ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸೃದೃಢ ಆರೋಗ್ಯಕ್ಕೆ ಯೋಗ ಮದ್ದು'

Last Updated 6 ಡಿಸೆಂಬರ್ 2012, 8:50 IST
ಅಕ್ಷರ ಗಾತ್ರ

ಹಾಸನ: `ಬಾಲಮಂದಿರದ ಮಕ್ಕಳು ಅವಕಾಶಗಳಿಂದ ವಂಚಿತರಾಗಬಾ ರದು ಎಂಬ ಉದ್ದೆೀಶದಿಂದ ಅವರಿಗೆ ಎಲ್ಲ ಸೌಲಭ್ಯ ಒದಗಿಸಲಾಗುತ್ತಿದೆ' ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಗೀತಾ ನುಡಿದರು.

ನಗರದ ಬಾಲಕರ ಬಾಲಮಂದಿ ರದ ಮಕ್ಕಳಿಗಾಗಿ ಪ್ರೇರಣಾ ವಿಕಾಸ ವೇದಿಕೆ ಹಾಗೂ ವಿಜಯ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತಾಶ್ರ ಯದಲ್ಲಿ ಈಚೆಗೆ ಆಯೋಜಿಸಿದ್ದ `ಆನಂದಕ್ಕಾಗಿ ಯೋಗ' ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿಜಯ ಆಂಗ್ಲ ಮಾಧ್ಯಮ ಶಾಲೆಯ ಆಡಳಿತಾಧಿಕಾರಿ ತಾರಾ ಎಸ್. ಸ್ವಾಮಿ ಮಾತನಾಡಿ `ಯೋಗ ದೇಹದ ಆರೋಗ್ಯದ ಜೊತೆಗೆ ಮನಸ್ಸು, ಬುದ್ಧಿಯ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ. ನಮ್ಮಳಗಿರುವ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ಓದಿನಲ್ಲಿ ಶ್ರದ್ಧೆ ಮತ್ತು ಏಕಾಗ್ರತೆ ಮೂಡಿಸುತ್ತದೆ. ಮಕ್ಕಳು ಶಿಬಿರದ ಸದುಪಯೋಗ ಪಡೆದುಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು' ಎಂದರು.

ಪ್ರೇರಣಾ ವಿಕಾಸ ವೇದಿಕೆಯ ಸಂಚಾಲಕಿ ರೂಪ ಹಾಸನ, `ಬಾಲ ಮಂದಿರದ ಮಕ್ಕಳು ಇತರ ಮಕ್ಕಳಿಗಿಂತ ಕಡಿಮೆಯಿಲ್ಲ. ಸಿಕ್ಕ ಅವಕಾಶ ಮತ್ತು ಅನುಕೂಲಗಳನ್ನು ಬಳಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಯೋಗ- ಧ್ಯಾನದಂತಹ ಅಸ್ತ್ರಗಳು ಇದಕ್ಕೆ ಪೂರಕವಾಗುತ್ತವೆ' ಎಂದರು.

ಯೋಗ ಗುರು ಚೇತನ್ ಮಾರ್ಗ ದರ್ಶನದಲ್ಲಿ ಮಕ್ಕಳಿಗಾಗಿ ಹತ್ತು ದಿನಗಳ ಯೋಗ, ಧ್ಯಾನ, ಪ್ರಾಣಾ ಯಾಮ ಹಾಗೂ ನೈತಿಕ ಶಿಕ್ಷಣದ ತರಬೇತಿ ಶಿಬಿರ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT