ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇವಾವಧಿ ಕಾಯಂಗೊಳಿಸಿ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಗೆ 2009 ರಲ್ಲಿ ನೇಮಕಗೊಂಡ 2500 ಉಪನ್ಯಾಸಕರ ಕಾಯಂ ಪೂರ್ವ ಸೇವಾವಧಿ (ಪ್ರೊಬೆಷನರಿ) 2011ರ ಸೆಪ್ಟೆಂಬರ್‌ನಲ್ಲಿ ಘೋಷಣೆ ಮಾಡಬೇಕಾಗಿತ್ತು. ಆದರೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರ ಏಕಪಕ್ಷೀಯ ಮತ್ತು ಸರ್ವಾಧಿಕಾರಿ ನಿಲುವಿನಿಂದಾಗಿ ಪ್ರೊಬೆಷನರಿ ಅವಧಿ ಇದುವರೆಗೂ ಘೋಷಣೆಯಾಗಿಲ್ಲ.

ಅಧಿಕಾರ ವ್ಯಾಪ್ತಿ ಮೀರಿ ವರ್ತಿಸುತ್ತಿರುವ ಆಯುಕ್ತರು ಸರ್ಕಾರದ ಆದೇಶಗಳು ಮತ್ತು ಕೆ.ಸಿ.ಎಸ್.ಆರ್. ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ.

ಯಾವುದೇ ಲಿಖಿತ ಮಾಹಿತಿ ನೀಡದೆ, ಕಾನೂನು ಬಾಹಿರವಾಗಿ ಮೌಖಿಕ ಆದೇಶದ ಮೂಲಕ ಪ್ರೊಬೆಷನರಿ ಘೋಷಣೆಗೆ ಇಲಾಖೆಗೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಗಳನ್ನು ಹಿಂದಿರುಗಿಸಿದ್ದಾರೆ.

ಈ ಸಂದರ್ಭದಲ್ಲಿ ಉಪನ್ಯಾಸಕರುಗಳಿಗೆ ವರ್ಗಾವಣೆ ಸೇರಿದಂತೆ ಇತರೆ ಸರ್ಕಾರದ ಸೌಲಭ್ಯ ಸವಲತ್ತುಗಳು ಹಾಗೂ ಆಕಸ್ಮಿಕವಾಗಿ ಜೀವಹಾನಿ ಆದರೆ ಅವರ ಕುಟುಂಬದವರಿಗೆ ಅನುಕಂಪದ ಹುದ್ದೆಗಳು ದೊರೆಯದಂತಾಗುತ್ತದೆ.
ಶಿಕ್ಷಣ ಸಚಿವರು ನ್ಯಾಯ ದೊರಕಿಸಿಕೊಡಬೇಕು ಎಂದು ವಿನಂತಿಸುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT