ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಕ್ಷತೆಗೆ ಆದ್ಯತೆ ನೀಡಲು ಸಲಹೆ

ಚಂದಾಪುರದಲ್ಲಿ ವಿದ್ಯುತ್‌ ಸುರಕ್ಷತೆ ಜಾಗೃತಿ ಮಾಸಾಚರಣೆ
Last Updated 9 ಜನವರಿ 2014, 8:46 IST
ಅಕ್ಷರ ಗಾತ್ರ

ಆನೇಕಲ್‌: ವಿದ್ಯುತ್‌ ಅವಘಡಗಳು ಸಂಭವಿಸಿದಾಗ ದುರಸ್ತಿಗೆ ಮುಂದಾ ಗುವ ಲೈನ್‌ಮ್ಯಾನ್‌ಗಳು ತಮ್ಮ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಬೆಸ್ಕಾಂ ತಾಂತ್ರಿಕ ನಿರ್ದೇಶಕ ಡಾ. ಡಿ.ಟಿ.ನಾಗೇಶ್‌ ನುಡಿದರು.

ಚಂದಾಪುರದಲ್ಲಿ ವಿದ್ಯುತ್‌ ಸುರ ಕ್ಷತೆ ಜಾಗೃತಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಅವರು ಮಾತನಾಡಿದರು.

ಲೈನ್‌ಮ್ಯಾನ್‌ಗಳು  ಕೆಲಸದಲ್ಲಿ ತಮ್ಮ ಸುರಕ್ಷತೆಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಲಸದ ಸಮಯದಲ್ಲಿ ಕಂಬಗಳ ಮೇಲೆ ನಿಂತು ಮೊಬೈಲ್‌ ಬಳಕೆ ಮಾಡಬಾರದು. ಸಾರ್ವಜನಿಕರು ಲೈನ್‌ಗಳು ಹಾದು ಹೋಗಿರುವ ರಸ್ತೆಯಲ್ಲಿ ಎಚ್ಚರ ವಹಿಸಿ ಓಡಾ ಡಬೇಕು ಎಂದರು.ಶಾಸಕ ಬಿ.ಶಿವಣ್ಣ ಮಾತನಾಡಿ, ‘ಗ್ರಾಹಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಬೆಸ್ಕಾಂ ಅಧಿಕಾರಿಗಳು ಸುರಕ್ಷತಾ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಾರ್ವಜನಿ ಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು’ ಎಂದರು.

ಗ್ರಾಮಾಂತರ ವಲಯ ಎಂಜಿನಿ ಯರ್‌ ಬಿ.ಕೆ.ಉದಯ್‌ಕುಮಾರ್‌ ಮಾತನಾಡಿ, ‘ತಾಲ್ಲೂಕಿನಲ್ಲಿ ಕಳೆ ದೆರಡು ತಿಂಗಳಿನಲ್ಲಿ ವಿದ್ಯುತ್‌ ಅವ ಘಡಗಳಲ್ಲಿ ಮಕ್ಕಳು ಪ್ರಾಣ ಕಳೆದು ಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಇಂತಹ ಅವಘಡ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿ ಗಳಿಗೆ ಸೂಚಿಸಲಾಗಿದೆ’ ಎಂದರು.

ತಾ. ಪಂ. ಅಧ್ಯಕ್ಷ ಮುರಳಿಕೃಷ್ಣ, ಬೆಸ್ಕಾಂ ಅಧಿಕಾರಿಗಳಾದ ಎಂ.ನಾಗ ರಾಜು, ಶ್ರೀನಿವಾಸರೆಡ್ಡಿ, ನಾಗರಾಜ್‌, ವೆಂಕಟಶಿವಾರೆಡ್ಡಿ, ಸುಬ್ರಮಣ್ಯ, ವಿಜಯ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT