ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ಅಸ್ವಸ್ಥ ಆನೆ ಸಾವು

Last Updated 25 ಏಪ್ರಿಲ್ 2013, 6:02 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣಕ್ಕೆ ಸಮೀಪದ ನಗರೂರು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆ ಮಂಗಳವಾರ ರಾತ್ರಿ ಮೃತಪಟ್ಟಿದೆ.
ಕಳೆದ ಕೆಲ ದಿನಗಳಿಂದ ಕಾಫಿ ತೋಟಗಳಲ್ಲಿ ಕಾಣಿಸಿಕೊಂಡು ಜನರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಕಾಡಾನೆ, ಮಂಗಳವಾರ ಕಾಫಿ ತೋಟದಲ್ಲಿ ಕುಸಿದು ಬಿದ್ದಿತ್ತು.

ಇದನ್ನು ಗಮನಿಸಿದ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರೂ ಅದರ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ಗಂಡಾನೆಗಳ ತಿವಿತಕ್ಕೆ ತುತ್ತಾಗಿದ್ದ ಹೆಣ್ಣಾನೆ ಕಳೆದ ಹಲವು ದಿನಗಳಿಂದ ಗುಂಪಿನಿಂದ ಬೇರ್ಪಟ್ಟು, ಗಾಯದ ನೋವು ತಾಳಲಾರದೇ ಕಂಡ ಕಂಡಲ್ಲಿ ಸುತ್ತುವುದರೊಂದಿಗೆ ಕಾರೆಕೊಪ್ಪ, ಕೆಂಚಮ್ಮನಬಾಣೆ ಹಾಗೂ ಬೇಳೂರು ಗ್ರಾಮಗಳಲ್ಲಿ ಬೀಡುಬಿಟ್ಟು ಗ್ರಾಮಸ್ಥರಲ್ಲಿ ಭಯದ ವಾತಾವರಣ ಮೂಡಿಸಿತ್ತು.

ಕಾಡಾನೆಯನ್ನು ಕಾಡಿಗಟ್ಟುವ ಪ್ರಯತ್ನವನ್ನು ಆರಣ್ಯ ಇಲಾಖೆ ಮಾಡಿದ್ದರೂ, ಆನೆ ತೋಟದಲ್ಲೇ ಬೀಡು ಬಿಟ್ಟತ್ತು.
ಡಿಎಫ್‌ಒ ಧನಂಜಯ್, ಎಸಿಎಫ್ ನಾಗರಾಜ್, ಸೋಮವಾರಪೇಟೆ ಆರ್‌ಎಫ್‌ಒ ಕಾರ್ಯಪ್ಪ ಸಮ್ಮಖದಲ್ಲಿ ಪಶುವೈದ್ಯಾಧಿಕಾರಿ ಉಮಾಶಂಕರ್ ಮರಣೋತ್ತರ ಪರೀಕ್ಷೆ ನಡೆಸಿದರು. ನಂತರ ಕಾಫಿ ತೋಟದಲ್ಲಿ ಹೂಳಲಾಯಿತು.

ಕಳವಿಗೆ ಯತ್ನ
ಕುಶಾಲನಗರ: ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೊನಿ ನಿವಾಸಿ ಲಿಂಗರಾಜ್ ಅವರ ಮನೆಯಲ್ಲಿ ಮಂಗಳವಾರ ರಾತ್ರಿ ಕಳವಿಗೆ ಯತ್ನ ನಡೆದಿರುವುದು ಪತ್ತೆಯಾಗಿದೆ.

ಮಂಗಳವಾರ ರಾತ್ರಿ ಕಾಫಿ ಕ್ಯೂರಿಂಗ್ ವರ್ಕ್ಸ್ ಉದ್ಯೋಗಿ ಲಿಂಗರಾಜ್ ಅವರ ಮನೆಯ ಹಿಂದಿನ ಬಾಗಿಲು ಒಡೆದು ಕಳ್ಳ ಒಳನುಗ್ಗಿರಬಹುದು ಎಂದು ಶಂಕಿಸಲಾಗಿದೆ. ಎರಡೂ ಬೀರುಗಲ್ಲಿದ್ದ ವಸ್ತು, ಕಾಗದಪತ್ರಗಳು ಚಲ್ಳಾಪಿಲ್ಲಿಯಾಗಿರುವುದು ಕಂಡು ಬಂದಿದೆ.

ಬುಧವಾರ ಬೆಳಿಗ್ಗೆ ಸ್ಥಳಕ್ಕಾಮಿಸಿರುವ ಕುಶಾಲನಗರ ಪೊಲೀಸ್ ಠಾಣೆ ಎಎಸ್‌ಐ ಶಿವಪ್ಪ, ಹಾಗೂ ಸಬ್ಬಂದಿಗಳಾದ ಟಿ.ಎಸ್. ಸಜಿ, ಚಂದ್ರು ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT