ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 7 ತಿಂಗಳ ಹಿಂದಿನ ಮಟ್ಟಕ್ಕೆ

Last Updated 9 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 211 ಅಂಶಗಳಷ್ಟು ಕುಸಿತ ಕಂಡಿದ್ದು 7 ತಿಂಗಳ ಹಿಂದಿನ ಮಟ್ಟವಾದ 18,226 ಅಂಶಗಳಿಗೆ ಇಳಿಕೆ ಕಂಡಿದೆ.

ವಿಪ್ರೊ ರೂ.11,882 ಕೋಟಿ ನಷ್ಟ
ವಿಪ್ರೊ ಕಂಪೆನಿ ತನ್ನ ಐ.ಟಿಯೇತರ ಮೂರು ವಿಭಾಗಗಳನ್ನು `ವಿಪ್ರೊ ಎಂಟರ್‌ಪ್ರೈಸಸ್' ಹೆಸರಿನಡಿ  ಪ್ರತ್ಯೇಕಿಸಿದೆ. ಇದರಿಂದ ಕಂಪೆನಿಯ ಷೇರು ಮೌಲ್ಯ ಮಂಗಳವಾರ `ಬಿಎಸ್‌ಇ'ಯಲ್ಲಿ ಶೇ 12ರಷ್ಟು ಕುಸಿತ ಕಂಡುರೂ.397ಕ್ಕೆ ಕುಸಿಯಿತು. ಒಂದೇ ದಿನದಲ್ಲಿ ಕಂಪೆನಿಯ ಮಾರುಕಟ್ಟೆ ಮೌಲ್ಯರೂ.11,882 ಕೋಟಿಯಷ್ಟು ಕುಸಿದುರೂ.98,551 ಕೋಟಿಗೆ ಇಳಿಯಿತು.

ಐ.ಟಿ ಸೇವಾ ವಲಯಕ್ಕೆ ಆದ್ಯತೆ ನೀಡಲು ಕಂಪೆನಿ, ಐ.ಟಿಯೇತರ ವಹಿವಾಟು ವಿಭಾಗಗಳಾದ ವಿಪ್ರೊ ಕಂಜ್ಯೂಮರ್ ಕೇರ್, ಇನ್‌ಫ್ರಾಸ್ಟ್ರಕ್ಚರ್, ಮತ್ತು ಮೆಡಿಕಲ್ ಘಟಕಗಳನ್ನು `ವಿಪ್ರೊ ಎಂಟರ್‌ಪ್ರೈಸಸ್ ಲಿಮಿಟೆಡ್' ಎಂದು ಪ್ರತ್ಯೇಕಿಸಿದೆ.  ಕಳೆದ ನವೆಂಬರ್‌ನಲ್ಲಿಯೇ ಕಂಪೆನಿಯ ಆಡಳಿತ ಮಂಡಳಿ ಇದಕ್ಕೆ ಒಪ್ಪಿಗೆ ನೀಡಿತ್ತು. ಮಾರ್ಚ್ 31ರಿಂದ ಇದು ಜಾರಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT