ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮಾ ಭರಾಟೆ- `ಫ್ರೀಡಂ' ಮುಂದಿನ ವರ್ಷಕ್ಕೆ

Last Updated 30 ಜುಲೈ 2013, 19:59 IST
ಅಕ್ಷರ ಗಾತ್ರ

ಸುಮಾರು 100ಕ್ಕೂ ಹೆಚ್ಚು ಆ್ಯಡ್ ಸಿನಿಮಾಗಳನ್ನು ಮಾಡಿರುವ ವಿವೇಕ್ ಅಗ್ನಿಹೋತ್ರಿ ಸಿನಿಮಾ ನಿರ್ದೇಶಕರಾಗಿಯೂ ಜನಪ್ರಿಯರು. `ಚಾಕಲೇಟ್', `ಧನ್‌ಧನಾಧನ್ ಗೋಲ್', `ಹೇಟ್ ಸ್ಟೋರಿ' ಮುಂತಾದ ಸಿನಿಮಾಗಳನ್ನು ಮಾಡಿದ್ದಾರೆ.

ಇದೀಗ `ಫ್ರೀಡಂ' ಎನ್ನುವ ಸಿನಿಮಾ ನಿರ್ದೇಶಿಸಿರುವ ಇವರು ತಮ್ಮ ಚಿತ್ರವನ್ನು ಮುಂದಿನ ವರ್ಷ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈಗಾಗಲೇ ಶೂಟಿಂಗ್ ಮುಗಿದಿದ್ದು ಎಡಿಟಿಂಗ್ ಪ್ರಕ್ರಿಯೆ ನಡೆದಿದೆ.

`ಇತ್ತೀಚೆಗೆ ಲೆಕ್ಕವಿಲ್ಲದಷ್ಟು ಸಿನಿಮಾಗಳು ನಿರ್ಮಾಣವಾಗುತ್ತಿವೆ. ಇಷ್ಟೊಂದು ಸಿನಿಮಾಗಳ ಭರಾಟೆಯಲ್ಲಿ ನನ್ನ ಚಿತ್ರವನ್ನು ಬಿಡುಗಡೆ ಮಾಡಲು ಜಾಗ ಸಿಗುತ್ತಿಲ್ಲ. ಹೀಗಾಗಿ 2014ರಲ್ಲಿ `ಫ್ರೀಡಂ' ಚಿತ್ರವನ್ನು ಬಿಡುಗಡೆ ಮಾಡುತ್ತೇನೆ. ತರಾತುರಿಯಲ್ಲಿ ಸಿನಿಮಾ ಬಿಡುಗಡೆ ಮಾಡಿ ಉತ್ಕೃಷ್ಟವಾದ ಕಥೆಯನ್ನು ಹಾಳು ಮಾಡಲು ನಾನು ಸಿದ್ಧನಿಲ್ಲ' ಎಂದೂ ಅವರು ನುಡಿದಿದ್ದಾರೆ.

`ವಿಶೇಷ ಸಂದೇಶ ನೀಡುವ ಈ ಚಿತ್ರವನ್ನು ಉಳಿದ ಸಿನಿಮಾಗಳೊಂದಿಗೆ ಬಿಡುಗಡೆ ಮಾಡಿ ಹಾಳು ಮಾಡಲು ಇಚ್ಛಿಸುವುದಿಲ್ಲ. ಹೀಗಾಗಿ ನಾನು ಸರಿಯಾದ ಸಮಯಕ್ಕಾಗಿ ಕಾಯಲು ಸಿದ್ಧನಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT