಗೆ ನೋಟಿಸ್‌ ಕಳುಹಿಸಿದೆ. ಈ ನೋಟಿಸ್‌ನಲ್ಲಿ 2008ರಿಂದ 2013ರ­ವರೆಗೆ ಪ್ರಥಮ ವರ್ಷದ ಎಂಬಿಬಿಎಸ್‌ ಕೋರ್ಸ್‌ಗೆ ದಾಖಲಾಗಿರುವ ಹೊರ­ರಾಜ್ಯ ವಿದ್ಯಾರ್ಥಿಗಳ ಸಂಪೂರ್ಣ ವಿವರ ಸಲ್ಲಿಸುವಂತೆ ಸೂಚಿಸಿದೆ.

ವಿದ್ಯಾರ್ಥಿಗಳು ಕಾಲೇಜಿಗೆ ದಾಖ­ಲಾದ ದಿನದಿಂದ ನಡೆದ ಎಲ್ಲ ಪರೀಕ್ಷೆ­ಗಳಲ್ಲಿ ಗಳಿಸಿರುವ ಅಂಕಗಳ ವಿವರ­ಗಳು, ಮೊಬೈಲ್‌ ದೂರವಾಣಿ ಸಂಖ್ಯೆ, ವೈದ್ಯಕೀಯ ಸೀಟುಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಹಿಂತಿರುಗಿಸಿದ ಸೀಟು­ಗಳನ್ನು ಪಡೆದಿರುವ ವಿದ್ಯಾರ್ಥಿ ವಿವರ, ನೋಂದಣಿ ಸಂಖ್ಯೆ, ಕಾಮೆಡ್‌–ಕೆ ರ್‍ಯಾಂಕ್‌ ಮತ್ತು ಕಾಲೇಜಿಗೆ ದಾಖಲಾ­ಗುವ ಸಂದರ್ಭದಲ್ಲಿ ನಡೆದ ಸಂದ­ರ್ಶನದ ವಿವರ ಸಲ್ಲಿಸಬೇಕು ಎಂದು ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT